More

    ವಿವಿಧ ಗ್ರಾಪಂಗಳಲ್ಲಿನ ಅವ್ಯವಹಾರ ತನಿಖೆ ನಡೆಸಿ

    ಮಾನ್ವಿ; ತಾಲೂಕಿನ ಮದ್ಲಾಪೂರ, ಭೋಗಾವತಿ, ಹಿರೇಕೊಟ್ಟೆಕಲ್, ಪೋತ್ನಾಳ ಹಾಗೂ ಚಿಕ್ಕಕೊಟ್ಟೆಕಲ್ ಗ್ರಾಪಂಗಳಲ್ಲಿ ನಡೆದ ಅವ್ಯವಹಾರಗಳನ್ನು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘಷರ್ ಸಮಿತಿ ಪದಾಧಿಕಾರಿಗಳು ತಾಪಂ ಇಒ ಎಂಡಿ ಸೈಯ್ಯದ್ ಪಟೇಲ್‌ಗೆ ಮನವಿ ಸಲ್ಲಿಸಿದರು.


    ಪಟ್ಟಣದ ತಾಪಂ ಅವರಣದಲ್ಲಿ ಬುಧವಾರ ಧರಣಿ ನಡೆಸಿದ ದಲಿತ ಮುಖಂಡರು ಮಾತನಾಡಿ, 2021- 22, ಮತ್ತು 2022-23ನೇ ಸಾಲಿನ 15ನೇ ಹಣಕಾಸು ಆಯೋಗದ ಬಿಡುಗಡೆಯಾದ ಅನುದಾನ ಕಾಮಗಾರಿ ನಡೆಸುವ ಬಗ್ಗೆ ಗ್ರಾಮ ಸಭೆ ಮಾಡಿಲ್ಲ. ಕ್ರಿಯಾ ಯೋಜನೆ ಮಾಡಿಕೊಂಡು ಗ್ರಾಪಂ ದುರಸ್ಥಿ, ವೈರಿಂಗ್, ಫ್ಯಾನ್ ಅಳವಡಿಕೆ, ಪರಿಕರ ಖರೀದಿ, ಘನ ತ್ಯಾಜ್ಯ ನಿರ್ವಹಣೆ, ಸಾಗಾಣಿಕೆ, ಕಾಮಗಾರಿಗಳ ಹೆಸರಿನಲ್ಲಿ ಅನುದಾನಗಳನ್ನು ಏಜೆನ್ಸಿಗಳ ಮಾಲೀಕರೊಂದಿಗೆ ಶಾಮೀಲಾಗಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಜಿಲ್ಲೆಯ ವಿವಿಧ ಗ್ರಾಪಂಗೆ ಉಪಚುನಾವಣೆ ಘೋಷಿಸಿದ ಜಿಲ್ಲಾಧಿಕಾರಿ


    ಗ್ರಾಪಂ ಅಧಿಕಾರಿಗಳು, ಕಾರ್ಯದರ್ಶಿ, ಜೆಇ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಅನುದಾನ ಪಡೆದುಕೊಂಡಿರುವ ಏಜೆನ್ಸಿ ಪರವಾನಿಗೆ ರದ್ದು ಮಾಡಬೇಕು. 20 ದಿನದೊಳಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಸದಾನಂದ ಪನ್ನೂರು, ರಾಜ್ಯ ಸಮಿತಿ ಸದಸ್ಯ ಡ್ಯಾನಿಯಲ್ ಕೊಲ್ಕಿ, ಮುಖಂಡರಾದ ದೇವರಾಜ ಚಿಕ್ಕಕೊಟ್ನೆಕಲ್, ಭೀಮಣ್ಣ ಮದ್ಲಾಪುರು, ಕೆ.ಎಮ್. ಲಾರೆನ್ಸ್, ಭಾಸ್ಕರ್, ಕುಮಾರ ಕಾತರಕಿ, ಹುಸೇನಪ್ಪ ಜಗ್ಲಿ, ಬಸವರಾಜ ಸುಂಕೇಶ್ವರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts