More

    ಊಟದ ದರದಲ್ಲಿ ಶೇ. 7 ಇಳಿಕೆ!

    ನವದೆಹಲಿ: ಕಳೆದ ವರ್ಷದ ಅಕ್ಟೋಬರ್​ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಅಕ್ಟೋಬರ್​ನಲ್ಲಿ ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ಬೆಲೆಯಲ್ಲಿ ಇಳಿಕೆಯಾಗಿದೆ. ಸಸ್ಯಾಹಾರಿ ಊಟ ಶೇ. 5, ಮಾಂಸಾಹಾರಿ ಊಟದ ಬೆಲೆ 7ರಷ್ಟು ಕುಸಿದಿದೆ ಎಂದು ದೇಶೀಯ ರೇಟಿಂಗ್​ ಏಜೆನ್ಸಿ ಕ್ರಿಸಿಲ್​ ತಿಳಿಸಿದೆ.

    ವರ್ಷದಿಂದ ವರ್ಷಕ್ಕೆ ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಲೆಗಳು ಕುಸಿದಿರುವುದರಿಂದ ಸಸ್ಯಾಹಾರಿ ಊಟದ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ 29 ರೂಪಾಯಿ ಇದ್ದ ಸಸ್ಯಾಹಾರಿ ಊಟದ ಬೆಲೆ ಈ ವರ್ಷ 27.50 ಆಗಿದ್ದು, ಒಟ್ಟಾರೆ ಪರಿಸ್ಥಿತಿ ಸುಧಾರಿಸಿದೆ ಎಂದು ವರದಿ ಹೇಳಿದೆ.

    ವರದಿಯ ಪ್ರಕಾರ, ಬ್ರಾಯ್ಲರ್​ ಕೋಳಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.5 ರಿಂದ 7ರಷ್ಟು ಕುಸಿದಿದ್ದು, ಮಾಂಸಾಹಾರಿ ಊಟದ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಕಳೆದ ವರ್ಷ 62.70 ರೂಪಾಯಿ ಇದ್ದ ಮಾಂಸಾಹಾರಿ ಊಟದ ಬೆಲೆ ಈ ವರ್ಷ 58.40 ರೂಪಾಯಿ ಆಗಿದೆ ಎಂದು ತಿಳಿಸಿದೆ.

    ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ನವೆಂಬರ್​ನಲ್ಲಿ ಊಟದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ದೇಶೀಯ ರೇಟಿಂಗ್​ ಏಜೆನ್ಸಿ ಎಚ್ಚರಿಸಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವೆಚ್ಚದಲ್ಲಿ ಅನುಕ್ರಮವಾಗಿ ಶೇ.14 ಮತ್ತು 8ರಷ್ಟಿರುವ ಇಂಧನ ವೆಚ್ಚವು ಶೇ.14ರಷ್ಟು ಇಳಿಕೆಯಾಗಿದೆ ಎಂದು ಕ್ರಿಸಿಲ್​ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 14.2 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ 1,053 ರಿಂದ 903 ರೂ.ಗೆ ಇಳಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts