More

    ಪುರುಷರೆಲ್ಲರೂ ಧರ್ಮ, ಉದ್ಯೋಗ, ಆದಾಯ ಘೋಷಿಸಿ ಮದುವೆ ಮಾತುಕತೆ ಮುಂದುವರಿಸಿ – ಅಸ್ಸಾಂ ಸಚಿವ

    ಗುವಾಹಟಿ: ಲವ್​ ಜಿಹಾದ್ ಕಾನೂನು ವಿಚಾರ ದೇಶಾದ್ಯಂತ ಚರ್ಚೆಗೀಡಾಗಿರುವ ಬೆನ್ನಲ್ಲೇ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಸರ್ಮಾ , ಪುರುಷರೆಲ್ಲರೂ ಅವರವರ ಧರ್ಮ, ಉದ್ಯೋಗ, ಆದಾಯ ಘೋಷಿಸಿಯೇ ಮದುವೆ ಮಾತುಕತೆ ಮುಂದುವರಿಸಬೇಕು. ಈ ಅಂಶವನ್ನು ಒಳಗೊಂಡ ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.

    ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ಮಸೂದೆಯನ್ನು ರಚಿಸಲಾಗುತ್ತಿದೆ. ಪತಿ-ಪತ್ನಿಯ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಎಲ್ಲ ವಿಷಯಗಳನ್ನೂ ಪರಸ್ಪರ ಅರಿತಿರಬೇಕು. ಮುಖ್ಯವಾಗಿ ಧರ್ಮ, ಉದ್ಯೋಗ, ಆದಾಯದ ವಿಚಾರದಲ್ಲಿ ವಂಚನೆ, ಮೋಸ ನಡೆಯಬಾರದು. ಸಂಸಾರ ನಡೆಸುವಲ್ಲಿ ಇವು ಅತ್ಯಂತ ಪ್ರಾಮುಖ್ಯವಿಚಾರಗಳಾಗಿವೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಸೆಂಚುರಿ ಟ್ರಬಲ್! 24 ಇನಿಂಗ್ಸ್‌ಗಳಿಂದ ಸಿಡಿದಿಲ್ಲ ಶತಕ

    ಲವ್​ ಜಿಹಾದ್ ತಡೆಯುವುದಕ್ಕೆ ಇರುವ ಕಾನೂನು ಇದು ಎಂಬ ವ್ಯಾಖ್ಯೆ ಬೇಕಾಗಿಲ್ಲ. ಅದನ್ನು ಮೀರಿದ ಮಸೂದೆ ಇದಾಗಿದ್ದು, ಸಮಾಜದ ಹಿತದೃಷ್ಟಿ, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಗಮನಿಸಬೇಕು. ಎಲ್ಲ ಧರ್ಮದವರಿಗೂ, ಜಾತಿಯವರಿಗೂ, ಸಮುದಾಯದವರಿಗೂ ಈ ಕಾನೂನು ಅನ್ವಯವಾಗಲಿದೆ ಎಂದು ಹಿಮಂತ ಬಿಸ್ವಾ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

    ಹಿಂದೂ ಯುವಕನೆಂದು ನಂಬಿಸಿ ಮದುವೆಯಾದ; ಗರ್ಭದಲ್ಲಿದ್ದ ಮಗು ಕೊಂದು ಮತಾಂತರವಾಗೆಂದು ಒತ್ತಾಯಿಸಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts