More

    ಹರಪನಹಳ್ಳಿ ತಾಲೂಕಲ್ಲಿ 30 ವಾರಕ್ಕೆ ಆಗುವಷ್ಟಿದೆ ಮೇವು

    ಕರಿಬಸಪ್ಪ ಪರಶೆಟ್ಟಿ ಹರಪನಹಳ್ಳಿ

    ಹರಪನಹಳ್ಳಿ ತಾಲೂಕಲ್ಲಿ 30 ವಾರಕ್ಕೆ ಆಗುವಷ್ಟಿದೆ ಮೇವು. ತಾಲೂಕಿನ ನದಿತೀರದ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಎಲ್ಲ ಹಳ್ಳಿಗಳು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದರೂ ಕಳೆದ ವರ್ಷ ಅತ್ಯುತ್ತಮವಾಗಿ ಮಳೆ ಸುರಿದಿದೆ.

    ಈ ಕಾರಣಕ್ಕೆ ಕೆರೆ, ಕಟ್ಟೆಗಳು ತುಂಬಿಕೊಂಡು, ಬೆಳೆ ಸಮೃದ್ಧವಾಗಿ ರೈತರ ಕೈಗೆ ಸಿಕ್ಕಿದ್ದರಿಂದ ಈ ಬಾರಿ ಮೇವಿನ ಕೊರತೆಯಿಂದ ತಾಲೂಕು ದೂರ ಉಳಿದಿದೆ.

    ಪ್ರಕೃತಿಯ ಕರುಣೆಯಿಂದಾಗಿ ಜಾನುವಾರುಗಳಿಗೆ ಕುಡಿಯಲು ನೀರು, ಮೇಯಲು ಮೇವು ಕೊರತೆ ಆಗಿಲ್ಲ. ರೈತರು ಹೊಲ ಮತ್ತು ಕಣಗಳಲ್ಲಿ 30 ವಾರಗಳಿಗೆ ಆಗುವಷ್ಟು ಮೇವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.

    ಇದನ್ನೂ ಓದಿ: ಹೂವಿನಹಡಗಲಿ ತಾಲೂಕಿನಲ್ಲಿ ಮೇವಿಗೆ ಬರವಿಲ್ಲ

    ಇಷ್ಟೇ ಮುಂಜಾತ್ರಗೆ ವಹಿಸಿ, ಮಳೆಗಾಲ ಬರುವ ವರೆಗೆ ಮೇವಿನ ಕೊರತೆ ಕೃಷಿಕರನ್ನು ಕಾಡಬಾರದು ಎಂಬ ಕಾರಣಕ್ಕೆ ಪಶು ಆಸ್ಪತ್ರೆಯಿಂದ ಉಚಿತವಾಗಿ 5 ಕ್ವಿಂಟಾಲ್ ಮೇವಿನ ಬೀಜವನ್ನು ವಿತರಣೆ ಮಾಡಲಾಗಿದೆ.

    5 ಕೆಜಿ ಬ್ಯಾಗ್‌ನಂತೆ ಶೇ.70 ರೈತರು ಬೀಜೆ ಪಡೆದು ಮೇವನ್ನು ಬೆಳೆದಿದ್ದಾರೆ. ಮಳೆಗಾಲಕ್ಕೆ ಆಪ್ರಿಕನ್ ಟಾಲ್‌ಮೇಲ್(ಬಿಳಿ ಮೆಕ್ಕೆಜೊಳ), ಜೋಳ ಬೀಜ ವಿತರಣೆಗೆ ಕ್ರಮವಹಿಸಲಾಗುತ್ತಿದೆ. ರೈತರು ಒಣ ಮೇವಿನ ಜತೆಗೆ ಪೌಷ್ಟಿಕಾಂಶ ಸಮತೋಲನೆ ಕಾಪಾಡಿಕೊಂಡು ಮೇವಿನ ಬಳಕೆಯನ್ನು ಮಾಡಬೇಕಿದೆ.

    ಮೂರು ವರ್ಷದ ಹಿಂದೆ ಆಗಿತ್ತು ಮೇವಿನ ತೊಂದರೆ

    ಮೂರು ವರ್ಷಗಳ ಹಿಂದೆ ಸರಿಯಾದ ಮಳೆಯಾಗಿರಲಿಲ್ಲ. ಆದ್ದರಿಂದ ಜಾನುವಾರುಗಳಿಗೆ ಹರಪನಹಳ್ಳಿ ತಾಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿತ್ತು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜಂಟಿಯಾಗಿ ಪಶುವೈದ್ಯರ ಮಾಹಿತಿ ಆಧರಿಸಿ ಗೋಶಾಲೆಯನ್ನು ತೆರೆಯಲಾಗಿತ್ತು. ಎರಡು ಕಡೆಗಳಲ್ಲಿ ಮೇವನ್ನು ರೈತರಿಗೆ ಉಚಿತವಾಗಿ ನೀಡಲಾಗಿತ್ತು. ಮೇವಿನ ಸಮಸ್ಯೆ ನೀಗಿಸಲು ಪ್ರಯತ್ನಿಸಲಾಗಿತ್ತು.

    ಇಳಿಮುಖವಾಗಿದೆ ರಾಸುಗಳ ಸಂಖ್ಯೆ, ಮೇವಿನ ಕೊರತೆ ಸದ್ಯಕ್ಕಿಲ್ಲ

    ಮೂರು ವರ್ಷಗಳಿಂದ ತಾಲೂಕಿನಲ್ಲಿ ಮೇವಿನ ಕೊರತೆ ಉಂಟಾಗಿಲ್ಲ. ತಾಲೂಕಿನಲ್ಲಿ ಹಸು, ಎಮ್ಮೆ ಸೇರಿ 91,105, ಹಾಗೂ ಕುರಿ, ಮೇಕೆಗಳು ಸೇರಿ3,12,382 ಇದ್ದು ಅತಿ ಹೆಚ್ಚು ಕುರಿ, ಮೇಕೆ ಸಾಕಣಿ ಇರುವ ತಾಲೂಕು ಎಂಬ ಹೆಗ್ಗಳಿಕೆ ಹರಪನಹಳ್ಳಿ ಇದೆ. ಇದೆಲ್ಲದರ ನಡುವೆ ಯಂತ್ರಗಳ ಭರಾಟೆಯಿಂದ ಎತ್ತುಗಳೊಂದಿಗೆ ಬೇಸಾಯ ಮಾಡುವುದು ಇಲ್ಲದಂತಾಗಿದೆ. ಎಲ್ಲ ಉಳುಮೆಯನ್ನು ಟ್ರಾಕ್ಟರ್ ನಿಂದ ಮಾಡುತ್ತಿರುವುದರಿಂದ ರಾಸುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

    ಶೇಂಗಾ ಮೇವು-ಹೊಟ್ಟಿನ ಬೆಲೆ ತುಟ್ಟಿ

    ಹರಪನಹಳ್ಳಿ ತಾಲೂಕಿನಲ್ಲಿ ಹೈನುಗಾರಿಕೆಗೆ ಜಾನುವಾರುಗಳನ್ನು ಒಂದುಕಡೆ ಕಟ್ಟಿಹಾಕಿ ಮೇಯಿಸುತ್ತಿದ್ದಾರೆ. ಇದರಿಂದ ಮೇವನ್ನು ರೈತರು ಖರೀದಿಸುತ್ತಿದ್ದಾರೆ. ಒಂದು ಕ್ವಿಂಟಾಲ್ ರಾಗಿ ಮೇವಿಗೆ 15 ಸಾವಿರ ರೂ. ಇದೆ. ಶೇಂಗಾ ಹೊಟ್ಟಿಗೆ 15 ರಿಂದ 20 ಸಾವಿರ ರೂ. ಇದೆ. ನೀರಾವರಿ ಪ್ರದೇಶದಲ್ಲಿ ಭತ್ತ ಹೆಚ್ಚಾಗಿದ್ದು ಇದೀಗ ಮೇವು ಸಹ ದುಬಾರಿಯಾಗಿರುವುದು ಕಂಡು ಬರುತ್ತಿದೆ. ಹಿಂಗಾರು ಹಂಗಾಮಿನಲ್ಲಿ ಧಾರಾಕಾರವಾಗಿ ಮಳೆ ಸುರಿದ್ದರಿಂದ ಕೆರೆ, ಕಟ್ಟೆಗಳು ತುಂಬಿವೆ. ಬೆಳೆಯೂ ಚೆನ್ನಾಗಿ ಬೆಳೆದಿದೆ. ಇದರಿಂದ ತಾಲೂಕಿನಲ್ಲಿ ಮೇವು ಹೇರಳವಾಗಿ ದೊರೆಯುತ್ತಿದೆ.

    ಹರಪನಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ರಾಗಿ ಮೇವಿನ ಬೆಳೆ ಹೆಚ್ಚಾಗಿ ಲಭ್ಯವಿದೆ. ತಾಲೂಕಿನಲ್ಲಿ ಈ ಬಾರಿ ಮೇವಿನ ಸಮಸ್ಯೆ ಉಂಟಾಗಿಲ್ಲ.
    ಡಾ.ಶಿವಕುಮಾರ ಜ್ಯೋತಿ, ಆಡಳಿತ ವೈದ್ಯಾಧಿಕಾರಿ, ಪಶು ಇಲಾಖೆ, ಹರಪನಹಳ್ಳಿ


    ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚಾಗಿ ಮುಂಗಾರಿನಲ್ಲಿ ಮೆಕ್ಕೆಜೋಳ, ಹಿಂಗಾರಿನಲ್ಲಿ ರಾಗಿ, ಬೆಸಿಗೆಯಲ್ಲಿ ಶೇಂಗಾ, ಬೆಳೆಯಲಾಗುತ್ತದೆ. ಈ ಬಾರಿ ಉತ್ತಮ ಮಳೆಯಾಗಿದೆ. ಇದರಿಂದಾಗಿ ತಾಲೂಕಿನಲ್ಲಿ ಮೇವಿನ ಕೊರತೆ ಇಲ್ಲ.
    ಗೋಂಧಿ ಮಂಜುನಾಥ, ಕೃಷಿ ಅಧಿಕಾರಿ, ಹರಪನಹಳ್ಳಿ

    ಹೈನುಗಾರಿಕೆಯಿಂದಾಗಿ ದರ ಹೆಚ್ಚಳ

    ನಮ್ಮಲ್ಲಿ ಈ ಬಾರಿ ಮಳೆ ಉತ್ತಮವಾಗಿದೆ. ಆದ್ದರಿಂದ ಮೇವು ಚೆನ್ನಾಗಿ ಬಂದಿದೆ. ಬೆಳೆ ಹಾನಿಯಾಗಿದೆ. ಮೇವಿನ ಸಮಸ್ಯೆ ಇಲ್ಲ. ಕೆಲ ಕೃಷಿ ಕೂಲಿಕಾರರಿಗೆ ಹೈನುಗಾರಿಕೆ ಉತ್ಪಾದನೆ ಮಾಡಲು ಮೇವಿನ ಅವಶ್ಯಕತೆ ಇರುವುದರಿಂದ ಮೇವಿನ ದರ ದುಬಾರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts