More

    ಅಂಚೆ ಕಚೇರಿಗೆ ಚಿಕ್ಕ-ಚೊಕ್ಕ ಕಟ್ಟಡ

    ಅವಿನಾಶ ಮೂಡಂಬಿಕಾನ
    ಬೆಂಗಳೂರು: ರಾಜ್ಯದಲ್ಲಿ ಅಂಚೆ ಇಲಾಖೆಗೆ ಕಚೇರಿಗಳ ಅಗತ್ಯವಿದೆ. ಆದರೆ, ಜಾಗವಿದ್ದರೂ ಕಚೇರಿ ಕಟ್ಟಡ ನಿಮಾಣಕ್ಕೆ ತಗುಲುವ ವೆಚ್ಚ ಹೆಚ್ಚಾಗುವುದರಿಂದ ಅನುದಾನದ ಕೊರತೆ ಎದುರಾಗುತ್ತಿತ್ತು. ಇದನ್ನು ಮನಗಂಡ ಕರ್ನಾಟಕ ಅಂಚೆ ಇಲಾಖೆ ಅತಿಕಡಿಮೆ ವೆಚ್ಚದಲ್ಲಿ ಬಹು ಬೇಗ ನಿರ್ವಿುಸಬಹುದಾದ ಸಣ್ಣ ಅಂಚೆ ಕಚೇರಿಯ ಕಟ್ಟಡ ಮಾದರಿ ತಯಾರಿಸಿ ಯಶಸ್ಸು ಕಂಡಿದೆ. 500 ಚದರ ಅಡಿ ಜಾಗದಲ್ಲಿ ಒಂದು ಸುಸಜ್ಜಿತ ಕಟ್ಟಡ ನಿರ್ವಿುಸಲು 45 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೂ ವೆಚ್ಚವಾಗುತ್ತಿತ್ತು. ಆದರೆ, ಸಣ್ಣ ಅಂಚೆ ಕಚೇರಿ ಕಟ್ಟಡ ನಿಮಾಣಕ್ಕೆ ಕೇವಲ 12 ಲಕ್ಷ ರೂ. ತಗುಲಲಿದೆ.

    10 ಕಚೇರಿ ನಿಮಾಣಕ್ಕೆ ಅನುದಾನ: ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ದೊಡ್ಡನೆಕ್ಕುಂದಿಯಲ್ಲಿ ಸಣ್ಣ ಅಂಚೆ ಕಚೇರಿ ಕಟ್ಟಡ ನಿರ್ವಿುಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಈ ಕಚೇರಿ ಉದ್ಘಾಟನೆ ಮಾಡಲಾಗಿದ್ದು, ಇದೀಗ ಇಲ್ಲಿ ಅಂಚೆ ಕೆಲಸ ಆರಂಭಿಸಲಾಗಿದೆ. ಅದೇ ಮಾದರಿಯಲ್ಲಿ ಈ ವರ್ಷ ರಾಜ್ಯದಲ್ಲಿ 10 ಅಂಚೆ ಕಚೇರಿಗಳ ನಿಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 7 ಕಚೇರಿ ನಿರ್ವಿುಸಲು ಒಪ್ಪಿಗೆಯೂ ಸಿಕ್ಕಿದೆ.

    ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ (ಐಐಎಸ್​ಸಿ) ತಜ್ಞರ ಸಲಹೆ ಪಡೆದುಕೊಂಡು ಅದರ ಪ್ರಕಾರ ಸಣ್ಣ ಅಂಚೆ ಕಚೇರಿ ನಿರ್ವಿುಸಲಾಗುತ್ತಿದೆ. ಇದು ಸಾರ್ವಜನಿಕರಿಗೆ ಸಹಕಾರಿಯಾಗಿದೆ.
    | ಎಸ್. ರಾಜೇಂದ್ರ ಕುಮಾರ್ ಪೋಸ್ಟ್ ಮಾಸ್ಟರ್ ಜನರಲ್, ಬೆಂಗಳೂರು ಹೆಡ್ ಕ್ವಾರ್ಟರ್ಸ್ ರೀಜನ್

    ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಹಾರೋಹಳ್ಳಿ ಹಾಗೂ ಸೂಲಿಬೆಲೆಯಲ್ಲಿ ಒಂದೊಂದು ಸಣ್ಣ ಅಂಚೆ ಕಚೇರಿ ನಿರ್ಮಾಣವಾಗಲಿದೆ. ಉಳಿದಂತೆ ದಕ್ಷಿಣ ಕರ್ನಾಟಕ ವಲಯ ಹಾಗೂ ಉತ್ತರ ಕರ್ನಾಟಕ ವಲಯಗಳಲ್ಲಿ ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಇದರಲ್ಲೂ ಸಣ್ಣ, ಮಧ್ಯಮ ಹಾಗೂ ದೊಡ್ಡ ಅಂಚೆ ಕಚೇರಿ ಎಂಬುದಾಗಿ ವಿಭಾಗಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಬೆಂಗಳೂರು ಅಂಚೆ ಮುಖ್ಯಕಾರ್ಯಾಲಯದ ರೀಜನಲ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಣ್ಣ ಅಂಚೆ ಕಚೇರಿ ಹೇಗಿರುತ್ತವೆ?: ಸಣ್ಣ ಅಂಚೆ ಕಚೇರಿಯು ಸುಂದರವಾದ ವಿನ್ಯಾಸ ಹೊಂದಿರುವುದಿಲ್ಲ. ಯಾವುದೇ ಬಗೆಯ ಅಲಂಕಾರಗಳು ಇರುವುದಿಲ್ಲ. ಆದರೆ, ಕಚೇರಿ ಸಿಬ್ಬಂದಿ ಕುಳಿತು ಕೆಲಸ ಮಾಡಲು ಬೇಕಾಗುವ ಎಲ್ಲ ಸೌಲಭ್ಯ ಹೊಂದಿರುತ್ತದೆ. ಚೈನ್ ಲಿಂಕ್ ಫೆನ್ಸಿಂಗ್ ಬಳಸಿ ಕಾಂಪೌಂಡ್ ನಿಮಾಣ ಮಾಡಲಾಗುತ್ತದೆ. ಜತೆಗೆ ಆರ್​ಸಿಸಿ ಬೀಮ್ ಆರ್​ಸಿಸಿ ಸ್ಲ್ಯಾಬ್​ಗಳನ್ನು ಹಾಕಿ ನಿರ್ವಿುಸುವುದರಿಂದ ಉತ್ತಮ ಗುಣಮಟ್ಟ ಹೊಂದಿರುತ್ತದೆ.

    5 ವರ್ಷಕ್ಕೆ ಒಂದು ಬಾರಿ ಪ್ರಸ್ತಾವನೆ: ಪ್ರತಿ ಐದು ವರ್ಷಕ್ಕೆ ಒಂದು ಬಾರಿ ಅಗತ್ಯವಿರುವ ಅಂಚೆ ಕಚೇರಿ ಕಟ್ಟಡಗಳ ನಿಮಾಣ ಸಂಖ್ಯೆ ಹಾಗೂ ಅದಕ್ಕೆ ತಗುಲುವ ವೆಚ್ಚವನ್ನು ಕೋರಿ ನೀತಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿತ್ತು. ಇಡೀ ದೇಶದಲ್ಲಿ 120 ಕಟ್ಟಡಗಳಿಗೆ ಅನುಮೋದನೆ ಸಿಕ್ಕರೆ ರಾಜ್ಯಕ್ಕೆ 10 ಸಿಗುತ್ತಿದ್ದವು. ವರ್ಷಕ್ಕೆ 1 ರಿಂದ 2 ಕಟ್ಟಡ ನಿಮಾಣಕ್ಕೆ ಮಾತ್ರ ಅವಕಾಶ ಸಿಗುತ್ತಿತ್ತು. ರಾಜ್ಯದಲ್ಲಿ ಅಂಚೆ ಕಚೇರಿ ಕಟ್ಟಡ ನಿಮಾಣಕ್ಕೆಂದು ಹಲವು ಕಡೆ ಜಾಗ ನಿಗದಿಪಡಿಸಲಾಗಿದೆ. ಆದರೆ, ನಿಮಾಣಕ್ಕೆ ಹೆಚ್ಚಿನ ವೆಚ್ಚವಾಗುವುದರಿಂದ ಕಟ್ಟಡ ನಿಮಾಣ ಸಾಧ್ಯವಾಗುತ್ತಿರಲಿಲ್ಲ. ಇದೀಗ ಈ ಸಣ್ಣ ಅಂಚೆ ಕಚೇರಿ ಯೋಜನೆಗಳ ಮೂಲಕ ಒಂದು ವರ್ಷದಲ್ಲೇ 10 ಕಟ್ಟಡಗಳಿಗೆ ಅವಕಾಶ ಸಿಕ್ಕಂತಾಗಿದೆ.

    ಇದನ್ನೂ ಓದಿಕರೊನಾ ಸೋಂಕಿಗೆ ಆಯುರ್ವೇದದಲ್ಲಿ ರಾಮಬಾಣ

    ರಾಜ್ಯದಲ್ಲಿವೆ 9 ಸಾವಿರ ಅಂಚೆ ಕಚೇರಿ: ರಾಜ್ಯದಲ್ಲಿ 9 ಸಾವಿರ ಅಂಚೆ ಕಚೇರಿಗಳಿದ್ದು, ಈ ಪೖಕಿ ಅಂಚೆ ಇಲಾಖೆ ವ್ಯಾಪ್ತಿಗೆ 1,800 ಕಚೇರಿಗಳು ಬರುತ್ತವೆ. ಇವು ಮುಖ್ಯ ಕಚೇರಿಗಳಾಗಿದ್ದು, ಇವುಗಳಿಗೆ ಮಾತ್ರ ಅಧಿಕ ವೆಚ್ಚದ ಕಟ್ಟಡಗಳನ್ನು ನಿರ್ವಿುಸಲಾಗುತ್ತದೆ. ಉಳಿದ ಕಚೇರಿಗಳು ಸಣ್ಣ ಮಟ್ಟದ್ದಾಗಿವೆ. ಅವುಗಳ ನಿರ್ವಹಣೆಗೆ ಸರ್ಕಾರ ಹಣ ನೀಡುತ್ತದೆ. ಅಂಚೆ ಇಲಾಖೆ ವ್ಯಾಪ್ತಿಗೆ ಬರುವ ಬಹುತೇಕ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ. ಇವುಗಳಿಗೆ ಸ್ವಂತ ಜಾಗ ಕಲ್ಪಿಸಲು ಈ ಯೋಜನೆ ಸಹಕಾರಿಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 500 ಕಚೇರಿಗಳಿಗೆ ನಿವೇಶನವಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts