More

    ಮಟ್ಕಾ ದಂಧೆ ಪ್ರಕರಣ ಕಂಡರೆ ಕ್ರಮ ; ರೌಡಿಶೀಟರ್‌ಗಳಿಗೆ ಎಸ್‌ಪಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಎಚ್ಚರಿಕೆ

    ಮಧುಗಿರಿ : ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಡಿವೈಎಸ್ಪಿ ಕೆ.ಜೆ.ರಾಮಕೃಷ್ಣ ಅವರಿಗೆ ಎಸ್‌ಪಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಸೂಚಿಸಿದರು.

    ಪಟ್ಟಣದ ರಾಜೀವ್ ಗಾಂಧಿ ಕ್ರೆಡಾಂಗಣದಲ್ಲಿ ಬುಧವಾರ ಮಧುಗಿರಿ ಉಪವಿಭಾಗದ ವ್ಯಾಪ್ತಿಯ ರೌಡಿಶೀಟರ್‌ಗಔ್ಠ ಮತ್ತು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದದವರ ಜತೆ ಪರೇಡ್‌ನಲ್ಲಿ ಮಾತನಾಡಿದ ಅವರು, ಮಟ್ಕಾ ದಂಧೆಯಿಂದ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ. ಎಷ್ಟೇ ದಾಳಿ ನಡೆಸಿ ಬಂಧಿಸಿದರೂ ಬೇಲ್ ಮೇಲೆ ಹೊರ ಬರುವ ಮಟ್ಕಾ ಏಜೆಂಟರು ಮತ್ತೆ ಚಾಳಿ ಮುಂದುವರಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಎಂದರು.

    ರೌಡಿಶೀಟರ್ ಗುಂಪಿನಲ್ಲಿದ್ದ ಮಟ್ಕಾ ಚೀಟಿ ಬರೆಯುವವರನ್ನು ಪ್ರತ್ಯೇಕವಾಗಿ ನಿಲ್ಲಿಸಿ ನೀವುಗಳು ದುಡಿಮೆ ಇ್ಲದೆ ಇಂತಹ ಕೆಲಸ ಮಾಡುತ್ತಿದ್ದೀರಾ ಎಂಬ ಆರೋಪಗಳು ಕೇಳಿಬಂದಿದ್ದು, ಮಾಡಲು ಬಹಳಷ್ಟು ಕೆಲಸಗಳಿವೆ. ಕೂಲಿ ಕೆಲಸ ಮಾಡಿ ಜೀವನ ರೂಪಿಸಿಕೊಳ್ಳಬಹುದು. ಪಾವಗಡ ತಾಲೂಕು ಜಿಲ್ಲಾ ಕೇಂದ್ರಕ್ಕೆ ದೂರವಿದೆ. ಯಾರೂ ಗಮನಹರಿಸುವುದ್ಲಿ ಎಂದು ಭಾವಿಸಿ ಮತ್ತೆ ನೀವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಪರಿಣಾಮ ನೆಟ್ಟಗಿರಲ್ಲ ಎಂದು ಖಡಕ್ ಎಚ್ಚರಿಸಿದರು.

    ಮಧುಗಿರಿ ಉಪವಿಭಾಗದಲ್ಲಿ ರೌಡಿಶೀಟರ್‌ಗಳಾಗಿ ಗುರುತಿಸಿಕೊಂಡಿರುವ ಕೆಲವರು ಈಗ ಸಮಾಜದಲ್ಲಿ ಸನ್ನಡತೆಯಿಂದ ಇರುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಸಂಗ್ರಹಿಸಿದ್ದು, ಉತ್ತಮ ನಡವಳಿಕೆ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಅಂತವರ ಹೆಸರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯಲು ಡಿವೈಎಸ್ಪಿ ಕೆ.ಜೆ.ರಾಮಕೃಷ್ಣ ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ.

    ರೌಡಿಶೀಟರ್‌ಗಳು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದರೂ ಸಮಾಜದಲ್ಲಿ ರೌಡಿಶೀಟರ್ ಎಂದು ಗುರುತಿಸಿಕೊಳ್ಳುತ್ತಿರುವುದರಿಂದ ನಿಮಗೆ ಅವಮಾನ ಆಗುವ ಸಂಭವ ಹೆಚ್ಚಾಗಿದ್ದು, ಸನ್ನಡತೆಯಿಂದ ಸಮಾಜದಲ್ಲಿ ಜೀವನ ನಡೆಸಲು ಅವಕಾಶ ನೀಡಲಾಗುತ್ತಿದೆ. ಪಟ್ಟಿಯಿಂದ ಹೆಸರು ತೆಗೆದವರು ಮತ್ತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ಪೊಲೀಸ್ ಇಲಾಖೆ ಅಂತವರ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ. ಅದೇ ಚಾಳಿ ಮುಂದುವರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಮ್ಮುಖದಲ್ಲಿ ಪೆರೇಡ್ ನಡೆಸಬೇಕಾದೀತು ಎಂದು ಎಚ್ಚರಿಸಿದರು.

    ಎಎಸ್‌ಪಿ ಉದೇಶ್, ಡಿವೈಎಸ್ಪಿ ಕೆ.ಜೆ ರಾಮಕೃಷ್ಣ, ಮಧುಗಿರಿ ಸಿಪಿಐ ಎಂ.ಎಸ್.ಸರ್ದಾರ್, ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಬಡವನಹಳ್ಳಿಯ ಪಿ.ಐ. ಹನುಮಂತರಾಯಪ್ಪ, ಪಾವಗಡದ ಸಿಪಿಐ ಲಕ್ಷ್ಮಿಕಾಂತ್, ತಿರುಮಣಿಯ ಸಿಪಿಐ ಕಾಂತಾರೆಡ್ಡಿ, ಪಿಎಸ್‌ಐಗಳಾದ ಮಂಗಳ ಗೌರಮ್ಮ, ಮಹಾಲಕ್ಷ್ಮಮ್ಮ, ನವೀನ್, ಮುತ್ತುರಾಜ್, ವೈ.ಎನ್. ಹೊಸಕೋಟೆಯ ಭಾರತಿ ಮತ್ತು ಸಿಬ್ಬಂದಿ ಇದ್ದರು.

    ನೆಮ್ಮದಿ ವಾತಾವರಣ ನಿರ್ಮಿಸಿಕೊಳ್ಳಿ: ರೌಡಿಶೀಟರ್‌ಗಳು ಪದೇಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮುಲಾಜ್ಲಿದೆ ಪರಿಣಾಮ ಎದುರಿಸಬೇಕಾಗುತ್ತದೆ. ಯಾವುದೋ ಸಂದರ್ಭದಲ್ಲಿ ರೌಡಿಶಿಟರ್‌ಗಳಾಗಿರುತ್ತೀರಿ, ಮುಂದಿನ ದಿನಗಳಲ್ಲಿ ಮತ್ತೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನಪರ್ಯಂತ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನೀವು ಮಾಡಿರುವ ತಪ್ಪಿನಿಂದ ನಿಮ್ಮ ಕುಟುಂಬದ ಸದಸ್ಯರು ತಲೆ ತಗ್ಗಿಸುವಂತಾಗಿದೆ. ಇದೆಲ್ಲ ಬಿಟ್ಟು ಕಷ್ಟಪಟ್ಟು ದುಡಿದು ಸಮಾಜದಲ್ಲಿ ಒಳ್ಳೆಯವರಂತೆ ಜೀವನ ನಡೆಸಿ ಕುಟುಂಬದೊಂದಿಗೆ ನೆಮ್ಮದಿಯ ವಾತಾವರಣ ನಿರ್ಮಿಸಿಕೊಳ್ಳಿ. ಅದು ಬಿಟ್ಟು ಹಳೆಯ ಚಾಳಿ ಮುಂದುವರಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಸ್‌ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts