More

    ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!

    ಡೊಡೊಮಾ (ತಾಂಜಾನಿಯಾ): ಅದೃಷ್ಟವೆಂಬುದು ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ಒಮ್ಮೆ ಅದೃಷ್ಟ ದೇವತೆ ಮನೆ ಪ್ರವೇಶಿಸಿದರೆ ಸಾಕು ಆತನ ಬದುಕೇ ಬಂಗಾರವಾಗಿಬಿಡುತ್ತದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.

    ಹೌದು, ತಾಂಜಾನಿಯಾದ ಗಣಿ ಕೆಲಸಗಾರನಿಗೆ ರಾತ್ರೋರಾತ್ರಿ ಜಾಕ್​ಪಾಟ್​ ಹೊಡೆದಿದೆ. ಬುಧವಾರ ರಾತ್ರಿ ತಾಂಜಾನಿಯಾ ಸರ್ಕಾರವು ಗಣಿ ಕೆಲಸಗಾರನ ಮನೆಗೆ ಬರೋಬ್ಬರಿ 7.74 ಬಿಲಿಯನ್ ತಾಂಜಾನಿಯನ್​ ಕರೆನ್ಸಿ ಶಿಲ್ಲಿಂಗ್ಸ್​ ಚೆಕ್​ ಅನ್ನು ಕಳುಹಿಸಿಕೊಟ್ಟಿದೆ. ಡಾಲರ್​ ರೂಪದಲ್ಲಿ ಇದರ ಮೌಲ್ಯ 3.35 ಮಿಲಿಯನ್​ ಆಗಿದ್ದು, ಭಾರತೀಯ ಕರೆನ್ಸಿಗೆ ಹೋಲಿಸಿದರೆ, ಬರೋಬ್ಬರಿ 25 ಕೋಟಿಗೂ ಅಧಿಕವಾಗಿದೆ. ಖಚಿತವಾಗಿ ಹೇಳಬೇಕೆಂದರೆ ಚೆಕ್​ನ ಮೌಲ್ಯ 25,30,35,717 ರೂ. ಆಗಿದೆ. ​​

    ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

    ಅಷ್ಟಕ್ಕೂ ಸರ್ಕಾರ ಹಣವನ್ನೇಕೆ ನೀಡಿತು?
    ಈ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಅದಕ್ಕೆ ಉತ್ತರ ಮುಂದಿದೆ. ಬೆಲೆ ಬಾಳುವ ರತ್ನದ ಕಲ್ಲುಗಳಿಂದಲೇ ತುಂಬಿರುವ ಹಾಗೂ ಗಡಿಯಾಚೆಗಿನ ಕಳ್ಳಸಾಗಣೆಯನ್ನು ನಿಯಂತ್ರಿಸಲು ಗೋಡೆಯಿಂದ ಸುತ್ತುವರೆದಿರುವ ತಾಂಜಾನಿಯಾ ದೇಶದ ಉತ್ತರ ಭಾಗದಲ್ಲಿರುವ ತಾಂಜಾನೈಟ್​ ಗಣಿಗಳಲ್ಲಿ ಸಾನಿನ್ಯು ಲೈಜರ್ ಎಂಬಾತ ತೋಳಿನ ಗಾತ್ರದ ಎರಡು ಕಡು ನೇರಳೆ ಹಾಗೂ ನೀಲಿ ಬಣ್ಣ ಮಿಶ್ರಿತ ರತ್ನದ ಕಲ್ಲುಗಳನ್ನು ಪತ್ತೆಹಚ್ಚಿದ್ದಾನೆ.

    ಮೊದಲನೇ ರತ್ನದ ಕಲ್ಲು 9.27 ಕೆ.ಜಿ ತೂಗಿದರೆ, ಎರಡನೆಯದು 5.103 ಕೆ. ಜಿ. ಇದೆ ಎಂದು ತಾಂಜಾನಿಯಾದ ಗಣಿಗಾರಿಕೆ ಸಚಿವಾಲಯ ತಿಳಿಸಿದೆ.

    ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!

    ಇದನ್ನೂ ಓದಿ: ಚಿರು ನೆನಪು ಮತ್ತಷ್ಟು ಗಟ್ಟಿಗೊಳ್ಳಲು ಮೇಘನಾ ಮಾಡಿದ ಬದಲಾವಣೆ ಮನಕಲಕುವಂತಿದೆ

    ತಾಂಜಾನೈಟ್ ಎಂಬುದು ಪೂರ್ವ ಆಫ್ರಿಕಾ ರಾಷ್ಟ್ರದ ಸಣ್ಣ ಉತ್ತರ ಪ್ರದೇಶದಲ್ಲಿ ಮಾತ್ರ ಕಂಡುಬರುವ ರತ್ನದ ಕಲ್ಲಾಗಿದೆ. ಮಿರೆರಾನಿಯಲ್ಲಿ ಗಣಿಗಾರಿಕೆ ಚಟುವಟಿಕೆ ಆರಂಭಿಸಿದಾಗಿನಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ಬಹುದೊಡ್ಡ ತಾಂಜಾನೈಟ್​ ರತ್ನದ ಕಲ್ಲುಗಳು ಪತ್ತೆಯಾಗಿವೆ ಎಂದು ಗಣಿ ಸಚಿವಾಲಯದ ಖಾಯಂ ಕಾರ್ಯದರ್ಶಿ ಸೈಮನ್ ಎಂಸಾಂಜಿಲಾ ಅವರು ತಾಂಜಾನಿಯಾದ ಉತ್ತರ ಮನ್ಯಾರಾ ಪ್ರದೇಶದ ಸಿಮಾಂಜಿರೋ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದಾರೆ.

    ಪತ್ತೆಯಾಗಿರುವ ರತ್ನದ ಕಲ್ಲುಗಳನ್ನು ಬ್ಯಾಂಕ್​ ಆಫ್​ ತಾಂಜಾನಿಯಾ ಖರೀದಿಸಿದ್ದು, ಗಣಿ ಕೆಲಸಗಾರ ಸಾನಿನ್ಯು ಲೈಜರ್​ಗೆ ಚೆಕ್​ ಅನ್ನು ಹಸ್ತಾಂತರಿಸಲಾಗಿದೆ. ವಿಶೇಷವಾಗಿ ತಾಂಜಾನಿಯಾ ಅಧ್ಯಕ್ಷ ಜಾನ್​ ಮಾಗುಫುಲಿ ಅವರು ಲೈಜರ್​ಗೆ ಕರೆ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೀಗ ಲೈಜರ್​ಗೆ ಅದೃಷ್ಟ ಖುಲಾಯಿಸಿದ್ದು ಕೋಟ್ಯಾಧೀಶ್ವರರಾಗಿದ್ದಾರೆ. (ಏಜೆನ್ಸೀಸ್​)

    ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!

    ಇದನ್ನೂ ಓದಿ: ಹಾಡುವಾಗ ಛಿದ್ರಗೊಂಡ ಮೆದುಳಿನ ರಕ್ತನಾಳ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

    ತಲೆನೋವೇ ಈಕೆಗೆ ಅದೃಷ್ಟವಾಯ್ತು! ರಾತ್ರೋರಾತ್ರಿ ಆದ್ಳು ಕೋಟ್ಯಧಿಪತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts