More

    ನನ್ನ ಜತೆ ಸೆಲ್ಫಿ ಬೇಕೆಂದರೆ ನೂರು ರೂಪಾಯಿ ಡೆಪಾಸಿಟ್ ಮಾಡ್ಬೇಕು! ಮಧ್ಯ ಪ್ರದೇಶ ಸಚಿವರ ಹೊಸ ರೂಲ್ಸ್!

    ಭೋಪಾಲ್: ಸೆಲೆಬ್ರಿಟಿಗಳು, ರಾಜಕಾರಣಿಗಳ ಜತೆ ಜನ ಸಾಮಾನ್ಯರು ಸೆಲ್ಫಿ ತೆಗೆದುಕೊಳ್ಳಲು ಇಷ್ಟ ಪಡುತ್ತಾರೆ. ಅದಕ್ಕಾಗಿ ಮುಗಿ ಬೀಳುತ್ತಾರೆ ಕೂಡ. ಆದರೆ ಇನ್ನು ಮುಂದೆ ಮಧ್ಯ ಪ್ರದೇಶದ ಈ ಸಚಿವರ ಬಳಿ ನೀವು ಫೋಟೋಗಾಗಿ ಮುಗಿ ಬೀಳುವಂತಿಲ್ಲ. ಒಂದು ವೇಳೆ ಅವರ ಜತೆ ನಿಮಗೆ ಫೋಟೋ ಬೇಕು ಎನ್ನುವುದಾದರೆ ನೀವು 100 ರೂಪಾಯಿ ಡೆಪಾಸಿಟ್ ಮಾಡಬೇಕಾಗುತ್ತದೆ.

    ಮಧ್ಯ ಪ್ರದೇಶದ ಸಚಿವೆ ಉಷಾ ಠಾಕೂರ್ ಈ ರೀತಿ ಹೇಳಿದ್ದಾರೆ. ಅವರಿಗೆ ಯಾವುದೇ ಕಾರ್ಯಕ್ರಮಕ್ಕೆ ಹೋಗಬೇಕಾದರೂ ಜನರು ಫೋಟೋ, ಸೆಲ್ಫಿಗಾಗಿ ಮುಗಿಬೀಳುತ್ತಾರಂತೆ. ಇದರಿಂದಾಗಿ ಅವರು ಕಾರ್ಯಕ್ರಮಕ್ಕೆ ಹೋಗುವುದು ತಡವಾಗುತ್ತದೆಯಂತೆ. ಆ ಹಿನ್ನೆಲೆಯಲ್ಲಿ ಇನ್ನು ಮುಂದೆ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸುವವರು ಮೊದಲು ಸ್ಥಳೀಯ ಬಿಜೆಪಿ ನಿಧಿಗೆ 100 ರೂಪಾಯಿ ಹಾಕಬೇಕು ಎಂದು ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೆ, ಇನ್ನು ಮುಂದೆ ಅವರು ಯಾವುದೇ ಕಾರ್ಯಕ್ರಮಕ್ಕೆ ಬಂದರೆ ಹೂವಿನ ಬೊಕ್ಕೆಯನ್ನು ಕೊಡಬಾರದಂತೆ ಬದಲಾಗಿ ಪುಸ್ತಕವನ್ನು ಕೊಡಬೇಕಂತೆ. ಹೂವಿನಲ್ಲಿ ಲಕ್ಷ್ಮೀ ದೇವಿ ಇರುತ್ತಾಳೆ. ಲಕ್ಷ್ಮಿಯನ್ನು ವಿಷ್ಣುವಿಗೆ ಮಾತ್ರ ಕೊಡಬೇಕು. ಹಾಗಾಗಿ ನನಗೆ ಬೊಕ್ಕೆ ಕೊಡಬೇಡಿ. ಅದರಲ್ಲೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇ ಬೊಕ್ಕೆ ಬದಲು ಪುಸ್ತಕ ಕೊಡಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಇನ್ನು ಮುಂದೆ ಪುಸ್ತಕಗಳನ್ನು ಮಾತ್ರ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)

    ರಾಜ್ಯದಲ್ಲಿ ಇಳಿಕೆಯಾದ ಸೋಂಕು: ಇಂದು 1,708 ಜನರಲ್ಲಿ ಕರೊನಾ ಪತ್ತೆ

    ‘ನಾನು ಸಿಸಿಬಿ ಇನ್‌ಸ್ಪೆಕ್ಟರ್, 15 ಲಕ್ಷ ರೂ. ಕೊಟ್ಟರೆ ಕ್ಲೇಸ್ ಕ್ಲೋಸ್ ಮಾಡ್ತೇನೆ’ ಎಂದು ವಂಚಿಸಿದ್ದ ವ್ಯಕ್ತಿಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts