More

    ತಾಲೂಕಿಗೆ ಸಚಿವ ಕೆ.ವೆಂಕಟೇಶ್ ಕೊಡುಗೆ ಅಪಾರ

    ರಾವಂದೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ ಸಚಿವ ಕೆ.ವೆಂಕಟೇಶ್ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಶ್ಲಾಘಿಸಿದರು.

    ಪಿರಿಯಾಪಟ್ಟಣ ತಾಲೂಕು ನೀಲಂಗಾಲ ಗ್ರಾಮದಲ್ಲಿ ಸಚಿವ ಕೆ.ವೆಂಕಟೇಶ್ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಯಾತ್ಯತೀತ ಮನೋಭಾವವುಳ್ಳ ಮಹಾನ್ ವ್ಯಕ್ತಿಯಾಗಿದ್ದು, ತಾಲೂಕಿಗೆ ಇವರ ಕೊಡುಗೆ ಅಪಾರವಾಗಿದೆ. ತಾಲೂಕಿನ ಅಭಿವೃದ್ಧಿಯ ಹಿತದೃಷ್ಠಿಯಿಂದ ಶಾಶ್ವತವಾದ ಹಲವಾರು ಯೋಜನೆಗಳನ್ನು ತರುವ ಮೂಲಕ ಜನಸಾಮಾನ್ಯರ ಮನಸ್ಸಿನ್ನು ಗೆದ್ದಿದ್ದಾರೆ ಎಂದರು.


    ಅವರು ಒಂದು ಜನಾಂಗಕ್ಕೆ ಸೀಮಿತವಾದ ವ್ಯಕ್ತಿಯಾಗದೆ, ಎಲ್ಲ ಜನಾಂಗದವರ ಪ್ರೀತಿ ವಿಶ್ವಾಸವನ್ನು ಗಳಿಸಿ ಪಕ್ಷಭೇದ ಮರೆತು ತಾಲೂಕಿನ ಅಭಿವೃದ್ಧಿಯ ಕಡೆ ಸದಾ ಯೋಚಿಸುವ ಮಹಾನ್ ವ್ಯಕ್ತಿಯಾಗಿದ್ದಾರೆ. ಇದೀಗ ಪಶುಸಂಗೋಪನೆ ಸಚಿವರಾಗಿ ರೈತರು ಮತ್ತು ಹೈನುಗಾರಿಕೆಗೆ ಹೊಸಹೊಸ ವಿಧಾನಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ. ಇವರ ಕನಸಿನ ಕೂಸಾದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಅತೀ ಶೀರ್ಘದಲ್ಲಿ ಕಾರ್ಯರೂಪಕ್ಕೆ ಬರಲಿ ಎಂದು ತಿಳಿಸಿದರು.

    ಕೆಪಿಸಿಸಿ ಸದಸ್ಯ ನಿತಿನ್‌ವೆಂಕಟೇಶ್ ಮಾತನಾಡಿ, ನಮ್ಮ ತಂದೆ ಯಾವುದೇ ಕಾರಣಕ್ಕೂ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ, ತಾಲೂಕಿನ ಜನರಿಗೆ ಉತ್ತಮ ಬದುಕು ನಡೆಸಲು ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನಿಷ್ಪಕ್ಷಪಾತವಾಗಿ ತಲುಪಿಸುತ್ತಿದ್ದಾರೆ. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇವರ ಅಧಿಕಾರವಧಿಯಲ್ಲಿ ಯಾವುದೇ ರೀತಿಯ ಗಲಭೆಗಳಿಗೆ ಅವಕಾಶ ನೀಡದೆ ಎಲ್ಲ ಜನಾಂಗದವರು ನೆಮ್ಮದಿಯ ಬದುಕು ನಡೆಸುವಂತೆ ಉತ್ತಮ ವಾತಾವರಣ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

    ಈ ಸಂಧರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಸ್.ಟಿ.ರಾಜಶೇಖರ್, ಎನ್.ಡಿ.ಅಪ್ಪಾಜಿಗೌಡ, ವಿ.ಜಿ.ಕೊಪ್ಪಲ್ ಲೋಕೇಶ್, ಚಂದ್ರೇಗೌಡ, ದೊರೆಕೆರೆ ಮಾದೇಗೌಡ, ಅಣ್ಣೇಗೌಡ, ಮಲ್ಲೇಶ್, ಕೃಷ್ಣಕುಮಾರ್, ವಿಜಿ, ಮೋದೇಶ್, ರಘುಗೌಡ, ಕೀರ್ತಿ, ಈಚೂರು ಲೋಕೇಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಸೋಮಯ್ಯ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಪದ್ಮಶ್ರೀ, ಸಚಿವರ ಆಪ್ತಕಾರ್ಯದರ್ಶಿ ಮಹೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts