More

    ಮಿಟೂ ಕೇಸ್ – ಅಕ್ಬರ್ ಮತ್ತು ರಮಣಿ ನಡುವೆ ಸಂಧಾನಕ್ಕೇನಾದರೂ ಅವಕಾಶ ಇದೆಯೇ? – ಕೋರ್ಟ್ ಪ್ರಶ್ನೆ

    ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸಂಧಾನಕ್ಕೆ ಏನಾದರೂ ಅವಕಾಶ ಇದೆಯೇ ಎಂದು ದೆಹಲಿ ಕೋರ್ಟ್​ ಶನಿವಾರ ಪ್ರಶ್ನಿಸಿದೆ.

    2018ರಲ್ಲಿ ಮಿಟೂ ಅಭಿಯಾನ ನಡೆದಾಗ ಪ್ರಿಯಾ ರಮಣಿ ಅಂದು ಕೇಂದ್ರ ಸಚಿವರಾಗಿದ್ದ ಅಕ್ಬರ್ ವಿರುದ್ಧ ಮಿಟೂ ಆರೋಪ ಮಾಡಿದ್ದರು. 20 ವರ್ಷಗಳ ಹಿಂದೆ ಅಕ್ಬರ್ ಅವರು ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ತಮ್ಮೊಡನೆ ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿದ್ದರು ಎಂದು ಆರೋಪಿಸಿದ್ದರು. ಸಾರ್ವಜನಿಕ ಹಿತ ದೃಷ್ಟಿಯಿಂದ ಆ ಆರೋಪ ಮಾಡಿದೆ ಎಂದೂ ಪ್ರಿಯಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

    ಇದನ್ನೂ ಓದಿ : ಬಿಜೆಪಿ & ಆರ್​ಎಸ್​ಎಸ್​ಗೆ ಸಂವಿಧಾನ ಪಾಠ ಮಾಡುತ್ತಾರಂತೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ

    ಈ ಆರೋಪದ ಬೆನ್ನಿಗೆ ಅಕ್ಬರ್ ಸಚಿವ ಸ್ಥಾನ ಕಳೆದುಕೊಳ್ಳಬೇಕಾಗಿ ಬಂತು. ಇದಾಗಿ ಅವರು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದರು. ಇದರ ವಿಚಾರಣೆ ನಡೆಯುತ್ತಿದ್ದು, ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್​ ರವೀಂದ್ರ ಕುಮಾರ್​ ಪಾಂಡೆ ಶನಿವಾರ ಈ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಈ ಹಿಂದೆ ಈ ಕೇಸ್ ವಿಚಾರಣೆ ನಡೆಸಿದ್ದ ಜಡ್ಜ್​ ಬೇರೆ ಕೋರ್ಟ್​ಗೆ ವರ್ಗಾವಣೆ ಆದ ಕಾರಣ ಮ್ಯಾಜಿಸ್ಟ್ರೇಟ್ ಪಾಂಡೆ ಹೊಸದಾಗಿ ಅಂತಿಮ ವಾದ-ಪ್ರತಿವಾದ ಆಲಿಸಲಾರಂಭಿಸಿದ್ದಾರೆ. ನವೆಂಬರ್ 24ಕ್ಕೆ ಈ ಕೇಸ್ ಮತ್ತೆ ವಿಚಾರಣೆಗೆ ಬರಲಿದೆ. (ಏಜೆನ್ಸೀಸ್)

    ಟೆರರ್​ ಫಂಡಿಂಗ್ ಕೇಸ್​- ಉಗ್ರ ಹಫೀಜ್​​ನ ಇಬ್ಬರು ಸಹಚರರನ್ನು ಜೈಲಿಗಟ್ಟಿದ ಪಾಕ್​ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts