ಬೆಂಗಳೂರು: ನಟಿ ಮೇಘನಾ ರಾಜ್ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿ ಚಿರಂಜೀವಿ ಸರ್ಜಾ ಇಲ್ಲದ ಮೊದಲ ಬರ್ತಡೇ ಇದಾಗಿದ್ದು, ಈ ಸಮಯದಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಮೇಘನಾ ಶೇರ್ ಮಾಡಿಕೊಂಡಿದ್ದಾರೆ.
6 ತಿಂಗಳ ಜೂನಿಯರ್ ಚಿರು, ತಂದೆಯ ಫೋಟೋ ನೋಡುತ್ತಿರುವ ವಿಡಿಯೋವನ್ನು ಮೇಘನಾ, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, “ನಮ್ಮ ಪವಾಡ ಶಾಶ್ವತವಾಗಿ ಮತ್ತು ಯಾವಾಗಲೂ” ಎಂದು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.
ಚಿರುವನ್ನು ಸದಾ ಮಿಸ್ ಮಾಡಿಕೊಳ್ಳುವ ಮೇಘನಾ, ಕೆಲವು ದಿನಗಳ ಹಿಂದೆ ಇಬ್ಬರು ಐಫೆಲ್ ಟವರ್ ಮುಂದೆ ಇರುವು ಫೋಟೋವನ್ನು ಶೇರ್ ಮಾಡಿಕೊಂಡು ಐ ಲವ್ ಯು, ಮರಳಿ ಬಾ ಎಂದು ಬರೆದುಕೊಂಡಿದ್ದರು.
ಮೇಘನಾ ಮತ್ತು ಚಿರು 2018ರಲ್ಲಿ ಪ್ರೇಮ ವಿವಾಹವಾದರು. ಸುಮಾರು 10 ವರ್ಷಗಳ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಎಂಬ ಬಂಧನದಲ್ಲಿ ಒಂದಾಗಿತ್ತು. ಆದರೆ, ವಿಧಿಯ ಕ್ರೂರ ಕಣ್ಣು ಸುಂದರ ಕುಟುಂಬದ ಮೇಲೆ ಬಿದ್ದು, ಕಳೆದ ವರ್ಷ ಜೂನ್ 7ರಂದು ಹೃದಯಾಘಾತಂದಿ ಚಿರು ತೀರಿಕೊಂಡರು. ಈ ವೇಳೆ ಮೇಘನಾ 5 ತಿಂಗಳ ಗರ್ಭಿಣಿ ಆಗಿದ್ದರು. (ಏಜೆನ್ಸೀಸ್)
ಒಂದೊಂದಾಗಿ ಕಳಚಿ ಬೀಳ್ತಿದೆ ಕಿಲಾಡಿ ಲೇಡಿಯ ಮುಖವಾಡ: ಬೆತ್ತಲೆ ವಿಡಿಯೋ ಕರೆಯೇ ಇವಳ ಬಂಡವಾಳ!
ಕರೊನಾ ಕಟ್ಟಿಹಾಕಲು ಲಾಕ್ಡೌನ್ ಕ್ರಮ ತೆಗೆದುಕೊಳ್ಳಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸಲಹೆ