More

    ಕಿರುಸಾಲ ಸೌಲಭ್ಯ ಗುರಿ ಸಾಧನೆ ಸವಾಲು

    ಶ್ರವಣ್‌ಕುಮಾರ್ ನಾಳ ಪುತ್ತೂರು

    ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ಆಪತ್ಕಾಲದ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಕಿರುಸಾಲ ಯೋಜನೆ ಜಾರಿಗೊಳಿಸಿದ್ದು, ಲಾನುಭವಿಗಳ ಗುರಿ ಸಾಧಿಸುವುದೇ ಪುತ್ತೂರು ನಗರಸಭೆ ಪಾಲಿಗೆ ಸವಾಲಾಗಿದೆ.
    ಬೀದಿಬದಿ ವ್ಯಾಪಾರಿಗಳಿಗೆ ಆತ್ಮನಿರ್ಭರ ಯೋಜನೆಯಡಿ ವಿಶೇಷ ಕಿರು ಸಾಲ ಸೌಲಭ್ಯ ಜಾರಿಗೆ ತರಲಾಗಿದ್ದು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಹೆಸರಿನಲ್ಲಿ ಅನುಷ್ಠಾನಗೊಳ್ಳುವ ಈ ಕಿರುಸಾಲ ಸೌಲಭ್ಯ ಯೋಜನೆಯಂತೆ ಪ್ರತಿ ಲಾನುಭವಿಗೆ ತಲಾ 10 ಸಾವಿರ ರೂ. ಸಾಲ ನೀಡಲಾಗುತ್ತದೆ. ಒಂದು ವರ್ಷದ ಅವಯಲ್ಲಿ ಮರುಪಾವತಿ ಮಾಡಬೇಕಿದ್ದು, ಸಮರ್ಪಕ ಮರುಪಾವತಿದಾರನಿಗೆ ಶೇ.7ರ ಬಡ್ಡಿ ಸಹಾಯಧನ ಖಾತೆಗೆ ವರ್ಗಾಯಿಸಲಾಗುತ್ತದೆ.
    2020 ಜುಲೈನಲ್ಲಿ ಈ ಯೋಜನೆ ಆರಂಭಗೊಂಡಿದ್ದು, 2021ರ ಮಾರ್ಚ್ 31ರವರೆಗೆ ಅನುಷ್ಠಾನದಲ್ಲಿರುತ್ತದೆ. ಯೋಜನೆಯ ಪ್ರಕಾರ ಇಡೀ ದೇಶದಲ್ಲಿ 50 ಲಕ್ಷ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಅದಕ್ಕೆಂದೇ ಪ್ರತಿ ನಗರ ಸ್ಥಳೀಯ ಸಂಸ್ಥೆಗಳಿಗೆ ಗುರಿ ನೀಡಲಾಗಿದೆ. ಪುತ್ತೂರು ನಗರಸಭೆಗೆ 531 ಲಾನುಭವಿಗಳ ಗುರಿ ನೀಡಿದ್ದು, ಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ ಅದನ್ನು ಅಂಗೀಕರಿಸುವುದು ನಗರ ಸ್ಥಳೀಯಾಡಳಿತಗಳ ಕೆಲಸ. ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್ ನಿರ್ದೇಶನದ ಪ್ರಕಾರ ವಿವಿಧ ಬ್ಯಾಂಕ್‌ಗಳು ಸಾಲ ನೀಡುತ್ತದೆ. ನಗರಸಭೆಗೆ 531 ಲಾನುಭವಿಗಳ ಗುರಿ ನೀಡಿದ್ದರೂ ಕಳೆದ 4 ತಿಂಗಳಲ್ಲಿ 160 ಲಾನುಭವಿಗಳು ಮಾತ್ರ ಸಿಕ್ಕಿದ್ದು, ಉಳಿದವರ ಆಯ್ಕೆಗೆ ನಗರಾಡಳಿತ ಪ್ರಯತ್ನಿಸುತ್ತಲೇ ಇದೆ.

    ಅಸಂಘಟಿತ ವಲಯದಲ್ಲಿರುವುದೇ ಸಮಸ್ಯೆ
    ಬೀದಿಬದಿ ವ್ಯಾಪಾರಿಗಳು ಅಸಂಘಟಿತ ವಲಯದಲ್ಲಿರುವುದು ಒಂದು ಸಮಸ್ಯೆ. ಸಾಕಷ್ಟು ಜನ ಈ ಡಿಜಿಟಲ್ ಸೇವಾ ಯೋಜನೆಯ ಅಡಿಗೆ ಬರಲು ಹಿಂದೇಟು ಹಾಕುತ್ತಿರುವುದು ಮತ್ತೊಂದು ಸವಾಲು. ಆಯಾ ದಿನದ ಆದಾಯ- ಖರ್ಚು ಎಂಬ ಲೆಕ್ಕದಲ್ಲಿ ದುಡಿಯುವ ಬೀದಿಬದಿ ವ್ಯಾಪಾರಿಗಳಲ್ಲಿ ಅನೇಕರು ಸಾಲ ಪಡೆಯಲು ಹಿಂಜರಿಯುತ್ತಿರುವುದು ಇನ್ನೊಂದು ಸಮಸ್ಯೆ. ಹಣ್ಣು, ತರಕಾರಿ, ಮೀನು, ಹೂ, ಬಟ್ಟೆಬರೆ, ಮನೆ ಬಳಕೆ ವಸ್ತುಗಳು ಇತ್ಯಾದಿಗಳನ್ನು ಬಯಲಲ್ಲಿ ಇಟ್ಟುಕೊಂಡು ಮಾರುವವರು, ಬೀದಿಬದಿ ಮಾರುವವರು, ಸೈಕಲ್, ಮೋಟಾರ್ ಸೈಕಲ್, ತಳ್ಳುಗಾಡಿ ಇಲ್ಲವೇ ತಲೆ ಹೊರೆಯಲ್ಲಿ ಮಾರುವವರು ಈ ವ್ಯಾಪ್ತಿಗೆ ಬರುತ್ತಾರೆ. ವ್ಯಾಪಾರದ ವ್ಯಾಪ್ತಿಯಲ್ಲಿ ಗುರುತಿನ ಚೀಟಿ ಹೊಂದಿರಬೇಕು. ಇಲ್ಲದಿದ್ದಲ್ಲಿ ಆಯಾ ನಗರಾಡಳಿತ ಸಂಸ್ಥೆಯಿಂದ ಶಿಾರಸು ಪತ್ರ ಪಡೆದುಕೊಳ್ಳಬೇಕು ಎಂಬ ನಿಯಮ ಇದರಲ್ಲಿದೆ.

    ಬೀದಿಬದಿ ವ್ಯಾಪಾರಿಗಳಿಗೆ ಆತ್ಮನಿರ್ಭರ ಯೋಜನೆಯಡಿ ಸಾಲ ನೀಡುವ ಯೋಜನೆಯಂತೆ ಪುತ್ತೂರು ನಗರಸಭೆ ವ್ಯಾಪ್ತಿಗೆ 531 ಲಾನುಭವಿಗಳ ಗುರಿ ನೀಡಲಾಗಿದೆ. ಇದನ್ನು ಪೂರೈಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರೂ ಸೂಚನೆ ನೀಡಿದ್ದಾರೆ. ನಾವು ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸುವ ಭರವಸೆ ಇದೆ.
    ರೂಪಾ ಶೆಟ್ಟಿ, ಪುತ್ತೂರು ನಗರಸಭಾ ಪೌರಾಯುಕ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts