More

    15 ವರ್ಷಗಳ ಬಳಿಕ ಬಾಕ್ಸಿಂಗ್ ರಿಂಗ್‌ಗೆ ಮರಳಿದ ಮೈಕ್ ಟೈಸನ್, ಕಾರಣವೇನು ಗೊತ್ತೇ?

    ಲಾಸ್ ಏಂಜಲಿಸ್: ಅಮೆರಿಕದ ಹೆವಿವೇಟ್ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ 15 ವರ್ಷಗಳ ಬಳಿಕ ರಿಂಗ್‌ಗೆ ಮರಳಿದ್ದು, ಗತಕಾಲದ ಆಕ್ರಮಣಕಾರಿ ಆಟದ ಝಲಕ್ ಅನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ರಾಯ್ ಜೋನ್ಸ್ ಜೂನಿಯರ್ ವಿರುದ್ಧ ಶನಿವಾರ ನಡೆದ ಪ್ರದರ್ಶನ ಪಂದ್ಯದಲ್ಲಿ 54 ವರ್ಷದ ಮೈಕ್ ಟೈಸನ್ ಡ್ರಾ ಸಾಧಿಸಿದರು.

    ಟೈಸನ್ ಮತ್ತು 51 ವರ್ಷದ ರಾಯ್ ಜೋನ್ಸ್ ನಡುವೆ 2 ನಿಮಿಷಗಳ 8 ಸುತ್ತುಗಳಲ್ಲಿ ಪಂದ್ಯ ನಡೆಯಿತು. ಡಬ್ಲ್ಯುಬಿಸಿ ತೀರ್ಪುಗಾರರು ಅಂತಿಮವಾಗಿ ಪಂದ್ಯವನ್ನು ಸಮಬಲದಲ್ಲಿ ಅಂತ್ಯಗೊಳಿಸಿದರು. ವಿವಿಧ ದತ್ತಿನಿಧಿಗೆ ಹಣ ಸಂಗ್ರಹಿಸುವ ಸಲುವಾಗಿ ಈ ಪಂದ್ಯವನ್ನು ಆಯೋಜಿಸಲಾಗಿತ್ತು.

    ‘ಈ ಪಂದ್ಯ ಚಾಂಪಿಯನ್‌ಷಿಪ್‌ಗಿಂತ ಉತ್ತಮವಾಗಿತ್ತು. ನಾವು ಮಾನವಹಿತ ಪ್ರತಿಪಾದಕರು. ನಾವು ಜಗತ್ತಿಗೆ ಒಳಿತು ಮಾಡಲು ಬಯಸಿದ್ದೇವೆ. ಇದಕ್ಕಾಗಿ ಮತ್ತೊಮ್ಮೆ ಕಾದಾಡಲು ಸಿದ್ಧರಿದ್ದೇವೆ’ ಎಂದು 4 ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಟೈಸನ್ ಪಂದ್ಯದ ಬಳಿಕ ಹೇಳಿದರು. ಟೈಸನ್ 2005ರಲ್ಲಿ ವೃತ್ತಿಪರ ಬಾಕ್ಸಿಂಗ್‌ನಿಂದ ನಿವೃತ್ತಿ ಹೊಂದಿದ್ದರು.

    ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts