More

    ಎಂಇಎಸ್ ಮುಖಂಡರಿಂದ ಸುಭಾಸ ದೇಸಾಯಿ ಭೇಟಿ

    ಖಾನಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಸರ್ಕಾರಿ ಮರಾಠಿ ಮಾಧ್ಯಮ ಶಾಲೆಗಳ ಸಂರಕ್ಷಣೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಬೇಕು ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರದ ಮುಂಬೈಯಲ್ಲಿ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಎಂಇಎಸ್ ಮುಖಂಡರ ನಿಯೋಗದೊಂದಿಗೆ ಮಹಾರಾಷ್ಟ್ರದ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದ ಪಾಟೀಲ, ಗಡಿಭಾಗದ ಮರಾಠಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ, ಇವುಗಳ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.

    ಮಾಜಿ ಶಾಸಕರ ಮನವಿ ಆಲಿಸಿದ ಸುಭಾಸ ದೇಸಾಯಿ, ಬೆಳಗಾವಿ ಜಿಲ್ಲೆಯ ಮರಾಠಿ ಶಾಲೆಗಳ ಕೊಠಡಿ ದುರಸ್ತಿ, ಶಿಕ್ಷಕರ ನೇಮಕ, ಗ್ರಂಥಾಲಯ, ಪುಸ್ತಕ ಹಾಗೂ ಪರಿಕರಗಳನ್ನು ಪೂರೈಕೆ ಮಾಡಲಾಗುವುದು. ಶಾಲಾ ವಾಚನಾಲಯಕ್ಕೆ ಪ್ರತ್ಯೇಕ ಕೊಠಡಿ ನಿರ್ಮಾಣ ಸೇರಿ ಗಡಿಭಾಗದ ಮರಾಠಿ ಶಾಲೆಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ ಬದ್ಧವಿದೆ.

    ಎಂಇಎಸ್ ಮುಖಂಡರು ಮರಾಠಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಸಮಗ್ರವಾದ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಸಚಿವ ಸುಭಾಸ ದೇಸಾಯಿ ನಿಯೋಗಕ್ಕೆ ಸೂಚಿಸಿದರು. ಪ್ರಕಾಶ ಮರಗಾಳೆ, ಸುನೀಲ ಆನಂದಾಚೆ ಹಾಗೂ ಎಂಇಎಸ್ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts