More

    2023ರಲ್ಲಿ ಉತ್ತಮ ಗಳಿಕೆ ಮಾಡಿದ ಮಿಡ್-ಕ್ಯಾಪ್ ಫಂಡ್​ ಹೂಡಿಕೆ: 2024ರಲ್ಲಿಯೂ ಸಿಗುವುದೇ ಲಾಭ?

    ಮುಂಬೈ: ಕಳೆದ ವರ್ಷ 2023ರಲ್ಲಿ ಸಾಕಷ್ಟು ಮಿಡ್-ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಟ್ಟಿವೆ. ಮಿಡ್-ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು 2024 ರಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ ಎಂಬುದು ಸಾಕಷ್ಟು ಪರಿಣತರು, ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯವಾಗಿದೆ.

    ಪ್ರತಿ ತಿಂಗಳು ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆಯಾಗುತ್ತಿದೆ. AMFI (ಭಾರತೀಯ ಮ್ಯೂಚುವಲ್​ ಫಂಡ್​ ಸಂಘಟನೆ) ಮಾಹಿತಿಯ ಪ್ರಕಾರ, ನವೆಂಬರ್‌ನಲ್ಲಿ ಈ ಫಂಡ್​ಗಳಲ್ಲಿ 2666 ಕೋಟಿ ರೂಪಾಯಿ ಮತ್ತು ಅಕ್ಟೋಬರ್‌ನಲ್ಲಿ 2409 ಕೋಟಿ ರೂಪಾಯಿ ಹೂಡಿಕೆಯಾಗಿದೆ. 2023 ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ 5574 ಕೋಟಿ ರೂ, ದ್ವೀತಿಐ ತ್ರೈಮಾಸಿಕದಲ್ಲಿ 4735 ಕೋಟಿ ರೂ ಮತ್ತು ತೃತೀಯ ತ್ರೈಮಾಸಿಕದಲ್ಲಿ 6236 ಕೋಟಿ ರೂ. ಹೂಡಿಕೆಯಾಗಿದೆ.

    ನೀವು ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರು ಕನಿಷ್ಠ 3-5 ವರ್ಷಗಳ ಹೂಡಿಕೆ ಮಾಡುವುದು ಉತ್ತಮ ದೃಷ್ಟಿಕೋನವಾಗಿದೆ. ಹೂಡಿಕೆಯ ಅವಧಿಯು ಹೆಚ್ಚಾದಷ್ಟು ನಿಮ್ಮ ಆದಾಯವು ಉತ್ತಮವಾಗಿರುತ್ತದೆ ಮತ್ತು ಹೆಚ್ಚು ಸುರಕ್ಷಿತವಾಗಿರುತ್ತದೆ. ಹೂಡಿಕೆ ಅವಧಿ ಅಲ್ಪಾವಧಿಯದ್ದಾಗಿದ್ದರೆ, ದೊಡ್ಡ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಎಂಬ ಸಲಹೆಯನ್ನು ಪರಿಣತರು ನೀಡುತ್ತಾರೆ.

    CY23 ರಲ್ಲಿ, ಮಿಡ್-ಕ್ಯಾಪ್ ಸೂಚ್ಯಂಕದಲ್ಲಿ ಶೇಕಡಾ 45 ಕ್ಕಿಂತ ಹೆಚ್ಚಿನ ಜಿಗಿತವನ್ನು ದಾಖಲಿಸಲಾಗಿದೆ ಎಂದು ನಾವು ನಿಮಗೆ ಹೇಳೋಣ.

    ಉತ್ತಮ ಕಾರ್ಯಕ್ಷಮತೆ ತೋರಿದ ಮಿಡ್​ಕ್ಯಾಪ್​ ಫಂಡ್​ಗಳು 2023 ರಲ್ಲಿ ಶೇಕಡಾ 32 ರಷ್ಟು ಲಾಭವನ್ನು ನೀಡಿವೆ. ಪ್ರಮುಖ ಮೂರು ಮಿಡ್​​ಕ್ಯಾಪ್​ ವಿವರಗಳು ಇಲ್ಲಿವೆ.

    ಎಚ್​ಡಿಎಫ್​ ಮಿಡ್ ಕ್ಯಾಪ್ ಆಪರ್ಚುನಿಟೀಸ್ ಫಂಡ್:

    ಈ ಫಂಡ್​ನಲ್ಲಿ ನಿರ್ವಹಣೆಯಲ್ಲಿರುವ ಆಸ್ತಿ (AUM) ಮೊತ್ತ 52,138 ಕೋಟಿ ರೂಪಾಯಿ. ಇದು ಮೂರು ವರ್ಷಗಳಲ್ಲಿ ಸಿಪ್​ (ವ್ಯವಸ್ಥಿಕ ಹೂಡಿಕೆ ಯೋಜನೆ- ಸಿಸ್ಟಮೆಟಿಕ್​ ಇನ್ವೆಸ್ಟ್​ಮೆಂಟ್​) ಹೂಡಿಕೆದಾರರಿಗೆ ನಿವ್ವಳ ಆಧಾರದ ಮೇಲೆ ಅಂದಾಜು 60 ಪ್ರತಿಶತದಷ್ಟು ಮತ್ತು ಐದು ವರ್ಷಗಳಲ್ಲಿ 112 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಹೂಡಿಕೆದಾರರು ಮೂರು ವರ್ಷಗಳ ಹಿಂದೆ 10,000 ರೂ.ಗಳ ಮಾಸಿಕ ಸಿಪ್​ ಪ್ರಾರಂಭಿಸಿದ್ದರೆ, ಇಂದು ಆ ನಿಧಿಯ ಮೌಲ್ಯವು 5.72 ಲಕ್ಷ ರೂಪಾಯಿ ಆಗುತ್ತದೆ.

    ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್:

    ಈ ನಿಧಿಯಲ್ಲಿ ಒಟ್ಟು ಹೂಡಿಕೆಯು (AUM) 21380 ಕೋಟಿ ರೂಪಾಯಿ ಇದೆ. ಮೂರು ವರ್ಷಗಳಲ್ಲಿ ಸಿಪ್​ ಹೂಡಿಕೆದಾರರಿಗೆ ನಿವ್ವಳ ಆಧಾರದ ಮೇಲೆ 61 ಪ್ರತಿಶತ ಮತ್ತು ಐದು ವರ್ಷಗಳಲ್ಲಿ 117 ಪ್ರತಿಶತದಷ್ಟು ಆದಾಯವನ್ನು ಇದು ನೀಡಿದೆ. ಹೂಡಿಕೆದಾರರು ಮೂರು ವರ್ಷಗಳ ಹಿಂದೆ 10,000 ರೂ.ಗಳ ಮಾಸಿಕ ಎಸ್‌ಐಪಿ ಪ್ರಾರಂಭಿಸಿದ್ದರೆ, ಇಂದು ಆ ನಿಧಿಯ ಮೌಲ್ಯ 5.78 ಲಕ್ಷ ರೂಪಾಯಿ ಆಗುತ್ತದೆ.

    ಟಾಟಾ ಮಿಡ್‌ಕ್ಯಾಪ್ ಗ್ರೋತ್ ಫಂಡ್:

    ಈ ನಿಧಿಯ ಗಾತ್ರ 2852 ಕೋಟಿ ರೂಪಾಯಿ ಇದೆ. ಮೂರು ವರ್ಷಗಳಲ್ಲಿ ಸಿಪ್​ ಹೂಡಿಕೆದಾರರಿಗೆ ನಿವ್ವಳ ಆಧಾರದ ಮೇಲೆ 49 ಪ್ರತಿಶತ ಮತ್ತು ಐದು ವರ್ಷಗಳಲ್ಲಿ 95 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಹೂಡಿಕೆದಾರರು ಮೂರು ವರ್ಷಗಳ ಹಿಂದೆ 10,000 ರೂ.ಗಳ ಮಾಸಿಕ ಸಿಪ್​ ಪ್ರಾರಂಭಿಸಿದ್ದರೆ, ಇಂದು ಆ ನಿಧಿಯ ಮೌಲ್ಯವು 5.35 ಲಕ್ಷ ರೂಪಾಯಿ ಆಗುತ್ತದೆ.

    ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: 670.93 ಅಂಕ ಕುಸಿದ ಬಿಎಸ್​ಇ ಸೂಚ್ಯಂಕ

    ಮಾಲ್ಡೀವ್ಸ್‌ ಜತೆ ವಹಿವಾಟು ಮಾಡದಂತೆ ರಫ್ತುದಾರರಿಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಒತ್ತಾಯ

    ಸುಪ್ರೀಂ ಕೋರ್ಟ್​ನ ತೀರ್ಪು ‘ಅಪರಾಧಿಗಳ ಪೋಷಕ’ ಯಾರೆಂಬುದನ್ನು ತಿಳಿಸಿದೆ: ಬಿಲ್ಕಿಸ್​ ಬಾನೊ ಪ್ರಕರಣದಲ್ಲಿ ರಾಹುಲ್​ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts