More

    ಬೈಕ್​ನ 4 ಅಡಿ ದೂರದಲ್ಲಿ ನಿಂತ್ರೆ ಹಾಲು ಬರುತ್ತೆ ..!​

    ಕರೊನಾ ಸೋಂಕು ನಮ್ಮ ಬಳಿ ಸುಳಿಯಬಾರದು ಎಂದರೆ ಮೊದಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುತ್ತಿದೆ ವೈದ್ಯಲೋಕ. ಈ ನಿಟ್ಟಿನಲ್ಲಿ ಇಡೀ ಜಗತ್ತೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದರೂ ಹಲವರು ನಿಯಮ ಉಲ್ಲಂಘಿಸಿ ಆತಂಕ ಸೃಷ್ಟಿಸುತ್ತಿದ್ದಾರೆ. ಇಂತಹವರ ನಡುವೆಯೂ ಬೈಕ್​ನಲ್ಲಿ ಹಾಲು ಮಾರುವ ರೈತನೊಬ್ಬ ಅಂತರದ ಪಾಠ ಕಲಿಕೆಗೆ ಮಾದರಿ ಎನಿಸಿದ್ದಾನೆ. ಈತನ ಫೋಟೋವನ್ನು ಖುದ್ದು ಐಎಎಸ್​ ಅಧಿಕಾರಿಯೊಬ್ಬರು ಟ್ವಿಟರ್​ನಲ್ಲಿ ಅಪ್ಲೋಡ್​ ಮಾಡಿಕೊಂಡಿದ್ದು, ರೈತನ ಸೃಜನಶೀಲತೆ ಕಂಡು ಅಧಿಕಾರಿಗಳಾದಿಯಾಗಿ, ನೆಟ್ಟಿಗರೂ ಬೆರಗಾಗಿದ್ದಾರೆ.

    ರಾಸುಗಳಿಂದ ನಿತ್ಯ ಹಾಲು ಕರೆದು ಬೈಕ್​ನಲ್ಲಿ ಮಾರಾಟ ಮಾಡುತ್ತಿರುವ ರೈತ ಮೂರ್ನಾಲ್ಕು ಅಡಿ ದೂರದಲ್ಲೇ ಗ್ರಾಹಕರ ಪಾತ್ರೆಗೆ ಹಾಲು ಸೇರುವಂತೆ ತಂತ್ರ ಕಂಡುಕೊಂಡಿದ್ದಾನೆ. ಬೈಕ್​ನ ಎರಡೂ ಬದಿ ಒಟ್ಟು 4 ಹಾಲಿನ ಕ್ಯಾನ್​ಗಳಿದ್ದು, ಹಿಂಬದಿ ಸೀಟಿನ ಮೇಲೆ ಮೂರ್ನಾಲ್ಕು ಅಡಿ ಉದ್ದದ ಪೈಪ್​ ಹಿಮ್ಮುಖವಾಗಿದೆ. ರೈತನು ಹಾಲು ಅಳೆದು ಕೊಳವೆಗೆ ಸುರಿಯುತ್ತಿದ್ದಂತೆ ಪೈಪ್​ ಮೂಲಕ ಗ್ರಾಹಕರ ಪಾತ್ರೆ ಸೇರುತ್ತದೆ. ಹಾಲು ಬೇಕಿದ್ದವರು ಈ ಪೈಪ್​ನ ತುದಿಯಲ್ಲಿ ಪಾತ್ರೆ ಹಿಡಿದು ನಿಲ್ಲಲೇಬೇಕು. ಇದು ಈ ರೈತನ ರೂಲ್ಸ್.

    ಇದನ್ನೂ ಓದಿ ಊಟಕ್ಕೆ ಸಿದ್ಧರಾಗಿ ‘ಅಂಬೆಗಾಲಿಡುವ ಬಾಣಸಿಗ’ ಬಂದಿದ್ದಾನೆ!

    ಬಹುತೇಕ ಅಂಗಡಿ ಮಾಲೀಕರು- ಗ್ರಾಹಕರು ಪೊಲೀಸರಿಗಾಗಿ ಅಂತರ ಎಂಬಂತೆ ವರ್ತಿಸುವುದನ್ನೂ ಕಂಡಿದ್ದೇವೆ. ಇಂತಹವರ ನಡುವೆ ವಿಭಿನ್ನವಾಗಿ ನಿಲ್ಲುವ ಈ ರೈತ ಕೈಗವಸು, ಮಾಸ್ಕ್​, ಎಲ್ಮೆಟ್​ ಧರಿಸಿಯೇ ಹಾಲು ಮಾರಲು ಬೈಕ್​ ಏರೋದು. ಈತನ ಫೋಟೋವನ್ನು ಟ್ವಿಟರ್​ನಲ್ಲಿ ಹಾಕಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್, “ಭಾರತದ ಜುಗಾಡ್” ಎಂದು ಟ್ಯಾಗ್​ಲೈನ್​ ಕೊಟ್ಟಿದ್ದಾರೆ. ಸೃಜನಶೀಲತೆ ಇದಲ್ಲಿ ಕನಿಷ್ಠ ಸೌಲಭ್ಯದಲ್ಲೇ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈತನೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜುಗಾಡ್​ನ ಫೋಟೋವನ್ನು ಇತರ ಐಎಎಸ್​ ಅಧಿಕಾರಿಗಳೂ ಶೇರ್​ ಮಾಡಿಕೊಂಡಿದ್ದು, ಸಾಮಾಜಿಕ ಅಂತರ ಕಾಪಾಡಲು ಇಚ್ಛಾಶಕ್ತಿ ಇರಬೇಕು. ಹಾಲು ಮಾರುವ ವ್ಯಕ್ತಿಯನ್ನು ನೋಡಿ ಇತರರು ಕಲಿಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ವೈದ್ಯರಿಗೆ ನೋ ಎಂಟ್ರಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts