More

    151 ಕೋಟಿ ರೂ. ಇಎಸ್ಐ ಹಗರಣ: ಮಾಜಿ ಸಚಿವನ ಬಂಧನ

    ಹೈದರಾಬಾದ್​: ಇಎಸ್​ಐ (ನೌಕರರ ರಾಜ್ಯ ವಿಮೆ) ಕಾರ್ಪೊರೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ 151 ಕೋಟಿ ರೂಪಾಯಿಗಳ ಅವ್ಯವಹಾರ ಎಸಗಿರುವ ಅರೋಪ ಹೊತ್ತ ತೆಲುಗು ದೇಸಂ ಶಾಸಕಾಂಗ ಪಕ್ಷದ ಉಪನಾಯಕ ಮತ್ತು ಆಂಧ್ರಪ್ರದೇಶದ ಮಾಜಿ ಸಚಿವ ಕೆ.ಅಚನ್​ನಾಯ್ಡು ಅವರನ್ನು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ತೆಗೆದುಕೊಂಡಿದೆ.

    ಇಂದು ಬೆಳಗ್ಗೆ ಸುಮಾರು 7.30ಕ್ಕೆ ಶ್ರೀಕಾಕುಲಂ ಜಿಲ್ಲೆಯ ನಿಮ್ಮಡಾ ಗ್ರಾಮದಲ್ಲಿರುವ ಅವರ ಮನೆಯಿಂದ ಅಚನ್​ನಾಯ್ಡು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ವಿಶಾಖಪಟ್ಟಣಂನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

    ಇದನ್ನೂ ಓದಿ: ಕಾಶ್ಮೀರ ಭಾರತದ್ದು- ನಿಖರ ಭೂಪಟವನ್ನೇ ಪ್ರಸಾರ ಮಾಡಿತು ಪಾಕಿಸ್ತಾನದ ಪಿಟಿವಿ ನ್ಯೂಸ್!

    ಟಿಡಿಪಿ (ತೆಲಗು ದೇಸಂ ಪಾರ್ಟಿ) ಆಳ್ವಿಕೆಯಲ್ಲಿ ಇಎಸ್‌ಐ ಆಸ್ಪತ್ರೆಗಳಿಗೆ ಔಷಧಿ ಮತ್ತು ಸಲಕರಣೆಗಳ ಸಂಗ್ರಹದಲ್ಲಿ ಅಕ್ರಮ ಎಸಗಿರುವ ಆರೋಪ ಇವರ ಮೇಲಿದೆ. ವಿಮಾ ವೈದ್ಯಕೀಯ ಸೇವೆಗಳ (ಐಎಂಎಸ್) ನಿರ್ದೇಶನಾಲಯವು ಇಎಸ್‌ಐ ಆಸ್ಪತ್ರೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ 975 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಔಷಧಿಗಳು ಮತ್ತು ಇತರ ವಸ್ತುಗಳನ್ನು ಖರೀದಿಸುವಲ್ಲಿ ಆಗುತ್ತಿರುವ ಹಗರಣದ ಕುರಿತಂತೆ ತನಿಖೆ ಆರಂಭಿಸಿತ್ತು. ಆಗ ಈ ಹಗರಣ ಪತ್ತೆಯಾಗಿದೆ.

    ಟಿಡಿಪಿ ಹಿರಿಯ ನಾಯಕ ಚಂದ್ರಬಾಬು ಅವರ ನಿಕಟವರ್ತಿಯಾಗಿರುವ ಆಗಿನ ಸಚಿವ ಕೆ.ಅಚನ್​ನಾಯ್ಡು ಈ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದಿತ್ತು. ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಹಗರಣ ನಡೆದಾಗ ಹಿಂದಿನ ಟಿಡಿಪಿ ಸರ್ಕಾರದಲ್ಲಿ ಇವರು ಕಾರ್ಮಿಕ ಸಚಿವರಾಗಿದ್ದರು.

    ಇದನ್ನೂ ಓದಿ:  VIDEO: ಆನೆಮರಿ ಕುಡಿಯಿತು ಬಾಟಲಿ ಹಾಲು: ಮುದ್ದು ಮರಿಗೆ ನೆಟ್ಟಿಗರು ಫಿದಾ

    ತೆರೆದ ಟೆಂಡರ್‌ಗಳನ್ನು ಆಹ್ವಾನಿಸದೆ ಟೆಲೆ ಹೆಲ್ತ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಕೆಲಸದ ಆದೇಶಗಳನ್ನು ನೀಡುವಂತೆಕೆ.ಅಚನ್​ನಾಯ್ಡು ಅಂದಿನ ಐಎಂಎಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್​)

    ಕಿಸ್​ ಕೊಟ್ಟು ಕೊಟ್ಟು ಕರೊನಾಕ್ಕೆ ಬಲಿಯಾದ ದೇವಮಾನವ; ಮುತ್ತು ಪಡೆದವರಿಗೂ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts