More

    ಚೋಕ್ಸಿ ಶೀಘ್ರದಲ್ಲೇ ಭಾರತಕ್ಕೆ ಗಡಿಪಾರು: ಡೊಮಿನಿಕಾಗೆ ತೆರಳಿದ ಖಾಸಗಿ ವಿಮಾನ

    ನವದೆಹಲಿ: ಭಾರತದ ಬ್ಯಾಂಕುಗಳಿಗೆ ವಂಚನೆ ಮಾಡಿ ಕೆರಿಬಿಯನ್ ದ್ವೀಪದಲ್ಲಿ ತಲೆತಪ್ಪಿಸಿಕೊಂಡಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ (62) ಶೀಘ್ರದಲ್ಲೇ ಭಾರತಕ್ಕೆ ಗಡಿಪಾರಾಗುವ ಸಾಧ್ಯತೆ ಇದೆ. ಸದ್ಯ ಡೊಮಿನಿಕಾದಲ್ಲಿ ಅವರು ಬಂಧನಕ್ಕೊಳಗಾಗಿದ್ದಾರೆ. ಅವರನ್ನು ಕರೆತರಲು ಭಾರತದಿಂದ ಖಾಸಗಿ ವಿಮಾನವೊಂದು ಡೊಮಿನಿಕಾಗೆ ತೆರಳಿದೆ ಎಂದೂ ಹೇಳಲಾಗಿದೆ. ಆದರೆ, ಈ ಬಗ್ಗೆ ಭಾರತ ಮತ್ತು ಡೊಮಿನಿಕಾ ಸರ್ಕಾರಗಳು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಚೋಕ್ಸಿ ಹಸ್ತಾಂತರ ಸಂಬಂಧ ಎಲ್ಲ ದಾಖಲೆಗಳನ್ನು ಭಾರತ ಸರ್ಕಾರ ಡೊಮಿನಿಕಾಗೆ ಸಲ್ಲಿಸಿದೆ. ದಾಖಲೆಗಳನ್ನು ಹೊತ್ತ ವಿಮಾನ ಅಲ್ಲಿಗೆ ತೆರಳಿದೆ ಎಂದು ಆಂಟಿಗುವಾದ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಹೇಳಿದ್ದಾರೆ.

    ಕತಾರ್​ನ ಎಕ್ಸಿಕ್ಯೂಟಿವ್ ಬಿಜಿನೆಸ್ ಜೆಟ್​ನ ಬೊಂಬಾರ್ಡಿಯರ್ ಗ್ಲೋಬಲ್ 5000 ವಿಮಾನ ದೆಹಲಿಯಿಂದ 20 ತಾಸು ಪ್ರಯಾಣ ಬೆಳಸಿ ಡೊಮಿನಿಕಾಗೆ ಶನಿವಾರ ಹೋಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಮಾನವನ್ನು ಯಾರ ಬುಕ್ ಮಾಡಿದ್ದಾರೆ? ಯಾರ ಪ್ರಯಾಣಕ್ಕಾಗಿ ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಖಾಸಗಿಯಾಗಿದೆ. ಪ್ರಯಾಣಿಕರ ಖಾಸಗಿತನ ರಕ್ಷಣೆ ನಿಯಮದ ಅನ್ವಯ ಇದನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಕತಾರ್ ಎಕ್ಸಕ್ಯೂಟಿವ್ ವಿಮಾನಯಾನ ಸಂಸ್ಥೆ ತಿಳಿಸಿದೆ.

    ಏನಿದು ಪ್ರಕರಣ?

    ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ 13,500 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ವಂಚಿಸಿದ ನೀರವ್ ಮೋದಿ ಮತ್ತು ಅವರ ಸಂಬಂಧಿ ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದರು. ಚೋಕ್ಸಿ ಆಂಟಿಗುವಾದಲ್ಲಿ ಹೂಡಿಕೆ ಆಧಾರಿತ ನಾಗರಿಕತ್ವ ಪಡೆದಿದ್ದರು. ಆದರೆ, ಕಳೆದ ಭಾನುವಾರ ಅಲ್ಲಿಂದ ದಿಢೀರ್ ನಾಪತ್ತೆಯಾಗಿದ್ದ ಅವರು ಗುರುವಾರ ಡೊಮಿನಿಕಾದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ನೀರವ್ ಮೋದಿ ಇಂಗ್ಲೆಂಡ್​ನಲ್ಲಿ ಬಂಧನದಲ್ಲಿದ್ದು, ಅವರ ಹಸ್ತಾಂತರಕ್ಕೆ ಆದೇಶವಾಗಿದೆ. ಆದರೆ, ಇದನ್ನು ಪ್ರಶ್ನಿಸಿ ಅವರು ಲಂಡನ್ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts