More

    ತಮಗೆ ತಾವೇ ದುಬಾರಿ ಕಾರು ಗಿಫ್ಟ್​ ಕೊಟ್ಟುಕೊಂಡ MBA ಚಾಯ್​ವಾಲಾ: ಅಮೆರಿಕದಲ್ಲಿ ಟೀ ಉದ್ಯಮ ಸ್ಥಾಪನೆಗೆ ಸಜ್ಜು

    ಭೋಪಾಲ್​: ಎಂಬಿಎ ಬಿಟ್ಟು ಟೀ ಮಾರಾಟಕ್ಕಿಳಿದ ಚಾಯ್​ವಾಲಾ ಪ್ರಫುಲ್​ ಬಿಲ್ಲೋರ್​ ಅನೇಕರಿಗೆ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ. ಮಿಲಿಯನೇರ್​ ಚಾಯ್​ವಾಲಾ ಎನಿಸಿಕೊಂಡಿರುವ ಪ್ರಫುಲ್ ತಮಗೆ ತಾವೇ ಮರ್ಸಿಡೀಸ್​ ಜಿಎಲ್​ಇ 300ಡಿ ಕಾರನ್ನು ಉಡುಗೊರೆ ಕೊಟ್ಟುಕೊಂಡಿದ್ದಾರೆ.

    ತಮ್ಮ ಹೊಸ ವಾಹನದ ಚಿತ್ರಗಳನ್ನು ಹಂಚಿಕೊಂಡಿರುವ ಪ್ರಫುಲ್​, ನಮ್ಮ ಹೊಸ ಮರ್ಸಿಡಿಸ್ ಜಿಎಲ್​ಇ 300ಡಿನಲ್ಲಿ ನಮ್ಮ ಸಾಹಸಮಯ ಮನೋಭಾವವನ್ನು ಹೊರಹಾಕಿ ಮತ್ತು ರಸ್ತೆಗಳನ್ನು ಸ್ಟೈಲ್ ಮತ್ತು ಗ್ರೇಸ್‌ನೊಂದಿಗೆ ವಶಪಡಿಸಿಕೊಳ್ಳಿ, ಇದು ಪರಿಶ್ರಮ ಮತ್ತು ಸ್ಫೂರ್ತಿಯ ಶಕ್ತಿಗೆ ಸಾಕ್ಷಿಯಾಗಿದೆ. ಜೀವಮಾನವಿಡೀ ಉಳಿಯುವಂತಹ ನೆನಪುಗಳನ್ನು ಸೃಷ್ಟಿಸಲು ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಪ್ರಫುಲ್​ ಅವರ ಪೋಸ್ಟ್​ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನೀವು ಅನೇಕ ಯುವಕರಿಗೆ ಆದರ್ಶವಾಗಿದ್ದೀರಿ ಎಂದು ನೆಟ್ಟಿಗರು ಕೊಂಡಾಡಿದ್ದಾರೆ ಮತ್ತು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

    ಇದೇ ಸಂದರ್ಭದಲ್ಲಿ ಎಂಬಿಎ ಚಾಯ್​ವಾಲಾ ಪ್ರಫುಲ್​ ಅವರು ಭಾರತದ ಅನೇಕ ನಗರಗಳಲ್ಲಿ ತಮ್ಮ ಟೀ ವ್ಯಾಪಾರದಲ್ಲಿ ಯಶಸ್ಸು ಸಾಧಿಸಿದ ಬಳಿಕ ಇತ್ತೀಚೆಗೆ ತನ್ನ ವ್ಯಾಪ್ತಿಯನ್ನು ಜಾಗತಿಕವಾಗಿ ವಿಸ್ತರಿಸಲು ಯೋಜಿಸುತ್ತಿರುವುದಾಗಿ ಘೋಷಿಸಿದ್ದಾರೆ. ಬ್ರ್ಯಾಂಡ್ ಈಗ ವಿಶಿಷ್ಟವಾದ ಚಹಾ ಮಿಶ್ರಣಗಳು ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಅಮೆರಿಕಕ್ಕೆ ವಿಸ್ತರಿಸಲು ಯೋಜಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಅಂದಹಾಗೆ ಎಂಬಿಎ ಓದಿರುವ ಪ್ರಫುಲ್​ ಯಾವುದೇ ಕೆಲಸ ಸಿಗಲಿಲ್ಲ ಎಂದು ಕೊರಗದೆ ತಮ್ಮಲ್ಲಿರುವ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಇಂದು ಮಿಲಿಯನೇರ್​ ಆಗಿದ್ದಾರೆ. ಯಾವುದೇ ಕೆಲಸವಾಗಲಿ ಚಿಕ್ಕದು, ದೊಡ್ಡದು ಎಂಬುದಿಲ್ಲ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಕಂಡಿತ ಎನ್ನುವ ಮಾತನ್ನು 24 ವರ್ಷದ ಪ್ರಫುಲ್​ ನಿರೂಪಿಸಿದ್ದಾರೆ. ಟೀ ಮಾರಿಯೇ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾರೆ.

    ಮಧ್ಯಪ್ರದೇಶದ ಪ್ರಫುಲ್​ ಸದ್ಯ ಗುಜರಾತ್​ನ ಅಹಮದಾಬಾದ್​ನಲ್ಲಿ ನೆಲೆಸಿದ್ದು, ದೇಶಾದ್ಯಂತ ಎಂಬಿಎ ಚಾಯ್​ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ. ಕೊನೆಗೆ ಒಂದು ನಿರ್ಧಾರಕ್ಕೆ ಬರುವ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್​ನ ರೆಸ್ಟೋರೆಂಟ್​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿರುತ್ತಾರೆ. ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್​ ಕೊನೆಗೆ ತನ್ನದೇ ಸ್ವಂತ ಟೀ ಶಾಪ್​ ತೆರೆಯುತ್ತಾರೆ.

    ವ್ಯವಹಾರದ ಮೊದಲ ದಿನ, ಹಾಲನ್ನು ಹಾಳು ಮತ್ತು ಹೆಚ್ಚಿನ ಸಕ್ಕರೆ ಹಾಕುವ ಮೂಲಕ ಕೇವಲ ಒಂದು ಕಪ್ ಚಹಾವನ್ನು ಮಾತ್ರ ಪ್ರಫುಲ್​ ಮಾರಾಟ ಮಾಡುತ್ತಾರೆ. ಇದಾದ ಬಳಿಕ ದಿನ ಕಳೆದಂತೆ ಟೀ ಮಾಡುವುದರಲ್ಲಿ ಪ್ರಫುಲ್​ ನಿಸ್ಸೀಮರಾಗುತ್ತಾರೆ. ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ. ಆರಂಭದಲ್ಲಿ ಒಂದು ತಿಂಗಳಿಗೆ 15 ಸಾವಿರ ಸಂಪಾದನೆ ಮಾಡುತ್ತಿರುತ್ತಾರೆ. ಇದರ ನಡುವೆಯೇ ಕುಟುಂಬದ ವಿರೋಧದ ನಡುವೆಯೂ ಎಂಬಿಎಗೆ ಪ್ರಫುಲ್​ ಗುಡ್​ ಬೈ ಹೇಳುತ್ತಾರೆ.

    ಇದಾದ ಬಳಿಕ ಸಾಕಷ್ಟು ಹೋರಾಟ ಮಾಡುವ ಪ್ರಫುಲ್​ ಅಂತಿಮವಾಗಿ ತನ್ನ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ. ಇದೀಗ ವರ್ಷಕ್ಕೆ 3 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಎಂಬಿಎ ಬಿಟ್ಟು ಟೀ ಮಾರಾಟಕ್ಕಿಳಿದ ಯುವಕನ ಯಶೋಗಾಥೆ ಕೇಳಿದ್ರೆ ಫಿದಾ ಆಗೋದು ಗ್ಯಾರೆಂಟಿ!

    ಜೆಡಿಎಸ್ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ಮದುವೆ ಆಗೋದಾಗಿ ನಂಬಿಸಿದಾತನಿಗೆ ಧರ್ಮದೇಟು ನೀಡಿದ ಯುವತಿ!

    ಆಸ್ತಿ ಕೊಡಲ್ಲ, ಮದುವೆ ಮಾಡಿಸಲ್ಲ ಎಂದು ಮನನೊಂದು ಪ್ರಾಣ ತ್ಯಾಗ ಮಾಡಿದ ಯುವಕ ಸಾವಿನಲ್ಲೂ ಶಾಲಾ ಪ್ರೇಮ ಮೆರೆದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts