More

    ಸಿಂಧು, ಛೇತ್ರಿ ಜತೆ ಎಂಎಚ್​​ಆರ್​​ಡಿ ವೆಬಿನಾರ್: ವಿದ್ಯಾರ್ಥಿಗಳು ಪಾಲ್ಗೊಳ್ಳಲು ಕರೆ

    ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು ಸಂಜೆ 5 ಗಂಟೆಗೆ ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೇತ್ರಿ ಮತ್ತು ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ.
    ಈ ಸಂವಾದದಲ್ಲೆ ಅವರು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಬಗ್ಗೆ ಮಾತನಾಡಲಿದ್ದಾರೆ. ಎಚ್‌ಆರ್‌ಡಿ ಸಚಿವರ ಟ್ವಿಟರ್ ಅಥವಾ ಫೇಸ್‌ಬುಕ್ ಪುಟದಲ್ಲಿ ವಿದ್ಯಾರ್ಥಿಗಳು ಸಂವಾದಕ್ಕೆ ಸೇರಬಹುದು. ನೇರ ಸಂವಾದದಲ್ಲಿ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಪಾಲ್ಲೊಳ್ಳಲಿದ್ದಾರೆ. .

    ಇದನ್ನೂ ಓದಿ: ಆಗಸ್ಟ್ 15 ರೊಳಗೆ ದೇಸಿ ಲಸಿಕೆ ಬಿಡುಗಡೆ ಗುರಿ ಹೊಂದಿದೆ ಐಸಿಎಂಆರ್

    ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಕುರಿತಾದ ಪ್ರಶ್ನೆಗಳಿಗೆ ಮಾನವ ಸಂಪನ್ಮೂಲ ಸಚಿವರೂ ಉತ್ತರಿಸಲಿದ್ದಾರೆ. ಫಿಟ್ ಇಂಡಿಯಾ ಟಾಕ್ಸ್ ಎಂಬ ಹ್ಯಾಶ್‌ಟ್ಯಾಗ್ ಅಡಿ ‘ಫಿಟ್ ಹೈ ತೊ ಹಿಟ್ ಹೈ ಇಂಡಿಯಾ’ ವೆಬಿನಾರ್ ನಡೆಯಲಿದೆ.. #FitIndiaTalks ಬಳಸಿ ವಿದ್ಯಾರ್ಥಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳನ್ನು ಕೇಳಬಹುದು. ವೆಬ್‌ನಾರ್ ಅನ್ನು ಡಿಡಿ ಸ್ಪೋರ್ಟ್ಸ್ ಮತ್ತು ಫಿಟ್ ಇಂಡಿಯಾದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ‘ ಸಂವಾದದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಸಚಿವರು ಕರೆ ನೀಡಿದ್ದಾರೆ. 

    18 ಸಾವಿರ ಟೆಕಿಗಳ ವಜಾಕ್ಕೆ ಅಮೆರಿಕ ಕಂಪನಿ ಸಿದ್ಧತೆ! ಹೋರಾಟಕ್ಕೆ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts