More

    ನಮ್ಮ ಬೆಂಬಲ ಬಿಜೆಪಿಗೆ ಎಂದ್ರು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ; ಕಾಂಗ್ರೆಸ್​ ವಿರುದ್ಧ ಕಿಡಿ

    ನವದೆಹಲಿ: ಬಹುಜನ ಸಮಾಜ ಪಾರ್ಟಿ(ಬಿಎಸ್​ಪಿ) ಮುಖ್ಯಸ್ಥೆ ಮತ್ತು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಭಾರತ-ಚೀನಾ ಸಂಘರ್ಷದ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

    ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ವಿಚಾರದಲ್ಲಿ ನಮ್ಮ ಬಹುಜನ ಸಮಾಜ ಪಕ್ಷ, ಭಾರತೀಯ ಜನತಾ ಪಾರ್ಟಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಸಹಮತ ಇರುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಪಟ್ಟ ಬಹುಮುಖ್ಯ ವಿಚಾರ. ಬಿಜೆಪಿ, ಕಾಂಗ್ರೆಸ್​ ಇದೇ ವಿಚಾರವನ್ನು ಇಟ್ಟುಕೊಂಡು ಪರಸ್ಪರ ಆರೋಪ, ಪ್ರತ್ಯಾಪ ಮಾಡುತ್ತಿರಬಹುದು. ಆದರೆ ನಮಗೆ ಅದೆಲ್ಲ ಮುಖ್ಯವಲ್ಲ ಎಂದಿದ್ದಾರೆ. ಇದೇ ಸಂದರ್ಭವನ್ನು ಚೀನಾ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.
    ನಮ್ಮ ಬಿಎಸ್​ಪಿ ಹಿಂದುಳಿದ ಜನರಿಗಾಗಿ ರಚನೆಯಾದ ಪಕ್ಷ. ನಮ್ಮ ಪಕ್ಷ ರಚನೆಯಾದ ಸಂದರ್ಭದಲ್ಲಿ ಕಾಂಗ್ರೆಸ್​ ಸರ್ಕಾರವಿತ್ತು. ಆ ಪಕ್ಷ ಹಿಂದುಳಿದವರಿಗಾಗಿ ಏನಾದರೂ ಅನುಕೂಲ ಮಾಡಿತ್ತಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: VIDEO: ಮಹಿಳೆಗೆ ಮುದ್ದಾಗಿ ಕೃತಜ್ಞತೆ ಸಲ್ಲಿಸಿದ ಪೆಂಗ್ವಿನ್​ ಪಕ್ಷಿ..ತಮಾಷೆಯಲ್ಲ ಅದರ ಮುಗ್ಧತೆ ನೀವೂ ನೋಡಿ…

    ಅಷ್ಟೇ ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್​ ಎರಡೂ ಪಕ್ಷಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ಬಿಎಸ್​ಪಿ ಯಾವತ್ತೂ ಇದೆರಡೂ ಪಕ್ಷಗಳಿಗೆ ಗೊಂಬೆಯಾಗುವುದಿಲ್ಲ.ನಮ್ಮದು ಸ್ವತಂತ್ರ ಪಕ್ಷ. ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದೇವೆ ಎಂದು ಹೇಳಿದರು.
    ಈಗಲೂ ಅಷ್ಟೇ, ಕೊವಿಡ್​-19 ಸಂದರ್ಭದಲ್ಲಿ ಅದೆಷ್ಟೋ ವಲಸೆ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಆದರೆ ಕಾಂಗ್ರೆಸ್​ ಆಡಳಿತ ಇರುವ ರಾಜ್ಯಗಳಲ್ಲಿ ಆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಲಾಗಿಲ್ಲ. ಅವರ ರಕ್ಷಣೆ, ಉದ್ಯೋಗಕ್ಕಾಗಿ ಏನೂ ವ್ಯವಸ್ಥೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.(ಎಜೆನ್ಸೀಸ್​)

    ನೇಣು ಹಾಕಿಕೊಂಡ ಬಾಲಕನ ಶವ ಕೆಳಗಿಳಿಸಲು 15 ತಾಸು ಕಾದ ಪೊಲೀಸರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts