More

    ಮತ್ತೆ ಮಾಯಾಮೃಗ: ಮುಂದುವರಿದ ಕಥೆ, ಮುಂದಿನ ತಲೆಮಾರಿನ ಕಥೆ..

    ಬೆಂಗಳೂರು: ‘ಮಾಯಾಮೃಗ’. 1998ರಿಂದ 2000ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ಟಿ.ಎನ್. ಸೀತಾರಾಂ, ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ನಿರ್ದೇಶನದ ಈ ಧಾರಾವಾಹಿಯನ್ನು ಜನ ಇಂದಿಗೂ ಮರೆತಿಲ್ಲ. ಈಗ 23 ವರ್ಷಗಳ ನಂತರ ಮತ್ತೊಮ್ಮೆ ಮಾಯಾಮೃಗ ಓಡಲು ಸಜ್ಜಾಗಿದೆ.

    ಈ ಧಾರಾವಾಹಿಯ ಕುರಿತು ಮಾತನಾಡುವ ಸೀತಾರಾಂ, ‘ಇದು ‘ಮಾಯಾಮೃಗ’ದ ಮುಂದಿನ ಕಥೆ, ಮುಂದಿನ ತಲೆಮಾರಿನ ಕಥೆ. ಈ 20 ವರ್ಷಗಳಲ್ಲಿ ಮನಸ್ಥಿತಿ, ಯೋಚನೆ ಎಲ್ಲವೂ ಬದಲಾಗಿದೆ. ಆಗ 100 ರೂ. ಅನ್ನೋದೇ ದೊಡ್ಡದಾಗಿತ್ತು. ಈಗ ಎಲ್ಲರ ಕೈಯಲ್ಲೂ ದುಡ್ಡು ಓಡಾಡುತ್ತಿದೆ. ದುಡ್ಡು ಜಾಸ್ತಿ ಇದ್ದರೂ ಕ್ಷೋಭೆ ಹೆಚ್ಚಾಗಿದೆ. ಮನಸ್ಸು ಪ್ರಕ್ಷಬ್ಧವಾಗಿದೆ. ನೈತಿಕತೆ ಅಷ್ಟಾಗಿ ಬಾಧಿಸುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಎರಡು ತಲೆಮಾರುಗಳ ಕಥೆ ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ.

    ‘ಮತ್ತೆ ಮಾಯಾಮೃಗ’ದಲ್ಲಿ ಮೂಲ ಧಾರಾವಾಹಿಯಲ್ಲಿದ್ದ ಪಾತ್ರಧಾರಿಗಳ ಜತೆಗೆ, ಅವರ ಮುಂದಿನ ತಲೆಮಾರಿನವರೂ ಇರುತ್ತಾರಂತೆ. ‘ಈ ಎರಡೂ ತಲೆಮಾರಿನವರು ಏನನ್ನು ಅನುಭವಿಸುತ್ತಿದ್ದಾರೆ ಎಂದು ಹೇಳುವ ಪ್ರಯತ್ನ. ಇದೊಂದು ರಿಲೇ ರೇಸ್ ಇದ್ದಂತೆ. ಇಲ್ಲಿ ಇಬ್ಬರೂ ಓಡುತ್ತಾರೆ’ ಎಂದು ಧಾರಾವಾಹಿಯ ಚಿತ್ರಣ ಕೊಡುತ್ತಾರೆ ಸೀತಾರಾಂ. ಮೂಲ ಧಾರಾವಾಹಿಯಲ್ಲಿದ್ದ ಮಾಳವಿಕಾ, ಅವಿನಾಶ್, ರಾಜೇಶ್ ನಟರಂಗ, ಎಂ.ಡಿ. ಪಲ್ಲವಿ, ವೀಣಾ ಸುಂದರ್ ಸೇರಿ ಕೆಲವರು ಇಲ್ಲೂ ಮುಂದುವರಿಯಲಿದ್ದಾರೆ. ಇನ್ನು ಇಂದಿನ ತಲೆಮಾರನ್ನು ಮೇಘಾ, ಸಿರಿ ರವಿಕುಮಾರ್ ಪ್ರತಿನಿಧಿಸುತ್ತಾರಂತೆ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಪ್ರಾರಂಭವಾಗಿದೆ. ಅ.19ರಿಂದ ರಾತ್ರಿ 9ಕ್ಕೆ ಸಿರಿಕನ್ನಡದಲ್ಲಿ ಪ್ರಸಾರವಾಗಲಿದೆ.

    ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

    ಗುಲಾಮಗಿರಿಯ ಮತ್ತೊಂದು ಗುರುತನ್ನು ಇಂದು ತೆಗೆಯಲಾಗಿದೆ ಎಂದ ಮೋದಿ: ಕರ್ತವ್ಯ ಪಥ ಉದ್ಘಾಟನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts