More

    ಕಂಪನಕ್ಕೆ ಕಾರಣವಾದರೆ ಕಲ್ಲು ಕ್ವಾರಿಗಳು ಬಂದ್ ; ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

    ಚಿಕ್ಕಬಳ್ಳಾಪುರ: ಭೂಕಂಪನಕ್ಕೆ ಗಣಿಗಾರಿಕೆಯೇ ಕಾರಣ ಎಂಬುದು ದೃಢಪಟ್ಟರೆ ಕಲ್ಲು ಕ್ವಾರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಗುತ್ತದೆ. ಜನರ ಹಿತದೃಷ್ಟಿಯಿಂದ ಈ ನಿರ್ಧಾರದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

    ತಾಲೂಕಿನ ಭೂಕಂಪನ ಪೀಡಿತ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ವಿಜ್ಞಾನಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ತಾಲೂಕಿನ ವಿವಿಧೆಡೆ ಭೂಕಂಪನದ ಅನುಭವಕ್ಕೆ ಬಹುತೇಕ ಜನರು ಆತಂಕಗೊಂಡಿದ್ದಾರೆ. ವಿಪಕ್ಷದ ನಾಯಕರೂ ಸೇರಿ ಕೆಲವರು ಗಣಿಗಾರಿಕೆಯ ಕಾರಣದ ವಾತುಗಳನ್ನು ಹೇಳುತ್ತಿದ್ದಾರೆ. ಇದಕ್ಕೆ ಹಿರಿಯ ವಿಜ್ಞಾನಿಗಳಿಂದ ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಹಲವು ವರ್ಷಗಳ ಬಳಿಕ ಈ ಭಾಗಗಳಲ್ಲಿ ಪ್ರಸಕ್ತ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಸ್ಫೋಟದ ರೀತಿಯ ಸದ್ದು, ಭೂಕಂಪನದ ಅನುಭವವಾಗುತ್ತಿದೆ ಎಂದು ತಿಳಿಸಿದರು. ಕಲ್ಲು ಗಣಿಗಾರಿಕೆ ಕೇಂದ್ರಗಳಲ್ಲಿ ಭಾರಿ ಆಳದವರೆಗೆ ಸ್ಫೋಟ ನಡೆಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ನಿಯಮಗಳನ್ನು ಉಲ್ಲಂಸಿದವರ ಪರವಾನಗಿಯನ್ನು ಮುಲಾಜಿಲ್ಲದೆ ರದ್ದುಗೊಳಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆರ್.ಲತಾ, ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ, ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮತ್ತಿತರರು ಇದ್ದರು.

    ನೈಸರ್ಗಿಕ ಗಾಳಿಯ ಸಿಡಿತ ಕಾರಣ: ಅಂತರ್ಜಲ ಮಟ್ಟ ಹೆಚ್ಚಳದಿಂದ ಭೂಮಿಯ ಅಂತರಾಳದಲ್ಲಿ ನೈಸರ್ಗಿಕ ಗಾಳಿಯ ಸಿಡಿತವೇ ಕಂಪನಕ್ಕೆ ಕಾರಣ ಎಂಬುದಾಗಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ಪುನರುಚ್ಚರಿಸಿದ್ದಾರೆ. ಇತ್ತೀಚೆಗೆ ಸಂಭವಿಸಿದ ಭೂಕಂಪನ ಪೀಡಿತ ವಿವಿಧ ಪ್ರದೇಶಗಳಿಗೆ ತೆರಳಿ ಪರಿಶೀಲಿಸಿದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಎಸ್.ಜಗದೀಶ್ ಹಾಗೂ ರಮೇಶ್ ದಿಕ್ಪಾಲ್ ತಂಡವು ಸ್ಥಿತಿಗತಿಗಳ ಅಧ್ಯಯನ ನಡೆಸಿತು. ಚಿಕ್ಕಬಳ್ಳಾಪುರ ಶೆಟ್ಟಿಗೆರೆ ಮತ್ತು ಬಂಡಹಳ್ಳಿಯಲ್ಲಿ ಬಿರುಕು ಬಿಟ್ಟ ಮನೆಗಳು, ಶಬ್ದ ಕೇಳಿಸುವ ತಾಣ, ರಿಕ್ಟರ್ ವಾಪನದಲ್ಲಿ ದಾಖಲಾದ ಭೂಕಂಪನದ ಕೇಂದ್ರ ಬಿಂದು ಸ್ಥಳ ವೀಕ್ಷಿಸಿತು. ಬಳಿಕ ಈ ಭಾಗವು ಅತ್ಯಂತ ಸುರಕ್ಷಿತ ವಲಯ. ಇಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ತೀರಾ ವಿರಳ ಎಂದು ಹೇಳುವ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿತು.

    ಕರೊನಾ ನಿರ್ಬಂಧದ ಜಾರಿಯ ಸಂದರ್ಭದಲ್ಲಿ ಕಾಂಗ್ರೆಸ್ ಹಠಕ್ಕೆ ಬಿದ್ದು ಮೇಕೆದಾಟು ಪಾದಯಾತ್ರೆ ಕೈಗೊಂಡರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲರಿಗೂ ಕಾನೂನು ಒಂದೇ.
    ಡಾ ಕೆ.ಸುಧಾಕರ್, ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts