More

    ವಾತ್ಸಲ್ಯಮಯಿ ಸೌಹಾರ್ದ ವರ್ಷವಾಗಲಿ-2024

    ರಿಪ್ಪನ್‌ಪೇಟೆ: ನೂತನ ವರ್ಷ- 2024 ಶಾಂತಿ-ನೆಮ್ಮದಿಯ, ಸಂಘರ್ಷರಹಿತ ಎಂಬ ಶುಭ ಭಾವನೆ ಮೂಡಬೇಕೆಂದು ಹೊಂಬುಜ ಜೈನಮಠದ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

    ಹೊಸ ವರ್ಷದ ಅಂಗವಾಗಿ ಸೋಮವಾರ ಹೊಂಬುಜ ಜೈನಮಠದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಶ್ರೀಗಳು, ಜನವರಿ ಒಂದರಂದು ಶುಭ ಸಂಕಲ್ಪ ಮಾಡುವ ಮೂಲಕ ನವ ವರ್ಷಾಚರಣೆ ನವೋಲ್ಲಾಸ ತರಲಿ. ಸರ್ವರೂ ತಮ್ಮ ತಮ್ಮ ಪರಿಸರದ, ನಾಡಿನ, ರಾಷ್ಟ್ರದ ಅಭ್ಯುದಯದ ಯೋಜನೆಗಳಿಗೆ ಸಹಕಾರ ನೀಡಬೇಕು. ಆಂತರಿಕವಾಗಿ ಭಾರತೀಯರಾದ ನಾವು ಸೌಹಾರ್ದಯುತ ದಿನಚರಿಗೆ ಬದ್ಧರಾಗಬೇಕು ಎಂದರು.
    ನೂತನ ವರ್ಷದಲ್ಲಿ ಸರ್ವರೂ ವೈಯಕ್ತಿಕವಾಗಿ ಯಶಸ್ಸಿನತ್ತ ಮುನ್ನಡೆಯುವ ಸದ್ಭಾವನೆಯ ದಾರಿಯನ್ನು ಅನುಸರಿಸುವಂತಾಗಲಿ. ಶ್ರೇಷ್ಠ ಗುಣಮಟ್ಟದ ಶಿಕ್ಷಣಾಲಯಗಳಲ್ಲಿ ವಿದ್ಯಾರ್ಜನೆ ಮಾಡಿ ವಿಶ್ವದಲ್ಲಿ ರಾಷ್ಟ್ರವನ್ನು ಅಗ್ರಪಂಕ್ತಿಯಲ್ಲಿ ಮನ್ನಣೆ ದೊರಕಿಸಿ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೃಷಿ-ಕ್ಷೇತ್ರಗಳಲ್ಲಿ ಯಶಸ್ಸು ಲಭಿಸುವಂತಾಗಲೆಂದು ಅಪೇಕ್ಷಿಸುತ್ತ, ಅಹಿಂಸಾತ್ಮಕ ವಾತ್ಸಲ್ಯಮಯಿ ಜೀವನ ಧ್ಯೇಯವೇ ಭಾರತೀಯ ಮಾನವ ಧರ್ಮ ಎಂದು ಹೇಳಿದರು.
    ತಮಿಳುನಾಡು, ಮಹಾರಾಷ್ಟ್ರ, ಗುಜರಾತ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts