More

    ಪ್ಯಾರಾಲಿಂಪಿಕ್ಸ್ ಸ್ಫೂರ್ತಿ; ಕೈಗಳಿಲ್ಲದ ಈ ಟೇಬಲ್ ಟೆನಿಸ್ ಆಟಗಾರ ಬಾಯಲ್ಲೇ ಪ್ಯಾಡಲ್​ ಹಿಡಿದು ಆಡ್ತಿದ್ದಾರೆ!

    ಟೋಕಿಯೊ: ಎಲ್ಲವೂ ಸರಿ ಇದ್ದು, ಸಾಧನೆಗೆ ವಿವಿಧ ನೆಪಗಳನ್ನು ನೀಡುವವರ ಮಧ್ಯೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಈ ಟೇಬಲ್ ಟೆನಿಸ್ ಆಟಗಾರ, ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದ್ದಾರೆ. ಎರಡೂ ಕೈಗಳಿಲ್ಲದ ಈ ಕ್ರೀಡಾಪಟು, ಬಾಯಿಯಲ್ಲೇ ಪ್ಯಾಡಲ್​ (ರ‌್ಯಾಕೆಟ್/ಬ್ಯಾಟ್​) ಹಿಡಿದು ಆಡುತ್ತಿದ್ದಾರೆ! ಸರ್ವ್ ಮಾಡಲು ಕಾಲಿನಿಂದಲೇ ಚೆಂಡು ಹಿಡಿದುಕೊಳ್ಳುತ್ತಾರೆ!

    ಈ ಮೂಲಕ ಎಲ್ಲರಿಗೂ ಸ್ಫೂರ್ತಿಯ ಚಿಲುಮೆಯಾಗಿರುವ ಈ ಆಟಗಾರನ ಹೆಸರು ಇಬ್ರಾಹಿಂ ಹಮತ್‌ಡೌ. ಈಜಿಪ್ಟ್‌ನ ಈ ಆಟಗಾರ ಬುಧವಾರ ಆರಂಭಗೊಂಡ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯ ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಹಾಂಗ್ ಕ್ಯೂ ಪಾರ್ಕ್ ವಿರುದ್ಧ ದಿಟ್ಟ ನಿರ್ವಹಣೆ ತೋರಿ ಗಮನಸೆಳೆದರು. ದೇಹ ಪ್ಯಾರಲೈಸ್ ಆಗಿದ್ದರೂ ಸಮರ್ಥ 2 ಕೈಗಳನ್ನು ಹೊಂದಿರುವ ಪಾರ್ಕ್ ವಿರುದ್ಧ ಇಬ್ರಾಹಿಂ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ 6-11, 4-11, 9-11ರಿಂದ ಸೋಲು ಕಂಡರೂ, ಅಮೋಘ ಆಟದ ಮೂಲಕ ಎಲ್ಲರ ಹೃದಯ ಗೆದ್ದರು.

    ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ಗೆ ಸಡಗರದ ಚಾಲನೆ, ಭಾರತ ತಂಡವನ್ನು ಮುನ್ನಡೆಸಿದ ತೆಕ್ ಚಂದ್

    48 ವರ್ಷದ ಇಬ್ರಾಹಿಂ ಹಮತ್‌ಡೌ ಅವರಿಗೆ ಇದು 2ನೇ ಪ್ಯಾರಾಲಿಂಪಿಕ್ಸ್ ಆಗಿದೆ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲೂ ಅವರ ಸ್ಪರ್ಧೆ ಸಾಕಷ್ಟು ಸ್ಫೂರ್ತಿ ತುಂಬಿತ್ತು. 2004ರಿಂದ ಅವರು ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.

    ‘ರೈಲು ಅಪಘಾತವೊಂದರಲ್ಲಿ ನಾನು ಎರಡೂ ಕೈಗಳನ್ನು ಕಳೆದುಕೊಂಡ ಬಳಿಕ 1983ರಲ್ಲಿ ಟೇಬಲ್ ಟೆನಿಸ್ ಆಟದ ಮೇಲೆ ಪ್ರೀತಿ ಬೆಳೆಸಿಕೊಂಡೆ. ಅಪಘಾತದ ಬಳಿಕ ನನಗೆ ಟೇಬಲ್ ಟೆನಿಸ್ ಮತ್ತು ುಟ್‌ಬಾಲ್ ಆಟವನ್ನು ಮಾತ್ರ ಆಡಲು ಸಾಧ್ಯವಿತ್ತು. ನಮ್ಮ ಊರಿನ ಕ್ರೀಡಾ ಕ್ಲಬ್‌ನಲ್ಲಿ ನನ್ನಿಬ್ಬರು ಸ್ನೇಹಿತರು ಟೇಬಲ್ ಟೆನಿಸ್ ಆಡುತ್ತಿದ್ದರು. ಆಗ ನಾನು ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ನನ್ನ ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಸ್ನೇಹಿತನೊಬ್ಬ, ನಿನಗೆ ಎಂದಿಗೂ ಈ ಆಟ ಆಡಲು ಸಾಧ್ಯವಿಲ್ಲವೆಂದು ಛೇಡಿಸಿದ. ಅದರಿಂದ ಸ್ಫೂರ್ತಿ ಪಡೆದು ನಾನೂ ಟೇಬಲ್ ಟೆನಿಸ್ ಆಡಲು ಪ್ರಾರಂಭಿಸಿದ್ದೆ’ ಎಂದು ಇಬ್ರಾಹಿಂ ಹಮತ್‌ಡೌ ಹಿಂದೊಮ್ಮೆ ಹೇಳಿಕೊಂಡಿದ್ದರು.

    2036, 2040ರ ಒಲಿಂಪಿಕ್ಸ್ ಕ್ರೀಡಾಕೂಟ ಆತಿಥ್ಯಕ್ಕೆ ಭಾರತ ಆಸಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts