More

    ಕಾಲುವೆ ಸ್ವಚ್ಛಗೊಳಿಸಿದ ಚಿಕ್ಕನೀರಾವರಿ ಇಲಾಖೆ

    ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯಕ್ಕೆ ನೀರು ಹರಿದು ಬರುವ ಕಾಲುವೆಯಲ್ಲಿ ತುಂಬಿದ್ದ ಹೂಳನ್ನು ಚಿಕ್ಕನೀರಾವರಿ ಇಲಾಖೆಯವರು ಗುರುವಾರ ಸ್ವಚ್ಛಗೊಳಿಸುವ ಮೂಲಕ ಜಲಾಶಯಕ್ಕೆ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದರು.

    ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸನವಳ್ಳಿ ಜಲಾಶಯಕ್ಕೆ ಮುಂಡಗೋಡ ಹಾಗೂ ಶಿಗ್ಗಾಂವಿ ತಾಲೂಕಿನ ಗಡಿ ಭಾಗದಲ್ಲಿ ಮಳೆಯಾದರೆ ಮಾತ್ರ ನೀರು ಹರಿದು ಬರುತ್ತದೆ. ಹತ್ತಾರು ಕಿ.ಮೀ. ದೂರದಿಂದ ಅರಣ್ಯ ಮಾರ್ಗವಾಗಿ ಕಾಲುವೆ ಮೂಲಕ ನೀರು ಹರಿದು ಬರುತ್ತದೆ. ಆದರೆ, ಕಾಲುವೆಯ ಕೆಲವು ಕಡೆಗಳಲ್ಲಿ ಹೂಳು ತುಂಬಿ, ಒಣಗಿದ ಗಿಡಗಂಟಿಗಳು ಅಡ್ಡಲಾಗಿ ಬಿದ್ದ ಪರಿಣಾಮ ಎರಡು ದಿನಗಳಿಂದ ಜಲಾಶಯಕ್ಕೆ ಹರಿದು ಹೋಗಬೇಕಿದ್ದ ನೀರು ಅರಣ್ಯದಲ್ಲಿ ಹರಿಯುತ್ತಿತ್ತು.

    ಈ ಕುರಿತು ಸನವಳ್ಳಿ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಚಿಕ್ಕನೀರಾವರಿ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಬುಧವಾರ ಹಾಗೂ ಗುರುವಾರ ಕಾಲುವೆಯಲ್ಲಿನ ಹೂಳು ಹಾಗೂ ಅಡ್ಡಲಾಗಿ ಬಿದ್ದಿದ್ದ ಗಿಡ ಗಂಟಿಗಳನ್ನು ಸ್ವಚ್ಛ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts