More

    ಕುರ್ಚಿಗಳನ್ನು ಆಕ್ರಮಿಸಿಕೊಂಡ ಪುರುಷರು, ನೋಡುತ್ತಾ ನಿಂತ ಅಧ್ಯಕ್ಷೆ !

    ಟರ್ಕಿ : ಸಾಮಾಜಿಕ ಜಾಲತಾಣದಲ್ಲಿ ಬಹುಪ್ರಸಾರವಾಗುತ್ತಿರುವ ವಿಡಿಯೋ ತುಣುಕೊಂದರಲ್ಲಿ ಮಹಿಳಾ ಅಧ್ಯಕ್ಷರಿಗೆ ಜಾಗ ಕೊಡದೆ, ಇದ್ದ ಎರಡು ಕುರ್ಚಿಗಳಲ್ಲಿ ಪುರುಷ ಅಧ್ಯಕ್ಷರು ಕುಳಿತುಕೊಂಡ ಪ್ರಸಂಗವೊಂದು ಚರ್ಚೆಗೊಳಗಾಗಿದೆ. ಟರ್ಕಿಯ ಅಧ್ಯಕ್ಷರೊಂದಿಗಿನ ಸಭೆಗಾಗಿ ತೆರಳಿದ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಅರ್ಸುಲಾ ವಾನ್ ಡೆರ್ ಲೆಯೆನ್ ಅವರಿಗೆ ಈ ರೀತಿಯ ಮುಜುಗರದ ಪರಿಸ್ಥಿತಿ ಉಂಟಾಯಿತು ಎನ್ನಲಾಗಿದೆ.

    ಏಪ್ರಿಲ್ 7 ರಂದು ಅರ್ಸುಲಾ ಅವರು ಟರ್ಕಿಯ ಅಧ್ಯಕ್ಷರಾದ ತಯ್ಯಿಪ್ ಎರ್ಡಾಗನ್ ಅವರೊಂದಿಗೆ ಸಭೆ ನಡೆಸಲು ಇತರ ಉನ್ನತ ಅಧಿಕಾರಿಗಳೊಂದಿಗೆ ಅಂಕಾರಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಗೀವ್​ಹರ್​ಎಸೀಟ್​​ ಎಂಬ ಹ್ಯಾಷ್​​ಟ್ಯಾಗ್​ನೊಂದಿಗೆ ಜಾಲತಾಣದಲ್ಲಿ ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಹರಿದುಬಂದಿವೆ.

     

    ಟರ್ಕಿ ಅಧ್ಯಕ್ಷ ಎರ್​ಡಾಗನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಮೈಕೆಲ್ ಅವರೊಂದಿಗೆ ಕೊಠಡಿಯೊಳಕ್ಕೆ ಪ್ರವೇಶಿಸಿದ ಅರ್ಸುಲಾ ಅವರು ಎರಡೇ ಕುರ್ಚಿಗಳನ್ನು ಇರಿಸಿರುವುದನ್ನು ನೋಡಿ ನಿಲ್ಲುತ್ತಾರೆ. ಅಷ್ಟರಲ್ಲಿ ಆ ಇಬ್ಬರೂ ಪುರುಷ ಅಧ್ಯಕ್ಷರು ಎರಡು ಕುರ್ಚಿಗಳ ಮೇಲೆ ಕೂತುಬಿಡುವುದನ್ನು ನೋಡಿ ನಂಬಲಾರದೆ ಬೆರಗಾಗುತ್ತಾರೆ. ಈ ದೃಶ್ಯದ ತುಣುಕಿಗೆ ಅರ್ಸಲಾ ‘ಎಹಮ್​ ?!’ ಎಂದು ಉದ್ಗಾರ ಎತ್ತುವಂತೆ ಪ್ರತಿಕ್ರಿಯೆ ಸೇರಿಸಿ ಟ್ವಿಟರ್​​ನಲ್ಲಿ ಹರಿಬಿಡಲಾಗಿದೆ.

    ಇದಾದ ನಂತರ ಅರ್ಸುಲಾ ಅವರಿಗೆ ಮತ್ತು ಇನ್ನೊಬ್ಬ ಅಧಿಕಾರಿಗೆ ಹತ್ತಿರದಲ್ಲೇ ಇರುವ ಸೋಫಾಗಳ ಮೇಲೆ ಕೂರಲು ಅವಕಾಶ ನೀಡಲಾಗಿದೆ. ಆದಾಗ್ಯೂ ಈ ರೀತಿ ಮೂವರು ಅಧ್ಯಕ್ಷರು ಇರುವ ಸಮಯದಲ್ಲಿ ಟರ್ಕಿಯಲ್ಲಿ ಎರಡೇ ಕುರ್ಚಿ ಇಟ್ಟಿದ್ದರ ಬಗ್ಗೆ ಮತ್ತು ಮಹಿಳಾ ಅಧ್ಯಕ್ಷೆಯನ್ನು ನಿರ್ಲಕ್ಷಿಸಿ ಕುರ್ಚಿ ಆಕ್ರಮಿಸಿಕೊಂಡ ಅಧ್ಯಕ್ಷರಿಬ್ಬರ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ‘ದೀದಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರಾ ?’ : ಅಮಿತ್​ ಷಾ ಪ್ರಶ್ನೆ

    ಕರೊನಾ ನಿಯಮ ಉಲ್ಲಂಘಿಸಿ ಎಎಪಿ ಪ್ರತಿಭಟನೆ ; ‘ಪ್ರಧಾನಿ ಮೋದಿ ಮಾಡಿದ್ದನ್ನೇ ಮಾಡುತ್ತಿದ್ದೇವೆ’ ಎಂದ ನಾಯಕ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts