More

    ಛತ್ತೀಸಗಢ ವಲಸಿಗರಿಗೆ ವಿಮಾನಯಾನಕ್ಕೆ ಸಹಾಯ ಮಾಡಿದ ವಕೀಲರು

    ಬೆಂಗಳೂರು: ಲಾಕ್​​ಡೌನ್​​ನಿಂದಾಗಿ ಸಿಲುಕಿರುವ 180 ವಲಸಿಗರ ತಂಡ ಛತ್ತೀಸಗಢಕ್ಕೆ ಹೋಗಲು ಗುರುವಾರ ಇಲ್ಲಿಯ ವಕೀಲರ ತಂಡ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ವಿಮಾನ ವ್ಯವಸ್ಥೆ ಕಲ್ಪಿಸಿದ್ದವು.
    ಇವರೆಲ್ಲರ ಸಹಾಯದಿಂದ ವಲಸಿಗರು ಬೆಂಗಳೂರಿನಿಂದ ಛತ್ತಿಸಗಢಕ್ಕೆ ಗುರುವಾರ ಬೆಳಿಗ್ಗೆ 8 ಗಂಟೆಗೆ ವಿಮಾನಯಾನ ಆರಂಭಿಸಿದರು. ಅರಮನೆ ಮೈದಾನದಲ್ಲಿರುವ ಟೆನಿಸ್ ಮೈದಾನದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ವಲಸಿಗರು ಬಸ್‌ ಹತ್ತಿದರು, ಅವರು ಹಾಸನ, ತುಮಕೂರು ಮತ್ತು ಕೆಂಗೇರಿಯಿಂದ ಬಂದು ಟೆನಿಸ್ ಪೆವಿಲಿಯನ್‌ನಲ್ಲಿ ಒಟ್ಟುಗೂಡಿದ್ದರು. ಅವರಲ್ಲಿ ಅಂದಾಜು 36 ಜನ ಎರಡು ವಾರಗಳಿಂದ ಬೆಂಗಳೂರಿನಲ್ಲಿಯೇ ಸಿಲುಕಿಕೊಂಡಿದ್ದರು.
    ಅವರು ರೈಲು ವ್ಯವಸ್ಥೆಗಾಗಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು, ಹಲವು ಸಲ ಭೇಟಿ ನೀಡಿದ್ದರೂ ಅದು ಫಲಕಾರಿಯಾಗಲಿಲ್ಲ. ಛತ್ತೀಸ್‌ಗಢಕ್ಕೆ ಹೋಗಲು ಶ್ರಮಿಕ್ ರೈಲು ಸೌಲಭ್ಯ ಪಡೆಯುವಲ್ಲಿ ಅವರು ಮಾಡಿದ ಪ್ರಯತ್ನಗಳು ಫಲಿಸಿರಲಿಲ್ಲ.

    ಇದನ್ನೂ ಓದಿ: ಗರ್ಭಿಣಿ ಆನೆ ಸಾವು : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೇಂದ್ರ ಭರವಸೆ

    ಅಂತಿಮವಾಗಿ ಅಜಯ್ ಬೆಹ್ಲ್ ನೇತೃತ್ವದ ಸಮಾಜಸೇವಕ ವಕೀಲರ ತಂಡದ ಸಹಾಯದಿಂದ ಇದು ಸಾಧ್ಯವಾಯಿತು. ಇದಕ್ಕೆ ಎನ್​​ಎಲ್​​ಎಸ್​​ಯುಐ ಹಳೆಯ ವಿದ್ಯಾರ್ಥಿಗಳ ತಂಡ ಹಾಗೂ ವಿವಿಧ ಸ್ವಯಂ ಸೇವಕರ ತಂಡದ ಬೆಂಬಲವೂ ಸಿಕ್ಕಿತು. ವಲಸಿಗರ ಸಂಚಾರಕ್ಕೆ ಇವರೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದರು.
    ಮರ್ಸಿ ಮಿಷನ್, ಯುನೈಟೆಡ್ ಸಿಖ್ಸ್, ಬೆಂಗಳೂರು ಮೀಡಿಯಾ ಫೌಂಡೇಶನ್ ಮತ್ತು ಹಲವಾರು ಸ್ವಯಂಸೇವಕರು ವಲಸರಿಗ ಸಂಚಾರಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದರು.ವಲಸಿಗರ ಸಂಚಾರಕ್ಕೆ ಸಹಾಯ ಮಾಡಿದವರ ಪೈಕಿ ವಿಜಯ್ ಗ್ರೋವರ್ ಮಾತನಾಡಿ ಬೆಳಿಗ್ಗೆ ಕರ್ಫ್ಯೂ ಇರುವುದರಿಂದ ಅವರಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ರಾತ್ರಿ ವಸತಿ ವ್ಯವಸ್ಥೆ ಕಲ್ಪಿಸಿದ್ದರೆಂದು ತಿಳಿಸಿದ್ದಾರೆ.

    ಪಿಯು ಇಂಗ್ಲಿಷ್ ಪರೀಕ್ಷೆ : ಪರೀಕ್ಷಾ ಕೇಂದ್ರ ಬದಲಾವಣೆಗೆ ಮುಂದಾದ 17 ಸಾವಿರ ವಿದ್ಯಾರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts