More

    ಮೀನುಗಾರರ ಜತೆ ಸಚಿವ ಸಂವಾದ

    ಗುಂಡ್ಲುಪೇಟೆ: ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ತಾಲೂಕಿನ ಮೀನುಗಾರರ ಮುಖಂಡರ ಜತೆ ಸಂವಾದ ನಡೆಸಿದರು.
    ಸ್ಥಳಕ್ಕೆ ಆಗಮಿಸಿದ ಶಾಸಕ ಗಣೇಶ್‌ಪ್ರಸಾದ್ ಸಚಿವರಿಗೆ ಸಾಥ್ ನೀಡಿದರು. ತಾಲೂಕಿನಲ್ಲಿ ಉಪ್ಪಾರ ಸಮುದಾಯದವರೇ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು, ಅವರ ಜೀವನ ಕಷ್ಟಕರವಾಗಿದೆ. ತಾಲೂಕಿನಲ್ಲಿ 65 ಕೆರೆಗಳಿದ್ದು, ಅದರಲ್ಲಿ 23 ಕೆರೆಗಳಲ್ಲಿ ಮೀನುಗಾರಿಕೆ ನಡೆಯುತ್ತಿವೆ. ಉಳಿದ ಪಂಚಾಯಿತಿಗೆ ಸೇರಿದ ಏತ ನೀರಾವರಿ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಮೀನುಗಾರರು ಮನವಿ ಮಾಡಿದರು.
    ಇದಕ್ಕೆ ಉತ್ತರಿಸಿದ ಸಚಿವರು, ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಕೆಲಸ ನಮ್ಮದು, ಖಂಡಿತವಾಗಿ ಏತ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದರು.
    ಪ್ರಸ್ತುತ 6 ಕೆರೆಗಳಲ್ಲಿ ಮೀನುಗಾರಿಕೆ ನಡೆಯುತ್ತಿದ್ದು ಉಳಿದ ಕೆರೆಗಳಲ್ಲಿ ಜಾಲಿ ಗಿಡ ಬೆಳೆದು ಹೂಳು ತುಂಬಿವೆ. ಪ್ರತಿಯೊಂದು ಸಂಘಕ್ಕೂ 100ಗಿಂತ ಮೇಲ್ಪಟ್ಟ ಕೆರೆಗಳನ್ನು ನೀಡಿ ಮತ್ತು ಸರ್ಕಾರ ಪ್ರತಿ ಹೆಕ್ಟೇರ್‌ಗೆ 3000 ರೂ. ನಿಗದಿ ಮಾಡಲು ಹೊರಟಿರುವುದು ನಮಗೆ ಇನ್ನಷ್ಟು ಕಷ್ಟವಾಗಲಿದೆ. ಮೀನುಗಾರರಿಗೆ ಮನೆ, ತ್ರಿಚಕ್ರ ವಾಹನ, ಐಸ್ ಫ್ಯಾಕ್ಟರಿ ನಿರ್ಮಿಸಲು ಸೂಕ್ತ ಜಾಗ ಬೇಕೆಂಬ ಬೇಡಿಕೆ, ಅರಣ್ಯ ಇಲಾಖೆಯಿಂದ ಆದ ನೋವುಗಳನ್ನು ಸಚಿವರ ಜತೆ ಮೀನುಗಾರರ ಮುಖಂಡರು ಹಂಚಿಕೊಂಡರು.
    ಇದಕ್ಕೆ ಉತ್ತರಿಸಿದ ಸಚಿವರು, ಹೂಳು ಎತ್ತಲು ಸೂಚನೆ ನೀಡುವೆ. ಗುಂಡ್ಲುಪೇಟೆ ತಾಲೂಕಿಗೆ 15 ಮನೆಗಳನ್ನು ನೀಡುವೆ. ಪ್ರತಿ ಹೆಕ್ಟೇರ್‌ಗೆ 3000 ರೂ. ನಿಗದಿ ಮಾಡುವ ಬಗ್ಗೆ ಮಾತನಾಡುವೆ. ಐಸ್ ಫ್ಯಾಕ್ಟರಿ ಮಾಡಲು ಸೂಕ್ತ ಸ್ಥಳ ನೋಡಲು ಡಿಡಿ ಮಂಜೇಶ್‌ಗೆ ಸೂಚನೆ ನೀಡಿ ಯಳಂದೂರು ತಾಲೂಕಿನಲ್ಲಿ 10 ಗುಂಟೆ ಜಾಗ ಕಲ್ಪಿಸಿ ಸಬ್ಸಿಡಿಯನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಮಾಡಿ, ಮೀನುಗಾರರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ತಿಳಿಸಿದರು.
    ಗೋಪಿನಾಥಂನ ಕಾವೇರಿ ನದಿಯಲ್ಲಿ, ಚಾಮರಾಜನಗರ ಮತ್ತು ಯಳಂದೂರು ತಾಲೂಕಿನಲ್ಲಿ 7 ಮೀನುಗಾರಿಕೆ ಕೆರೆಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು, ಅಲ್ಲಿ ಮೀನುಗಾರರಿಗೆ ಯಾವುದೇ ಅವಕಾಶ ನೀಡದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ಸಂಬಂಧಪಟ್ಟ ಇಲಾಖೆಯ ಜತೆ ಮಾತನಾಡಿ ಬಗೆಹರಿಸಲು ತಿಳಿಸುವೆ ಎಂದು ತಿಳಿಸಿದರು.

    ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್‌ಕುಮಾರ್, ಜಂಟಿ ನಿರ್ದೇಶಕ ಗಣೇಶ್, ಉಪ ನಿರ್ದೇಶಕ ಮಂಜೇಶ್, ಸಹಾಯಕ ನಿರ್ದೇಶಕ ವಿವೇಕ್, ಪ್ರಶಾಂತ್ ಮತ್ತು ಮೀನುಗಾರರ ಮುಖಂಡರು ಇದ್ದರು.

    ಫೋಟೋ
    ಗುಂಡ್ಲುಪೇಟೆ ಪಟ್ಟಣದ ಮೀನುಗಾರಿಕೆ ಕಚೇರಿಯಲ್ಲಿ ಮಂಕಾಳ ವೈದ್ಯ ಮೀನುಗಾರರೊಂದಿಗೆ ಮಾತನಾಡಿದರು. ಗಣೇಶ್‌ಪ್ರಸಾದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts