More

    ಹೆಚ್ಚು ಪೋರ್ನ್ ವಿಡಿಯೋಗಳನ್ನು ನೋಡುವ ಪುರುಷರಲ್ಲಿ ಈ ಸಮಸ್ಯೆಯೂ ಹೆಚ್ಚಾಗಲಿದೆಯಂತೆ!​

    ಕೂಪನ್​ ಹೇಗನ್​: ಅತಿಹೆಚ್ಚು ಪೋರ್ನ್​ ವಿಡಿಯೋಗಳನ್ನು ವೀಕ್ಷಿಸುವ ಪುರುಷರಲ್ಲಿ ಬಹಳ ಗಂಭೀರವಾದ ಸಮಸ್ಯೆಯೊಂದು ಎದುರಾಗುವ ಸಾಧ್ಯತೆ ಇದೆ ಎಂದು ನೂತನ ಸಂಶೋಧನೆಯೊಂದು ಬಹಿರಂಗಪಡಿಸಿದೆ.

    ಹೆಚ್ಚು ಪೋರ್ನ್​ ವಿಡಿಯೋ ನೋಡುವುದರಿಂದ ಸಂಗಾತಿಯೊಂದಿಗೆ ಸಂಭೋಗ ನಡೆಸುವಾಗ ನಿಮಿರುವಿಕೆಯ ಸಮಸ್ಯೆ ಹೆಚ್ಚಾಗಲಿದೆ ಎಂದು ಸಂಶೋಧನೆ ಎಚ್ಚರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಸುಲಭವಾಗಿ ದೊರೆಯುವ ವಯಸ್ಕರ ಚಿತ್ರಗಳ ವಿರುದ್ಧ ಬೊಟ್ಟು ಮಾಡುತ್ತಿದ್ದರೂ, ಅದರಲ್ಲಿ ಹೆಚ್ಚು ಪುರುಷರು ತೊಡಗಿಕೊಳ್ಳುತ್ತಿರುವುದರಿಂದ ಸಂಭೋಗದ ವೇಳೆ ಯಾವುದೇ ಪ್ರಚೋದನೆಗೆ ಒಳಗಾಗುತ್ತಿಲ್ಲ ಎಂಬುದು ತಿಳಿದುಬಂದಿದೆ.

    ಇದನ್ನೂ ಓದಿ: ಈ ನಂಬರ್​ಗೆ ಕರೆ ಮಾಡಿದ್ರೆ ಮನೆ ಬಾಗಿಲಲ್ಲೇ ಕೋವಿಡ್ ಟೆಸ್ಟ್ ಮಾಡ್ತಾರೆ

    ಈ ಅಧ್ಯಯನವು ಡೆನ್ಮಾರ್ಕ್ ಮತ್ತು ಬೆಲ್ಜಿಯಂ ಪುರುಷರ ಅಶ್ಲೀಲ ಅಭ್ಯಾಸವನ್ನು ನಿರ್ಣಯಿಸಿದೆ ಮತ್ತು ಅವರ ಲೈಂಗಿಕ ಅಭ್ಯಾಸಗಳೊಂದಿಗೆ ಹೋಲಿಕೆ ಮಾಡಲಾಗಿದೆ. ಇದರಲ್ಲಿ ತಿಳಿದುಬಂದಿದ್ದೇನೆಂದರೆ, ಮೂರನೇ ಒಂದು ಭಾಗದ ಜನರು ಅಂದರೆ ಶೇ. 35 ರಷ್ಟು ಮಂದಿ ಪರದೆಯ ಮೇಲೆ ಬೇರೊಬ್ಬರು ಸಂಭೋಗದಲ್ಲಿ ತೊಡಗಿರುವುದನ್ನು ನೋಡಿ ಪ್ರಚೋದನೆಗೊಳ್ಳುತ್ತಾರೆ. ಆದರೆ, ತಾವೇ ಸಂಭೋಗಕ್ಕೆ ಮುಂದಾದಾಗ ಅವರಲ್ಲಿ ಯಾವುದೇ ಪ್ರಚೋದನೆ ಕಂಡುಬಂದಿಲ್ಲ ಎಂದು ಅಧ್ಯಯನ ಹೇಳಿದೆ.

    ಡೆನ್ಮಾರ್ಕ್ ಮತ್ತು ಬೆಲ್ಜಿಯಂನಲ್ಲಿನ 16 ವರ್ಷ ಮೇಲ್ಪಟ್ಟ ಸುಮಾರು 3,267 ಪುರುಷರಿಗೆ ಸಂಶೋಧಕರು, ಹಸ್ತಮೈಥುನ, ಪೋರ್ನ್​ ವಿಡಿಯೋ ನೋಡುವ ಪುನಾರಾವರ್ತನೆ ಮತ್ತು ಲೈಂಗಿಕ ಚಟುವಟಿಕೆ ಸಂಬಂಧ 118 ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದೆ. ಇದೇ ಪ್ರಶ್ನಾವಳಿಯಲ್ಲಿ 90 ಪ್ರತಿಶತದಷ್ಟು ಪುರುಷರು ವಯಸ್ಕ ಚಲನಚಿತ್ರದ ಅತ್ಯಂತ ಕಾಮಪ್ರಚೋದಕ ಭಾಗಗಳಿಗೆ ಪ್ರಭಾವಗೊಳ್ಳುತ್ತಾರೆ ಎಂದು ತಿಳಿದುಬಂದಿದೆ.

    ಇನ್ನು ಪ್ರಶ್ನಾವಳಿಯಲ್ಲಿ ಭಾಗವಹಿಸಿದ ಪುರುಷರು ವಾರಕ್ಕೆ ಸುಮಾರು 70 ನಿಮಿಷಕ್ಕೂ ಹೆಚ್ಚು ಬಾರಿ ಪೋರ್ನ್​ ವಿಡಿಯೋಗಳನ್ನು ನೋಡುತ್ತಾರೆಂಬುದು ಅಧ್ಯಯನ ಬಹಿರಂಗಪಡಿಸಿದೆ. ಇದರಲ್ಲಿ ಶೇ 2 ರಷ್ಟು ಪುರುಷರು ವಾರದಲ್ಲಿ 7 ಗಂಟೆಗೂ ಅಧಿಕ ಸಮಯ ಅಶ್ಲೀಲ ವಿಡಿಯೋ ವೀಕ್ಷಣೆಯಲ್ಲಿ ತೊಡಗುತ್ತಾರೆ. ಅಶ್ಲೀಲ ವೀಕ್ಷಣೆಗಿಂತ ಸಂಗಾತಿಯೊಂದಿಗಿನ ಲೈಂಗಿಕತೆಯು ಹೆಚ್ಚು ರೋಮಾಂಚನಕಾರಿಯಾಗಿದೆ ಎಂದು ಶೇ. 65 ರಷ್ಟು ಪುರುಷರು ಮಾತ್ರ ಭಾವಿಸಿದ್ದಾರೆ. ಶೇ. 20 ರಷ್ಟು ಜನರು ಈ ಹಿಂದಿನ ಪ್ರಚೋದನೆಯನ್ನು ಪಡೆಯಲು ಹೆಚ್ಚು ತೀವ್ರವಾದ ಅಶ್ಲೀಲತೆಯನ್ನು ನೋಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ನಾಕಾ ತಪಾಸಣೆ ವೇಳೆ ಸಿಕ್ಕಿಬಿದ್ದ ಮಾದಕವಸ್ತು ಮಾರಾಟಗಾರರ ಬಳಿ ಸಿಕ್ಕಿದ್ದೇನು?

    ಯುರೋಪಿಯನ್ ಅಸೋಸಿಯೇಷನ್ ಆಫ್ ಯುರೋಲಜಿ ವರ್ಚುವಲ್ ಕಾಂಗ್ರೆಸ್​ನಲ್ಲಿ ಪ್ರಸ್ತುತಪಡಿಸಿದ ಈ ಅಧ್ಯಯನವು 35 ವರ್ಷದೊಳಗಿನವರಲ್ಲಿ ನಾಲ್ಕನೇ ಒಂದು (ಶೇ 23) ಭಾಗದ ಪುರುಷರು ನಿಮಿರುವಿಕೆಯ ಸಮಸ್ಯೆಯನ್ನು ಹೊಂದಿರುವುದು ತಿಳಿದುಬಂದಿದೆ.

    ಅಶ್ಲೀಲತೆಯನ್ನು ನೋಡುವ ಸಮಯ ಮತ್ತು ಸಂಗಾತಿಯೊಂದಿಗಿನ ನಿಮಿರುವಿಕೆ ತೊಂದರೆ ಹೆಚ್ಚುತ್ತಿರುವ ನಡುವೆ ಹೆಚ್ಚು ಮಹತ್ವದ ಸಂಬಂಧವಿದೆ ಎಂದು ಪ್ರಮುಖ ಲೇಖಕ ಪ್ರೊಫೆಸರ್ ಗುಂಟರ್ ಡಿ ವಿನ್ ಹೇಳಿದ್ದಾರೆ. (ಏಜೆನ್ಸೀಸ್​)

    ಬೆಳಕನ್ನೇ ಪ್ರತಿಫಲಿಸದಷ್ಟು ಅತ್ಯಂತ ಗಾಢ ಕಪ್ಪು ಮೀನುಗಳು ಎಲ್ಲಿರುತ್ತವೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts