More

    ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸಿ

    ಸವದತ್ತಿ: ಕೋವಿಡ್-19 ಸೋಂಕಿನಿಂದ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಶುಕ್ರವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಗ್ರೇಡ್-2 ತಹಸೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

    ಸಂಘದ ಕಾರ್ಯದರ್ಶಿ ಎಲ್.ಎಸ್. ನಾಯಕ ಮತನಾಡಿ, ಎಲ್ಲ ನಾಗರಿಕರಿಗೆ ಮುಖ್ಯವಾಗಿ ಗ್ರಾಮೀಣ ಜನತೆಯ ಆರೋಗ್ಯ ತಪಾಸಣೆ ವ್ಯವಸ್ಥೆ ಕಲ್ಪಿಸಬೇಕು. ವಲಸೆ ಕುಟುಂಬಕ್ಕೆ ವಿಶೇಷ ಆರ್ಥಿಕ ನೆರವು, ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕರ ಅವಲಂಬಿತರಿಗೆ ಗರಿಷ್ಠ ಪರಿಹಾರ ನೀಡಬೇಕು. ದಿನವೊಂದಕ್ಕೆ 600ರಂತೆ ವರ್ಷದಲ್ಲಿ 200 ದಿನ ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ಪ್ರತಿ ಕೂಲಿಕಾರರ ಕುಟುಂಬಕ್ಕೆ ತಿಂಗಳಿಗೆ 7,500 ದಂತೆ ಮೂರು ತಿಂಗಳ ಹಣ ನೀಡಬೇಕು. ಕೂಲಿಕಾರರಿಗೆ ತಲಾ 10 ಕೆಜಿ ಅಕ್ಕಿ, ಗೋಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮುಂದಿನ 6 ತಿಂಗಳವರೆಗೆ ಪೂರೈಸಬೇಕು. ಕಾರ್ಮಿಕ ಕಾಯ್ದೆಯನ್ನು ಮರಳಿ ಜಾರಿಗೊಳಿಸಬೇಕು.

    ಸಾರ್ವಜನಿಕ ರಂಗದ ಬಂಡವಾಳ ಹಿಂಪಡೆಯುವಿಕೆ ನಿಲ್ಲಿಸಬೇಕು, ವಿದೇಶದ ನೇರ ಬಂಡವಾಳ ಹೂಡಿಕೆ ಕೈಬಿಡಬೇಕು. ಮಾದರಿ ಗುತ್ತಿಗೆ ಕೃಷಿ ಕಾಯ್ದೆ, ಭೂಗೇಣಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ಹೆಚ್ಚುವರಿ ಸರ್ಕಾರಿ ಭೂಮಿಯನ್ನು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರಿಗೆ ವಿತರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಶ್ರೀಕಾಂತ ಹಟ್ಟಿಹೊಳಿ, ವೆಂಕಟೇಶ ತಳವಾರ, ಲಕ್ಷ್ಮಣ ಹೆಬ್ಬಳ್ಳಿ, ಯಲ್ಲಪ್ಪ ಮಡಿವಾಳರ, ಹನುಮಂತ ಸಿದ್ದಾಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts