More

    ವೈದ್ಯಕೀಯ ಉಪಕರಣ ವಿತರಣೆ

    ಘಟಪ್ರಭಾ: ಕರೊನಾ ಸೋಂಕಿತರ ಆರೈಕೆ ಮತ್ತು ಸುರಕ್ಷತೆಗಾಗಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಡುತ್ತಿರುವ ಮಾನವೀಯ ಮೌಲ್ಯಗಳು ಮಾದರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದ್ದಾರೆ. ಶನಿವಾರ ಸ್ಥಳೀಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೊನಾ ಸೋಂಕಿತರಿಗೆ ಕೊಡಮಾಡಿದ ವೈದ್ಯಕೀಯ ಉಪಕರಣಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಹಾಗೂ ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್.ಬೆಣಚಿನಮರಡಿ ಮಾತನಾಡಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಇಲ್ಲಿಯ ಕೋವಿಡ್ ಕೇರ್ ಸೆಂಟರಗೆ 300 ಎನ್-95 ಮಾಸ್ಕ್, 330 ಪಿಪಿಇ ಕಿಟ್, 300 ಕೈಗವಸು, 330 ಮುಖಗವಸು ಮತ್ತಿತರ ವಸ್ತುಗಳನ್ನು ವಿತರಿಸಿದರು. ಮೂಡಲಗಿ ತಹಸೀಲ್ದಾರ್ ದಿಲಶಾದ ಮಹಾತ, ಅಜಿತ ಮನ್ನಿಕೇರಿ, ವೆಂಕಟೇಶ ಮುರನಾಳ, ಹಾಲಪ್ಪ ಬಾಲದಂಡಿ, ಡಾ.ಮಹೇಶ ಕೋಣಿ, ಶಂಕರ ಅಂಗಡಿ, ಬಾವಿಮನಿ ಮತ್ತಿತರರು ಉಪಸ್ಥಿತರಿದ್ದರು.

    ಕರೊನಾಗೆ ಭಯಪಡಬೇಕಿಲ್ಲ. ಈಗಾಗಲೇ ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ದಾಖಲಾಗಿರುವ ಸೋಂಕಿತರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಕಿಟ್ ವಿತರಿಸಲಾಗುತ್ತಿದೆ. ಮಲ್ಲಾಪುರ ಪಿ.ಜಿ., ಮೂಡಲಗಿಯಲ್ಲಿ ಆಕ್ಸಿಜನ್ ಪೂರೈಕೆಯ ಘಟಕ ಪ್ರಾರಂಭಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಡ್ ವಿಸ್ತರಿಸಿ ಅಲ್ಲಿ ಕೇಂದ್ರೀಯ ಆಮ್ಲಜನಕ ಪೂರೈಕೆ ಘಟಕ ಪ್ರಾರಂಭಿಸಲಾಗುವುದು.
    | ಬಾಲಚಂದ್ರ ಜಾರಕಿಹೊಳಿ ಶಾಸಕರು, ಕೆಎಂಎಫ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts