More

    ಸೈಬರ್ ವಂಚನೆ ತಡೆಯಲು ‘ಬ್ರೌಸ್ ಸೇಫ್​​ಗೆ ಸಚಿವ ಪ್ರಿಯಾಂಕ್ ಚಾಲನೆ

    ಬೆಂಗಳೂರು: ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಅಭಿವೃದ್ಧಿಪಡಿಸಿರುವ ‘ಬ್ರೌಸ್ ಸೇಫ್​​ಗೆ ಆನ್‌ಲೈನ್ ಸುರಕ್ಷತಾ ಸೇವೆಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ಚಾಲನೆ ನೀಡಿದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ನಡೆದ ಸಮಾರಂಭದಲ್ಲಿ ಸಚಿವರು ಈ ಸೇವೆಗೆ ಚಾಲನೆ ನೀಡಿದರು. ಇಂಥದ್ದೊಂದು ಸುರಕ್ಷತಾ ಸಾಧನ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

    ಬ್ರೌಸ್ ಸುರಕ್ಷಿತ ಸಾರ್ವಜನಿಕ ಡೊಮೈನ್ ನೇಮ್ ಸಿಸ್ಟಮ್ (ಡಿಎನ್‌ಎಸ್) ಸೇವೆಯನ್ನು ಸಿವೈ ಸೆಕ್ ಕೆ ಪ್ರಾರಂಭಿಸಿದೆ. ಇದು ಇಂಟರ್‌ನೆಟ್ ಬಳಕೆದಾರರನ್ನು ಸೈಬರ್ ದಾಳಿಕೋರರ ವೆಬ್‌ಗೆ ಬಲಿಯಾಗದಂತೆ ರಕ್ಷಿಸಲು ವೈಯಕ್ತಿಕ ಹಾಗೂ ಎಲ್ಲ ರೀತಿಯ ಬಳಕೆದಾರರಿಗೆ ರಕ್ಷಣಾತ್ಮಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

    ಬ್ರೌಸ್ ಸೇಫ್​​ಗೆ ಸೇವೆಯಲ್ಲಿ ಎರಡು ಪ್ರಾಥಮಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಒಂದು – ದುರುದ್ದೇಶಪೂರಿತ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವುದು (ಫಿಶಿಂಗ್ ಸೈಟ್, ಮಾಲ್‌ವೇರ್ ಅಥವಾ ವೈರಸ್‌ಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುವ ಸೈಟ್‌ಗಳು). ಎರಡು – ವಯಸ್ಕರ ವಿಡಿಯೋ ನಿರ್ಬಂಧಿಸುವ ಆಯ್ಕೆ ಹೊಂದಿದೆ. (ಆನ್‌ಲೈನ್‌ನಲ್ಲಿ ಅನ್ವೇಷಿಸುವಾಗ ತಮ್ಮ ಮಕ್ಕಳನ್ನು ರಕ್ಷಿಸಲು ಶ್ರಮಿಸುವ ಪೋಷಕರಿಗೆ ಇದು ಉತ್ತಮ ಸಾಧನವಾಗಿ ಕಾರ್ಯನಿರ್ವಹಿಸಲಿದೆ).

    ಪ್ರತಿಯೊಬ್ಬ ನಾಗರಿಕ ಈ ನೂತನ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್‌ಗಳು ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಸಾಕಷ್ಟು ಜನರು ವಂಚನೆಗೆ ಒಳಗಾಗುತ್ತಿದ್ದಾರೆ, ತಿಳಿದೋ ತಿಳಿಯದೆ ಕೆಲವು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವಾಗ ವಂಚನೆಗೆ ಗುರಿಯಾಗುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಹಾಗೂ ಡಿಜಿಟಲ್ ಸುರಕ್ಷತೆ ಹೊಂದಲು ಈ ಸಿಸ್ಟಮ್‌ನಲ್ಲಿ ಬಳಸುವುದು ಸೂಕ್ತ ಎಂದು ಸಚಿವರು ಸಲಹೆ ನೀಡಿದರು.

    ಇದೇ ವೇಳೆ ಸ್ಟಾರ್ಟಪ್‌ಗಳಿಗಾಗಿ ಆಯೋಜಿಸಿದ್ದ ಪಿಚ್ ಸ್ಪರ್ಧೆಯನ್ನು ವಿಜೇತರಾದ ಕಂಪನಿಗಳ ಪ್ರತಿನಿಧಿಗಳಿಗೆ ಬಹುಮಾನವನ್ನು ಸಚಿವರು ವಿತರಿಸಿದರು.

    ಕಾರ್ಯಕ್ರಮದಲ್ಲಿ ಸೈಬರ್ ಕ್ರೈಮ್ ಮತ್ತು ನಾರ್ಕೋಟಿಕ್ಸ್‌ನ ಎಡಿಜಿಪಿ ಡಾ. ಪ್ರಣಬ್ ಮೊಹಂತಿ, ಐಐಎಸ್ಸಿ ಪ್ರಾಧ್ಯಾಪಕ ಪ್ರೊ. ಅಶೋಕ್ ರಾಯಚೂರು ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts