More

    ಜೂ.ಚಿರು ತೊಟ್ಟಿಲ ಶಾಸ್ತ್ರದ ದಿನವೇ ಕಣ್ಣೀರಿಡುತ್ತಾ ಸುದ್ದಿಗೋಷ್ಠಿಯಲ್ಲಿ ಮೇಘನಾ ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ದಂಪತಿಯ ಪುತ್ರನಿಗೆ ಗುರುವಾರ ತೊಟ್ಟಿಲು ಶಾಸ್ತ್ರ ನೆರವೇರಿದೆ. ಚಿರು ಅಗಲಿಕೆಯ ನೋವಿನಲ್ಲಿದ್ದ ಎರಡೂ ಕುಟುಂಬದ ಮೊಗದಲ್ಲಿ ಜೂನಿಯರ್​ ಚಿರು ಆಗಮನ ಖುಷಿಯ ಬುತ್ತಿ ತಂದಿದ್ದಾನೆ. ಚಿರು ನಿಧನದ ಬಳಿಕ ಮಾಧ್ಯಮಗಳಿಂದ ದೂರವೇ ಉಳಿದಿದ್ದ ಮೇಘನಾ, ಜೂ.ಚಿರು ತೊಟ್ಟಿಲ ಶಾಸ್ತ್ರದ ಶುಭದಿನದಂದು ಮನಬಿಚ್ಚಿ ಮಾತನಾಡಿದ್ದಾರೆ.

    ಚಿರು ನೆನೆದು ಕಣ್ಣೀರಿಟ್ಟ ಮೇಘನಾ, ತುಂಬಾ ದಿನಗಳ ನಂತರ ಮಾಧ್ಯಮದ ಮುಂದೆ ಬರ್ತಾ ಇದೀನಿ. ಹಳೆಯದ್ದನ್ನೆಲ್ಲ ನಾನು ನೆನಪು ಮಾಡೋದಿಲ್ಲ. ಇಂದು ನನ್ನ ಮಗನಿಗೆ ತೊಟ್ಟಿಲು ಶಾಸ್ತ್ರ. ಹೊಸ ಸಂತಸ ಮನೆ ಮಾಡಿದೆ. ನಾನು ಸ್ಟ್ರಾಂಗ್ ಇದೀನೋ- ಇಲ್ವೋ ಅನ್ನೋದು ನನಗೆ ಗೊತ್ತಿಲ್ಲ. ಕೆಲವು ಘಟನೆಗಳು ನಡೆದಾಗ ನಾನು ಸಂಪೂರ್ಣ ಬ್ಲಾಂಕ್ ಆಗಿ ಹೋದೆ ಎನ್ನುತ್ತಾ ಭಾವುಕರಾದರು.

    ಚಿರು ಅಗಲಿಕೆ ನೋವು ಮರೆಯೋಕೆ ಅಸಾಧ್ಯ. ನನ್ನ ಮಗನನ್ನ ನೋಡಿದಾಗ ಚಿರು ಹೇಗೆ ನೋಡಿಕೊಳ್ತಾ ಇದ್ರು ಅನ್ನೋದು ನನಗೆ ಕಾಣುತ್ತೆ. ಚಿರು ಅಂದ್ರೆ ಸೆಲೆಬ್ರೇಷನ್. ಚಿರು ಅಂದ್ರೆ ನಗು ಮುಖ ಕಣ್​ ಮುಂದೆ ಬರುತ್ತೆ. ಅವರ ಸೆಲೆಬ್ರೇಷನ್ ಅನ್ನು ನಾನು ಮುಂದುವರಿಸಬೇಕು. ನನ್ನ ಮನೆಯಲ್ಲಿ ಚಿರುಗೆ ಸಂಬಂಧಿಸಿದ ವಸ್ತು ಏನೇ ಇದ್ದರೂ ಸೆಲೆಬ್ರೇಷನ್ ಮಾಡ್ತೀವಿ ಎಂದು ಮೇಘನಾ ಹೇಳಿದರು.

    ಜೂ.ಚಿರು ತೊಟ್ಟಿಲ ಶಾಸ್ತ್ರದ ದಿನವೇ ಕಣ್ಣೀರಿಡುತ್ತಾ ಸುದ್ದಿಗೋಷ್ಠಿಯಲ್ಲಿ ಮೇಘನಾ ಹೇಳಿದ್ದೇನು?ನನ್ನ ಮತ್ತು ಚಿರುನ ಮನೆ ಮಕ್ಕಳಾಗಿ ಎಲ್ಲರೂ ಕಂಡ್ರು. ಚಿರು ಸತ್ತಾಗ ಒಬ್ಬ ಮಗ ಅಂತ ಬಂದ್ರು. ಆದರೆ ಸ್ಟಾರ್ ಅಂತ ಯಾರೂ ಬರಲಿಲ್ಲ. ನನ್ನ‌ ಮಗ ಸ್ಟಾರ್ ಆಗುವುದಕ್ಕಿಂತ ಎಲ್ಲರೂ ಮೆಚ್ಚುವಂತಾಗಬೇಕು. ನನಗೆ ಹೆಣ್ಣು ಮಗು ಬೇಕು ಎಂದಿದ್ದೆ. ಇದಕ್ಕೆ ಚಿರು, ನನಗೆ ಗಂಡು ಮಗುನೇ ಹುಟ್ಟೋದು ಅಂತ ಹೇಳ್ತಿದ್ರು. ಮಗು ನೋಡಿದವರೆಲ್ಲರೂ ಚಿರು ಝೆರಾಕ್ಸ್ ಕಾಪಿ ಅಂತಾರೆ. ನನ್ನ ಮಗ ಅಳುವುದು ತುಂಬಾ ಕಡಿಮೆ. ಮಗನಿಗೆ ಅಪ್ಪನ ಬುದ್ಧಿಯೇ ಬಂದಿದೆ. ಯಾವಾಗಲೂ ನಗ್ತಾ ಇರ್ತಾನೆ. ಸಿನಿಮಾದಲ್ಲಿ ಸ್ಯಾಡ್ ಸನ್ನಿವೇಶ ಬಂದ್ರೆ ಅದನ್ನು ಕೂಡಲೇ ಫಾರ್ವಡ್ ಮಾಡ್ತಿದ್ರು ಚಿರು ಎಂದು ಮೇಘನಾ ಕೆಲ ಸನ್ನಿವೇಶವನ್ನು ಹಂಚಿಕೊಂಡರು.

    ನನ್ನ ಮಗ ಹುಟ್ಟಿದಾಗ ಚಿರು ಫೋಟೋ ಮುಂದೆ ಮಗುವನ್ನು ಇಟ್ಟದ್ದು ನೋಡಿ ಖುಷಿಯಾಯ್ತು. ಇಂಥ ಪ್ರಯತ್ನ ಮಾಡಿದವರಿಗೆ ಧನ್ಯವಾದ ಅರ್ಪಿಸಿವೆ. ಈಗಲೂ ನನ್ನ ಪಿಲ್ಲರ್ ಆಫ್ ಸ್ಟ್ರೆಂತ್ ಅಂದ್ರೆ ನನ್ನ ತಾಯಿ-ತಂದೆ. ಐದು ತಿಂಗಳಿನಿಂದ ಮನೆಯಲ್ಲಿ ನನ್ನ ಸ್ನೇಹಿತರೂ ಇರುತ್ತಿದ್ದರು. ಮಾಧ್ಯಮ ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸುವೆ ಎಂದರು.

    ಜೂ.ಚಿರು ತೊಟ್ಟಿಲ ಶಾಸ್ತ್ರದ ದಿನವೇ ಕಣ್ಣೀರಿಡುತ್ತಾ ಸುದ್ದಿಗೋಷ್ಠಿಯಲ್ಲಿ ಮೇಘನಾ ಹೇಳಿದ್ದೇನು?ಮಗ ಬಂದ ಮೇಲೆ ಜವಾಬ್ದಾರಿ ಜಾಸ್ತಿ ಆಗಿದೆ ಎಂದ ಮೇಘನಾ, ನನ್ನ ಶಕ್ತಿ ಅಂದ್ರೆ ನನ್ನ ಮಗ. ತೊಟ್ಟಿಲು ಶಾಸ್ತ್ರವನ್ನು ತವರು ಮನೆ ಕಡೆಯಿಂದ ಮಾಡಿದರು. ತವರು ಮನೆ ಶಾಸ್ತ್ರಕ್ಕೆ ವನಿತಾ ಅವರು ಕೊಟ್ಟಿರುವ ತೊಟ್ಟಿಲು ಬಳಸಿಕೊಂಡಿದ್ದೀವಿ. ಮಗನ ನಾಮಕರಣವನ್ನು ಅತಿ ಶೀಘ್ರವೇ ಮಾಡ್ತೀವಿ. ಚಿರು ಮಗ ಆಗಿರೋದ್ರಿಂದ ಜಾತಕ ನೋಡಿಕೊಂಡು ಸ್ಪೆಷಲ್ ಹೆಸರು ಇಡ್ಬೇಕು ಅಂತ ಆಸೆ ಇದೆ. ನಾವು ಇಡುವ ಹೆಸರು ಅವ್ರಿಗೆ ಒಳ್ಳೆಯದಾಗುವ ರೀತಿ ಇರಬೇಕು ಎಂದು ಜೂ.ಚಿರು ಹೆಸರಿನ ಬಗ್ಗೆ ವಿವರಿಸಿದರು.

    ಕನ್ನಡ ಸಿನಿಮಾ ಇಂಡಸ್ಟ್ರಿ ನನ್ನ ಕುಟುಂಬಕ್ಕೆ ಧೈರ್ಯ ತುಂಬಿದೆ. ಕೆಲ ಸಿನಿಮಾಗಳನ್ನ ಮಾಡ್ಬೇಕು ಅಂತ ನಾನು ಚಿರು ಮಾತನಾಡಿಕೊಂಡಿದ್ವಿ. ಅದು ಮುಂದುವರಿಯುತ್ತೆ. ಸದ್ಯ ನನ್ನ ಗಮನ ನನ್ನ ಮಗನ ಕಡೆ ಇದೆ ಎನ್ನುವ ಮೂಲಕ ಚಿತ್ರರಂಗದಲ್ಲಿ ಮುಂದುವರಿಯುವ ಸುಳಿವು ಕೊಟ್ಟರು.

    ಚಿರು-ಮೇಘನಾ ಪುತ್ರನಿಗಿಂದು ಶುಭದಿನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts