More

    ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

    ನಾಗಮಂಗಲ: ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಜತೆಗೆ ಸ್ವಚ್ಛ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೇಳಿದರು.

    ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ದಿನನಿತ್ಯದ ಕಾರ್ಯಚಟುವಟಿಕೆ ಮುಗಿಸಿದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಇಲ್ಲವಾದಲ್ಲಿ ಕೈಗಳಲ್ಲಿ ಕ್ರಿಮಿಕೀಟಗಳು ಸೇರಿ ಏನನ್ನಾದರೂ ಸೇವಿಸುವ ಸಂದರ್ಭ ದೇಹಕ್ಕೆ ಸೇರಿ ಅನಾರೋಗ್ಯವನ್ನುಂಟು ಮಾಡುತ್ತವೆ. ಕೆಲವರು ಶೋಕಿಗಾಗಿ ಕೈಗಳಲ್ಲಿ ಉದ್ದನೆಯ ಉಗುರು ಬಿಡುತ್ತಾರೆ. ಅದರಿಂದ ಅವರ ಆರೋಗ್ಯಕ್ಕೆ ದುಷ್ಪರಿಣಾಮಗಳೇ ಹೆಚ್ಚಾಗಿರುತ್ತವೆ ಎಂದರು.

    ಬೆಳ್ಳೂರು ಪಟ್ಟಣದ ಸಂತೆಮಾಳದಲ್ಲಿ ವೈದ್ಯ ವಿದ್ಯಾರ್ಥಿಗಳು ಕೈ ತೊಳೆಯುವ ಸರಿಯಾದ ವಿಧಾನವನ್ನು, ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಿ ಕೈ ತೊಳೆಯುವ ಮಹತ್ವ ಕುರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಡಾ.ಮಧುರಾ, ಡಾ.ವಿಜಯ ಹೂಗಾರ್, ಶ್ರೀಮತಿ ವೀಣಾ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜು, ಪ್ರಭುದೇವ್, ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts