More

    3 ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ: ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ ತರಹೇವಾರಿ ಸಿರಿಧಾನ್ಯ

    ಬೆಂಗಳೂರು: ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ’ಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ.

    ಮೇಳದಲ್ಲಿ ಅಂದಾಜು 300ಕ್ಕೂ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ತರಹೇವಾರಿ ಸಿರಿಧಾನ್ಯಗಳು ಗ್ರಾಹಕರನ್ನು ಕೈಬಿಸಿ ಕರೆಯುತ್ತಿವೆ. ಕರ್ನಾಟಕ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಣಿಪುರ, ಬಿಹಾರ ಸೇರಿ ದೇಶದ ವಿವಿಧ ರಾಜ್ಯಗಳಿಂದ ಸಿರಿಧಾನ್ಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮಳಿಗೆ ಸಿಬ್ಬಂದಿ ಸಿರಿಧಾನ್ಯ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುತ್ತಿರುವುದು ಮೇಳದಲ್ಲಿ ಕಂಡಬಂತು. ಸಿರಿಧಾನ್ಯಗಳಿಂದ ರಾಶಿಪೂಜೆ ಆಲಂಕರಿಸಲಾಗಿತ್ತು. ನೋಡುಗರನ್ನು ಇದು ಸೆಳೆಯುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಮೇಳಕ್ಕೆ ಆಗಮಿಸಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಖರೀದಿಸುತ್ತಿದ್ದರು. ನೈಸರ್ಗಿಕ ಅಡುಗೆ ಎಣ್ಣೆ ತಯಾರಿಸುವ ಎತ್ತಿನ ಗಾಣ ಮೇಳದಲ್ಲಿ ಆಕರ್ಷಣೆ ಕೇಂದ್ರವಾಗಿದೆ. ವಿದ್ಯಾರ್ಧಿಗಳು ಸೇರಿ ಜನರು ಮಳಿಗೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

    3 ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ: ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ ತರಹೇವಾರಿ ಸಿರಿಧಾನ್ಯ

    ಸಿಎಂ ಬಸವರಾಜ ಬೊಮ್ಮಾಯಿ ಮೇಳ ಉದ್ಘಾಟಿಸಿ ಮಾತನಾಡಿ, ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕಾಗಿ ಕೃವಿ ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆ ನಡೆಸಲು ಮುಂದಾಗಬೇಕಿದೆ. ಕೃಷಿ ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆ ಮೂಲಕ ಕೃಷಿ ಕ್ಷೇತ್ರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಹಳೆಯ ಸಂಶೋಧನೆ ಮಾದರಿ ಬದಲು ಆಧುನಿಕ ತಂತ್ರಜ್ಞಾನ ಅಳವಡಿಸಿ ಸಂಶೋಧನೆ ನಡೆಸಬೇಕು. ಅತಿಯಾದ ನೀರಿನ ಬಳಕೆ, ಹವಾಮಾನ ವೈಪರಿತ್ಯ ಹಾಗೂ ರಾಸಾಯನಿಕ ಬಳಕೆಯಿಂದ ಬೆಳೆಗಳ ಮೇಲೆ ದುಷ್ಪಾರಿಣಮ ಬೀರುತ್ತಿದೆ. ಹಾಗಾಗಿ, ಕೃಷಿ ವಿವಿಗಳು ರೈತರ ಜಮೀನುಗಳನ್ನು ಕ್ಯಾಂಪಸ್ ಮಾಡಿಕೊಂಡು ಸಂಶೋಧನೆ ನಡೆಸಬೇಕು. ಗುಣಮಟ್ಟ ಬೀಜ, ಸಾವಯವ ಕೃಷಿ ಸೇರಿ ಪ್ರಮುಖ ಸಲಹೆಗಳನ್ನು ರೈತರಿಗೆ ನೀಡಬೇಕು ಎಂದರು.

    ಹಿಂದೆ ಕೃಷಿ ಕೇವಲ ಆಹಾರ ಉತ್ಪಾದನೆಗೆ ಮಾತ್ರ ಮಾಡಲಾಗುತ್ತಿತ್ತು. ಈಗ ವಾಣಿಜ್ಯ ಉದ್ದೇಶಕ್ಕೆ ಕೃಷಿ ಮಾಡಲಾಗುತ್ತಿದೆ. ಆಹಾರ ಧಾನ್ಯ ಉತ್ಪಾದನೆ ಹಾಗೂ ವಾಣಿಜ್ಯ ಬೆಳೆಗಳ ನಡುವೆ ಸಾಮ್ಯತೆ ಕಾಯ್ದುಕೊಳ್ಳದಿದ್ದರೆ ಕೃಷಿ ಸಮತೋಲನ ತಪ್ಪುತ್ತದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ. ಎರಡು ವರ್ಷದಿಂದ ಅಡಿಕೆ ಉತ್ಪಾದನೆ ಹೆಚ್ಚಾಗಿದೆ. ಭತ್ತ ಮತ್ತು ಜೋಳವನ್ನು ಅನ್ನಭಾಗ್ಯ ಯೋಜನೆಯಡಿ ಲಾನುಭವಿಗಳಿಗೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಆ ಬೆಳೆ ಬೆಳೆದ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಅದೇರೀತಿ, ನಮ್ಮ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುತ್ತಿರುವದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಸಿಎಂ ವಿವರಿಸಿದರು.

    3 ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ: ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ ತರಹೇವಾರಿ ಸಿರಿಧಾನ್ಯ

    ಹೆಚ್ಚು ಪ್ರಾತಿನಿಧ್ಯತೆ:
    ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ. ಈ ವರ್ಷ ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ ಎಂದು ಘೋಷಣೆ ಮಾಡಿದ್ದರಿಂದ ರಾಜ್ಯದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಸಿರಿಧಾನ್ಯ ಬೆಳೆಗೆ ನಮ್ಮ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ಕೃಷಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗಬೇಕಿದೆ. ಪರಿಣಾಮಕಾರಿಯಾಗಿ ಕೃಷಿ ಕ್ಷೇತ್ರವನ್ನು ಸನ್ನದ್ದಗೊಳಿಸಬೇಕಿದೆ. ಕೃಷಿ ವಿವಿಗಳು ಇದಕ್ಕೆ ಸಿದ್ಧವಾಗಬೇಕಿದೆ. ಹವಾಮಾನ ಬದಲಾವಣೆ, ಹೆಚ್ಚು ನೀರು ಬಳಕೆ, ಭೂಮಿ ಮೆಲೆ ರಾಸಾಯನಿಕದಿಂದ ಆಗುತ್ತಿರುವ ಸಮಸ್ಯ, ಕಳಪೆ ಹಾಗೂ ನಕಲಿ ಬೀಜ ಮಾರಾಟ ತಡೆಗೆ ವಿಶ್ವ ವಿದ್ಯಾಲಯಗಳು ಕ್ರಮ ಕೈಗೊಳ್ಳಬೇಕು. ವಿದೇಶಗಳಲ್ಲಿ ಮುಂದಿನ ವರ್ಷದ ಋತುಮಾನದಲ್ಲಿ ಎಷ್ಟು ಮಳೆ ಬೀಳುವುದು, ಬಿತ್ತನೆ, ಉತ್ಪಾದನೆ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಮಾರುಕಟ್ಟೆ ಆಧಾರಿಸಿ ವರದಿ ಸಿದ್ಧಪಡಿಸುತ್ತಾರೆ. ಅದೇರೀತಿ ಕೃಷಿ ಇಲಾಖೆ ಮತ್ತು ಕೃಷಿ ಬೆಲೆ ಆಯೋಗ ಕಾರ್ಯನಿರ್ವಹಿಸಬೇಕು. ಒಂದು ವಾರದಲ್ಲಿ ರೈತ ಶಕ್ತಿ ಯೊಜನೆಯನ್ನು ಜಾರಿಗೆ ತರಲಾಗುವುದು ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.

    ಕೇಂದ್ರದ ಸಚಿವರಾದ ಕೈಲಾಸ್‌ನಾಥ್ ಚೌದರಿ, ಶೋಭಾ ಕರಂದ್ಲಾಜೆ, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್, ರಾಜ್ಯದ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಎಂಎಲ್ಸಿಗಳಾದ ಟಿ.ಎ. ಶರವಣ, ಅ.ದೇವೇಗೌಡ, ಛಲವಾದಿ ನಾರಾಯಣಸ್ವಾಮಿ ಮತ್ತಿತರರಿದ್ದರು.

    3 ದಿನಗಳ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಚಾಲನೆ: ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ ತರಹೇವಾರಿ ಸಿರಿಧಾನ್ಯ

    ಸಿರಿಧಾನ್ಯ ಬೆಳೆಯುವ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ಪ್ರೋತ್ಸಾಹ ಧನವನ್ನು ನಮ್ಮ ಸರ್ಕಾರ ನೀಡುತ್ತಿದೆ.ಹಿಂದೆ ಸಿರಿಧಾನ್ಯವೆಂದರೆ ಬಡವರ ಆಹಾರವಾಗಿತ್ತು. ಈಗ ಸಿರಿವಂತರ ಆಹಾರವೂ ಆಗಿದೆ. ಆರೋಗ್ಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುತ್ತಿರುವುದು ಪ್ರಮುಖ ಕಾರಣ. ಸಿರಿಧಾನ್ಯ ತಿಂದವರು ಶಕ್ತಿವಂತರಾಗುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಸೇವಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅವಕಾಶ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ.

    | ಬಿ.ಸಿ.ಪಾಟೀಲ್. ಕೃಷಿ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts