More

    ಸನಾತನ ಭಾರತೀಯ ಜ್ಞಾನ ಭಂಡಾರ ತಾಳೆಗರಿಯಲ್ಲಿ ಅಡಕ: ಪ್ರೊ.ಮುಕುಂದ್

    ಮೂಲ್ಕಿ: ಸನಾತನ ಭಾರತೀಯ ಜ್ಞಾನ ಭಂಡಾರಗಳು ತಾಳೆಗರಿಯಲ್ಲಿ ಅಡಕವಾಗಿದ್ದು, ಅವುಗಳನ್ನು ಅಧ್ಯಯನಕಾರರು ಮತ್ತು ಯುವ ಪೀಳಿಗೆಗೆ ಸ್ವಾರ್ಥರಹಿತವಾಗಿ ಮುಟ್ಟಿಸುವ ಕಾರ್ಯ ಅಗತ್ಯವಿದೆ ಎಂದು ಅಮೆರಿಕದ ಮಾಜಿ ವಿಜ್ಞಾನಿ, ಪ್ರಸ್ತುತ ಬೆಂಗಳೂರಿನ ತಾರಾ ಪ್ರಕಾಶನ ಮುಖ್ಯಸ್ಥ ಪ್ರೊ.ಮುಕುಂದ್ ಹೇಳಿದರು.

    ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಯಲ್ಲಿ ಸೋಮವಾರ ಮಧ್ವ ಸಿದ್ಧಾಂತ ತಂತ್ರಸಾರದ ತಾಳೆಗರಿಯ ಮೂಲ ಪಠ್ಯವನ್ನು ವಿಶೇಷ ತಂತ್ರಜ್ಞಾನದ ಮೂಲಕ ಪುಸ್ತಕದಲ್ಲಿ ಪ್ರಕಟಿಸುವ ಮೂಲಕ ಮಾಧ್ವ ತಂತ್ರಸಾರದಿಂದ ಅರ್ಚಿತ ದೇವಾಲಯಗಳಿಗೆ ನೀಡುವ ಧ್ಯೇಯದಿಂದ ‘ಮೆಮೆರಾಂಡಂ ಆಫ್ ಅಂಡರ್‌ಸ್ಟಾಂಡಿಗ್’ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

    ಮೂಲ್ಕಿ ದೇವಳ ಆಡಳಿತ ಮಂಡಳಿ ಸದಸ್ಯ ಅತುಲ್ ಕುಡ್ವ ಮಾಹಿತಿ ನೀಡಿ, ಸುಮಾರು 600ವರ್ಷ ಇತಿಹಾಸವುಳ್ಳ ಮೂಲ್ಕಿ ದೇವಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ವಿಜಯೇಂದ್ರ ತೀರ್ಥ ಸ್ವಾಮೀಜಿಯವರ ಹೆಸರಿನಲ್ಲಿ ಸಂಸ್ಕೃತ ಶಾಲೆ ಮತ್ತು ವೇದ ಪಾಠ ಶಾಲೆ ನಡೆಯುತ್ತಿರುವುದಕ್ಕೆ ದೇವಳದಲ್ಲಿ ಪೂರ್ವ ದಾಖಲೆಗಳು ಲಭ್ಯವಾಗಿದ್ದು, ದೇವಳ ಹಾಗೂ ವೈದಿಕರಲ್ಲಿ ಸಂಗ್ರಹಿಸಿದ ತಾಳೆಗರಿಗಳಲ್ಲಿ ಅಡಕವಾಗಿರುವ ಬಹಳಷ್ಟು ಮಾಹಿತಿ ಸಂಗ್ರಹವನ್ನು ತಾರಾ ಪ್ರಕಟಣಲಯದ ಸಹಕಾರದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಿ ಮಾಧ್ವ ತಂತ್ರಸಾರ ದೇವಾಲಯಗಳಿಗೆ ಮೂಲ್ಕಿ ದೇವಳ ವತಿಯಿಂದ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಪ್ರೊ.ಮುಕುಂದ್ ಅವರನ್ನು ಗೌರವಿಸಲಾಯಿತು. ಶ್ರೀವ್ಯಾಸಮಹರ್ಷಿ ವೇದಪಾಠ ಶಾಲೆಯ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಥ್ವೀಶ ಭಟ್, ಸಂಚಾಲಕ ಎಂ.ಪಾಂಡುರಂಗ ಭಟ್, ಸದಸ್ಯರಾದ ವಿ.ಹರಿಕಾಮತ್, ವಿ.ಶಿವರಾಮ ಕಾಮತ್, ತಾರಾ ಪ್ರಕಟನಾಲಯದ ಶ್ಯಾಮ್ ಅನಂತ್, ಅನಿಲ್ ಯಾವಗಲ್ ಉಪಸ್ಥಿತರಿದ್ದರು.

    ಭಾರತೀಯ ತಾಳೆಗರಿಗಳು ಕೇವಲ ಶಾಸಕ್ಕೆ ಸೀಮಿತವಾಗದೆ ವಿಜ್ಞಾನ ತಂತ್ರಜ್ಞಾನ ಹಾಗೂ ವೈದ್ಯಕೀಯ ಅಗಾಧ ಜ್ಞಾನವನ್ನು ತನ್ನೊಳಗೆ ಅಡಕಗೊಳಿಸಿದೆ. ಹೆಚ್ಚಿನವು ಓದಲಾಗದೆ ಹಿರಿಯರ ಮನೆ ಮಹಡಿ ಸೇರಿದ್ದರೆ, ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಸಂಗ್ರಹಿಸಿದ್ದ ತಾಳೆಗರಿ ಸಂಗ್ರಹವು ಆಕ್ಸ್‌ಫರ್ಡ್ ಸಹಿತ ಇಂಗ್ಲೆಂಡ್ ಹಾಗೂ ಅಮೆರಿಕ ವಿಸ್ವ ವಿದ್ಯಾಲಯಗಳಲ್ಲಿದೆ. ಈ ಜ್ಞಾನ ಭಂಡಾರ ಭಾರತೀಯ ಯುವಜನತೆಗೆ ಲಭ್ಯವಾಗಬೇಕು ಎಂಬ ಸ್ವಾರ್ಥರಹಿತ ಚಿಂತನೆಯಲ್ಲಿ ತಾರಾ ಪ್ರಕಟಣಾಲಯ ದುಡಿಯುತ್ತಿದೆ.
    – ಪ್ರೊ.ಮುಕುಂದ್, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಶಿಷ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts