More

    ಮಾಯ್ಕಾರ ಮಾದಪ್ಪ ವಿಶೇಷ ಸಂಚಿಕೆ ಬಿಡುಗಡೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಶುಭಹಾರೈಕೆ | ವಿಜಯವಾಣಿ ಪ್ರಯತ್ನಕ್ಕೆ ಗೃಹ ಸಚಿವರ ಶ್ಲಾಘನೆ

    ಬೆಂಗಳೂರು: ಮಲೆ ಮಹದೇಶ್ವರರ ಕುರಿತು ‘ವಿಜಯವಾಣಿ’ ಹೊರತಂದಿರುವ 320 ಪುಟಗಳ ‘ಮಾಯ್ಕಾರ ಮಾದಪ್ಪ’ ವಿಶೇಷ ಸಂಚಿಕೆಯನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ವಿಜಯವಾಣಿ’ ಯಾವಾಗಲೂ ಹೊಸತನದ ಪ್ರಯತ್ನ ಮಾಡುತ್ತಾ ಬಂದಿದೆ. ಈ ಬಾರಿ ಯುಗಾದಿ ಹಬ್ಬದ ಸಂದರ್ಭ ‘ಮಾಯ್ಕಾರ ಮಾದಪ್ಪ’ ಶೀರ್ಷಿಕೆಯಡಿ ವಿಶೇಷ ಸಂಚಿಕೆ ಹೊರತರುವ ಮೂಲಕ ತನ್ನ ಪ್ರಯತ್ನಗಳನ್ನು ಮುಂದುವರಿಸಿರುವುದು ಅಭಿನಂದನೀಯ ಎಂದರು.

    320 ಪುಟಗಳ ಈ ವಿಶೇಷ ಸಂಚಿಕೆಯನ್ನು ವಿಭಿನ್ನ ಮತ್ತು ವಿಶೇಷವಾಗಿ ಹೊರತಂದಿರುವುದಲ್ಲದೆ, ಜನರ ಭಾವನೆ, ಭಕ್ತಿಯನ್ನು ಅರ್ಥ ಮಾಡಿಕೊಂಡು ಎಲ್ಲ ಅಂಶಗಳನ್ನು ಜನರಿಗೆ ಇಡಿಯಾಗಿ ಸಿಗುವಂತೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

    ಭಕ್ತರ ದೊಡ್ಡ ಸಮೂಹವನ್ನೇ ಹೊಂದಿರುವ ಪೂಜ್ಯನೀಯ ಮಹದೇಶ್ವರರ ಬಗ್ಗೆ ಹಲವು ಜಾನಪದ ನಂಬಿಕೆಗಳಿವೆ. ಇಂತಹ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ವಿಶೇಷ ಸಂಚಿಕೆ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ‘ವಿಜಯವಾಣಿ’ ಮೊದಲಿನಿಂದಲೂ ಜನರ ವಿಶ್ವಾಸ ಗಳಿಸಿಕೊಂಡಿರುವ ಕನ್ನಡದ ನಂ. 1 ದಿನಪತ್ರಿಕೆಯಾಗಿದೆ. ಇದೇ ರೀತಿಯ ಹೊಸತನಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂಬ ಆಶಯ ವ್ಯಕ್ತಪಡಿಸಿದರು.

    ಸಂಚಿಕೆ ಉದ್ದೇಶ, ವಿಶೇಷ

    ಶರಣ ಚಳವಳಿಯ ನಂತರ ದಕ್ಷಿಣ ಭಾಗದಲ್ಲಿ ಕೆಲವು ಸಮಾಜ ಸುಧಾರಕರು ಕಾಣಿಸಿಕೊಂಡರು. ಅವರೆಲ್ಲರೂ ಪ್ರಮುಖವಾಗಿ ಧರ್ಮದ ಮಾರ್ಗದಲ್ಲೇ ಸಮಾಜದಲ್ಲಿ ಬದಲಾವಣೆ ಬಯಸಿದವರೇ ಆಗಿದ್ದರು. ಅವರಲ್ಲಿ ಹೆಚ್ಚು ಪ್ರಕಾಶಮಾನಕ್ಕೆ ಬಂದವರು ಮಹದೇಶ್ವರರು. ಧರ್ಮದ ಹಿನ್ನೆಲೆಯಲ್ಲಿ ಮಹಿಳೆಯರ ಶೋಷಣೆ, ಮೌಢ್ಯ- ಕಂದಾಚಾರಗಳ ವಿರುದ್ಧ ದನಿ ಎತ್ತಿ, ರಾಜ್ಯದ ಗಡಿ ಭಾಗದಲ್ಲಿ ದೊಡ್ಡ ಬದಲಾವಣೆಗೆ ಕಾರಣರಾದರು. ಮಹದೇಶ್ವರರು ಮಾಡಿರುವ ಕೆಲಸಗಳಲ್ಲಿ ಅತಿಹೆಚ್ಚು ಕತೆ ಹಾಗೂ ಜಾನಪದ ಹಾಡುಗಳ ರೂಪದಲ್ಲಿ ಪ್ರಕಟಗೊಂಡಿವೆ. ಅವರ ಬದುಕಿನ ಸತ್ಯ ಘಟನೆಗಳು ತೀರಾ ಕಡಿಮೆ ಪ್ರಮಾಣದಲ್ಲಿ ಇವೆ. ಅವೂ ಕೂಡ ವಿಶ್ವವಿದ್ಯಾಲಯದ ಹಂತದಲ್ಲಿ ಮಾತ್ರ ಚರ್ಚೆಗೆ ಒಳಗಾಗಿವೆ.

    ಒಂದು ಮಾಧ್ಯಮವಾಗಿ ಸಮಾಜ ಸುಧಾರಣೆಯ ಹರಿಕಾರನ ಬದುಕಿನ ಎಲ್ಲ ಮಜಲುಗಳನ್ನು ಪರಿಚಯಿಸುವ ಉದ್ದೇಶದಿಂದ ‘ವಿಜಯವಾಣಿ’ ದಿನಪತ್ರಿಕೆ ಇಂತಹದ್ದೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದೆ. ಮಹದೇಶ್ವರರ ಸಾಮಾಜಿಕ, ಧಾರ್ವಿುಕ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ‘ವಿಜಯವಾಣಿ’ ಯಶಸ್ವಿ ಪ್ರಯತ್ನ ಮಾಡಿದೆ.

    ಮಹದೇಶ್ವರರ ಹುಟ್ಟು, ಬೆಳವಣಿಗೆ, ಸಂಚಾರ, ಸ್ಥಳ ಮಹಿಮೆಗಳು, ಕಾವ್ಯದಲ್ಲಿ ಬರá-ವ ಹಲವು ಪಾತ್ರಗಳು ಮತ್ತು ಪ್ರಸಂಗಗಳು, ಮಾದೇಶ್ವರರ ಬಗ್ಗೆ ಇರುವ ನಂಬಿಕೆ, ಭಕ್ತಿ, ದೃಷ್ಟಿಕೋನ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಇತಿಹಾಸ, ಜನಪದದ ನೆಲೆಯಲ್ಲಿ ಮಹದೇಶ್ವರರ ಮಹಿಮೆ ಸೇರಿ ಹತ್ತು ಹಲವು ವಿಶೇಷಗಳನ್ನು ಮಾಯ್ಕಾರ ಮಾದಪ್ಪ ವಿಶೇಷ ಸಂಚಿಕೆ ಒಳಗೊಂಡಿದೆ.

    ಕರೊನಾ ವೈರಸ್​ ಸೋಂಕು ತಡೆ ಸಂಪೂರ್ಣ ಜವಾಬ್ದಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್​ಗೆ ವಹಿಸಿದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts