More

    ಮೈಸೂರು ನಗರದಲ್ಲಿ ಸಂಭ್ರಮದ ಮಹಾವೀರ ಜಯಂತಿ

    ಮೈಸೂರು ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ವಿವಿಧೆಡೆ ಮಹಾವೀರ ಜಯಂತಿಯನ್ನು ಮಂಗಳವಾರ ಶ್ರದ್ಧಾ, ಭಕ್ತಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರಿನ ಕಲಾಮಂದಿರ ಆವರಣದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಜೈನ ದಿಗಂಬರ ಸಂಘದ ಅಧ್ಯಕ್ಷ ಮಹೇಶ್ ಪ್ರಸಾದ್, ಕಾರ್ಯದರ್ಶಿ ಎಂ.ಆರ್.ಸುನಿಲ್ ಕುಮಾರ್, ಖಜಾಂಚಿ ಜ್ವಾಲೇಂದ್ರ ಪ್ರಸಾದ್, ನಿರ್ದೇಶಕರಾದ ಸೀಮಂತಿನಿ, ಚಂದ್ರಶೇಖರ್, ಶ್ರೀಕಾಂತ್ ಜೈನ್, ಜಿನೇಂದ್ರ ಪ್ರಕಾಶ್, ವಿ.ಭರತ್, ಲಕ್ಷ್ಮೀಶ ಬಾಬು ಹಾಗೂ ಇತರರು ಇದ್ದರು.

    ಅಂಹಿಸಾ ಮೆರವಣಿಗೆ

    ಜೈನ ಸಂಘದಿಂದ ನಗರದಲ್ಲಿ ಅಹಿಂಸಾ ಮೆರವಣಿಗೆ ನಡೆಯಿತು. ಅಶೋಕ ರಸ್ತೆಯ ಸಂತ ಫಿಲೋಮಿನಾ ಚರ್ಚ್ ಆವರಣದಿಂದ ಪ್ರಾರಂಭಗೊಂಡ ಮೆರವಣಿಗೆಯು ಅಶೋಕ ರಸ್ತೆ, ದೊಡ್ಡಗಡಿಯಾರ ವೃತ್ತ, ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣ, ಬಿಎನ್ ರಸ್ತೆ ಮೂಲಕ ಸಾಗಿ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಮುಕ್ತಾಯಗೊಂಡಿತು.

    ಪಾನೀಯ ವಿತರಣೆ

    ಮಹಾವೀರರ ಪುತ್ಥಳಿಯನ್ನು ರಥದಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಜೈನ ತೀರ್ಥಂಕರರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮಾರ್ಗದುದ್ದಕ್ಕೂ ಹಾಲು, ನೀರು, ಪಾನೀಯ ಹಂಚಲಾಯಿತು.
    ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಮೈಸೂರು ಜೈನ ಸಂಘದಿಂದ ಭಗವಾನ್ ಮಹಾವೀರರ ಜಯಮತಿ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಆಚಾರ್ಯ ಚಂದ್ರಯಾಶ್ ಸೂರಿಶ್ವರ್ಜಿ ಮರಸ ಆದಿ ತಾನಾ(4), ಸಾಧ್ವಿ ಶ್ರೀ ಆಗಮ್‌ಶಿಜಿ ಮರಸಾ ಧೈರ್ಯಶ್ರೀಜಿ ಮರಾಸ, ಗುರುವರ್ಯ ಶ್ರೀ ಹರ್ಷಗುನಶ್ರೀಜಿ ಮರಾಸಾ ಆಕ್ಷಿ ಥಾನಾ ಹಾಗೂ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts