More

    50 ರೂಪಾಯಿಗೆ 1 ಕೆ.ಜಿ. ಬಂಗುಡೆ!, ತಮಿಳುನಾಡಿನ ಮೀನಿನಿಂದಾಗಿ ಅಗ್ಗ , ಮುಗಿ ಬೀಳುತ್ತಿರುವ ಜನರು

    ಪುತ್ತೂರು: ತಮಿಳುನಾಡು, ಮಲ್ಪೆ ಹಾಗೂ ಮಂಗಳೂರು ಬಂದರಿನಲ್ಲಿ ಇತ್ತೀಚೆಗೆ ಬಂಗುಡೆ ಮೀನು ಯಥೇಚ್ಛವಾಗಿ ದೊರೆಯುತ್ತಿದ್ದು, ಜಿಲ್ಲೆಯ ಗ್ರಾಮೀಣ ಮೀನು ಮಾರುಕಟ್ಟೆಯಲ್ಲೀಗ ಬಂಗುಡೆ ಮೀನಿನ ಸುಗ್ಗಿ. ಪ್ರತಿ ಕೆ.ಜಿ. ಮೀನು 50 ರೂಪಾಯಿಗೆ ಸಿಗುತ್ತಿದ್ದು, ಜನ ಮುಗಿ ಬಿದ್ದು ಖರೀದಿಸುತ್ತಿದ್ದಾರೆ.
    ತಮಿಳುನಾಡಿನಲ್ಲಿ ಮಹಾಲಯ ಹಾಗೂ ನವರಾತ್ರಿ ಸಂದರ್ಭ ಮೀನಿಗೆ ಬೇಡಿಕೆ ಕಡಿಮೆ. ಇದರಿಂದ ಉಡುಪಿ ಹಾಗೂ ಮಂಗಳೂರು ಬಂದರಿನಿಂದ ಕಡಿಮೆ ಪ್ರಮಾಣದ ಮೀನು ತಮಿಳುನಾಡಿಗೆ ಸಾಗಾಟವಾಗುತ್ತದೆ. ಈ ವೇಳೆ ತಮಿಳುನಾಡಿನ ಬಂದರಿನಿಂದ ಹೆಚ್ಚು ಪ್ರಮಾಣದಲ್ಲಿ ಮೀನು ಇಲ್ಲಿಗೆ ಬರುತ್ತದೆ.
    ಕಳೆದೊಂದು ತಿಂಗಳಿನಿಂದ ಮೀನಿನ ಬೆಲೆ ಶೇ.50ರಷ್ಟು ಇಳಿಕೆಯಾಗಿದೆ. ಮಲ್ಪೆ, ಮಂಗಳೂರಿನ ಹೆಸರಲ್ಲಿ ಬಂಟ್ವಾಳ ಹಾಗೂ ಪುತ್ತೂರಿನ ಕೆಲವು ಮೀನು ಮಾರುಕಟ್ಟೆಗಳಲ್ಲಿ ತಮಿಳುನಾಡಿನ ಬಂಗುಡೆ ಮೀನುಗಳೇ ಮಾರಾಟವಾಗುತ್ತಿವೆ. ಎರಡು ದಿನಗಳಿಂದ ಉಪ್ಪಿನಂಗಡಿ ಸಮೀಪದ ಕಲ್ಲೇರಿ, ಕುಪ್ಪೆಟ್ಟಿ ಭಾಗದಲ್ಲಿ ಭಾರಿ ಮೀನು ಮಾರಾಟ ನಡೆದಿದೆ. ಬುಧವಾರ ಒಂದೇ ದಿನ 3 ಲಾರಿ ಮೀನು ಮಾರಾಟವಾಗಿದೆ. ಒಂದು ಬಾಕ್ಸ್(30 ಕೆ.ಜಿ.) ಮೀನಿನ ದರ 1500 ರೂ., 2 ಕೆ.ಜಿ. ಮೀನಿಗೆ 100 ರೂ. ದರವಿತ್ತು. ಕಡಿಮೆ ದರದ ಕಾರಣ ಹೋಟೆಲ್ ಮಾಲೀಕರು, ಸಾರ್ವಜನಿಕರು ದೂರದೂರುಗಳಿಂದಲೂ ಬಂದು ಹೆಚ್ಚು ಮೀನು ಖರೀದಿಸಿ ಫ್ರಿಜ್‌ಗಳಲ್ಲಿ ಇಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts