More

    ತಿಳಿವಳಿಕೆಯಿಲ್ಲದ ಪುಂಡರಿಂದ ಅನರ್ಥ ಸೃಷ್ಟಿ

    ರಿಪ್ಪನ್‌ಪೇಟೆ: ಒಬ್ಬ ಮುಸ್ಲಿಂ ಮುಸಲ್ಮಾನನಾಗಿಯೇ ಜೀವಿಸಿದಾಗ ಇಸ್ಲಾಂನ ಸಂದೇಶ ಅರ್ಥವಾಗುತ್ತದೆ. ಆದರೆ ಇತ್ತೀಚೆಗೆ ಕೆಲವು ತಿಳಿವಳಿಕೆಯಿಲ್ಲದ ಪುಂಡರಿಂದ ಅನರ್ಥವನ್ನು ಕಲ್ಪಿಸಲಾಗುತ್ತಿದೆ. ಪ್ರವಾದಿ ಮಹಮ್ಮದ್‌ರು ವಿಶ್ವ ಭ್ರಾತೃತ್ವ ಸಂದೇಶವನ್ನು ಬೋಧಿಸಿದ ಪರಿಣಾಮ ಧರ್ಮ ವಿಶ್ವ ಸಹೋದರತೆಯನ್ನು ಸಾರಿದೆ ಎಂದು ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಹೇಳಿದರು.

    ಪಟ್ಟಣದ ಜುಮ್ಮಾ ಮಸೀದಿ ಪ್ರಾಂಗಣದಲ್ಲಿ ನಾಲ್ಕು ದಿನಗಳಿಂದ ಆಚರಿಸಲಾಗುತ್ತಿದ್ದ ಪ್ರವಾದಿ ಮಹಮ್ಮದ್ ಪೈಗಂಬರ್‌ರ ಜಯಂತಿಯ ಸಮಾರೋಪ ಮೆರವಣಿಗೆಯಲ್ಲಿ ಮಾತನಾಡಿ, ಒಂದು ಇರುವೆಗೂ ಹಿಂಸೆ ಕೊಡಬೇಡ, ಕೊಲ್ಲಬೇಡ ಎಂದು ಧರ್ಮ ಹೇಳಿದೆ. ದೇಶದ ಮುಸಲ್ಮಾನರು ಒಂದು ಕೈಯಲ್ಲಿ ಖುರಾನ್, ಇನ್ನೊಂದು ಕೈಯಲ್ಲಿ ಸಂವಿಧಾನ ಹಿಡಿದಿರಬೇಕು. ಇತರ ಯಾವುದೇ ಧರ್ಮವನ್ನು ನಿಂದಿಸಿದರೆ ಅದು ಅಲ್ಲಾಹುನಿಗೆ ನಿಂದಿಸಿದಂತಾಗುತ್ತದೆ. ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ಮಾನವೀಯ ಧರ್ಮ ಮೆರೆಯಬೇಕಿದೆ. ಪೈಗಂಬರರ ಸಂದೇಶಗಳನ್ನು ಅನುಸರಿಸಿ, ಇತರರಿಗೆ ಹೇಳುವ ಮೂಲಕ ಧರ್ಮದ ಸತ್ವವನ್ನು ಅರಿಯಬೇಕೆಂದು ಹೇಳಿದರು.
    ಧರ್ಮಗುರುಗಳಾದ ಜಬ್ಬರ್ ಸಾಅದಿ, ಸೈಪುಲ್ಲಾ ಸಖಾಫಿ, ಅಸ್ಗರ್, ಇಸ್ಮಾಯಿಲ್ ಸಖಾಫಿ, ಮುಖಂಡರಾದ ಆಸೀಫ್, ಪ್ರಕಾಶ್ ಪಾಲೇಕರ್, ಆರ್.ಎ.ಚಾಬುಸಾಬು, ಆರ್.ಎನ್.ಮಂಜುನಾಥ, ಮಹಮ್ಮದ್ ರಫೀಕ್, ಫಾಜೀಲ್, ಹಸನಬ್ಬ, ಅಮೀರ್ ಹಂಜ, ಶಫಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts