More

    ಸುರಕ್ಷಿತ ಔಷಧೀಯ ಕ್ರಮ ಆಯುರ್ವೇದ

    ಶಿವಮೊಗ್ಗ: ಆಯುರ್ವೇದ ಪದ್ಧತಿ ಬಗ್ಗೆ ದೇಶದಲ್ಲಿ ಜಾಗೃತಿ ಮೂಡುತ್ತಿದೆ. ಕರೊನಾ ಅವಧಿಯಲ್ಲಿ ಆಯುರ್ವೇದ ದ ಪ್ರಾಮುಖ್ಯತೆ ಎಲ್ಲರ ಅನುಭವಕ್ಕೂ ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ವಿನಾಯಕ ನಗರ ನಿವಾಸಿಗಳ ಸಂಘ ಹಾಗೂ ನಿಸರ್ಗ ಸಂಜೀವಿನಿ ಸೋಷಿಯಲ್ ವೆಲ್​ಫೇರ್ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಆಯುರ್ವೇದಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಭಾರತೀಯ ಆಯುರ್ವೇದ ಪದ್ಧತಿಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನವಿದೆ ಎಂದರು.

    ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವಿನಾಯಕ ನಗರ ನಿವಾಸಿಗಳ ಸಂಘದ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿ, ವಿನಾಯಕ ನಗರ ನಿವಾಸಿಗಳ ಸಂಘದಿಂದ ಕಳೆದ 3 ವರ್ಷಗಳಿಂದ ಆರೋಗ್ಯ ತಪಾಸಣಾ ಶಿಬಿರ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿನ 400ಕ್ಕೂ ಹೆಚ್ಚು ನಿವಾಸಿಗಳಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಪ್ರತಿ ತಿಂಗಳು ಆಯುರ್ವೆದ ತಪಾಸಣಾ ಶಿಬಿರ ನಡೆಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.

    ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪಾಲಿಕೆ ಸದಸ್ಯೆ ಆರತಿ ಪ್ರಕಾಶ್, ವಿನಾಯಕ ನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಎಸ್.ಪಿ.ದಿನೇಶ್ ಶೇಟ್, ಪಾಲಿಕೆ ಮಾಜಿ ಸದಸ್ಯ ಸತೀಶ್, ಪ್ರಮುಖರಾದ ಪ್ರೇಮಾ ಆನಂದ್, ನವ್ಯಶ್ರೀ ನಾಗೇಶ್, ಡಾ. ಹರಿಕೃಷ್ಣನ್, ಡಾ. ಭೂಮಿಕಾ ರತ್ನಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts