ಬೆಂಗಳೂರು: ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪ್ರಕಾರ ನಡೆಸಲು ಸಿದ್ಧತೆ ನಡೆಸಬೇಕು. ಕೋರ್ಟ್ ವಿಚಾರ, ಹೆಚ್ಚುವರಿ, ಕಡ್ಡಾಯ ವರ್ಗಾವಣೆ ಈ ಎಲ್ಲ ವಿಷಯಗಳನ್ನು ಹೊಂದಿರುವ ಒಂದು ‘ಮಾಸ್ಟರ್ ಫೈಲ್’ ಅನ್ನು ಎಲ್ಲರೂ ರೂಪಿಸಿಟ್ಟಿಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಕರ ವರ್ಗಾವಣೆ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿತ್ತು. ಇದರಲ್ಲಿ ಜಿಲ್ಲಾ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವರ್ಗಾವಣೆ ಜಿಲ್ಲಾ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.
ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯಂತೆ ಕಾಲಕಾಲಕ್ಕೆ ಮಾಹಿತಿ ಪ್ರಕಟಿಸಬೇಕು. ವರ್ಗಾವಣೆ ವಿಚಾರವಾಗಿ ಅಧಿಸೂಚನೆ ಹೊರಡಿಸಿದ ದಿನದಿಂದ ವೇಳಾಪಟ್ಟಿ ಹೊರಡಿಸುವವರೆಗೂ ನಡೆದಿರುವ ಎಲ್ಲ ಪ್ರಕ್ರಿಯೆಗಳ ಬಗ್ಗೆ ಮಾಸ್ಟರ್ ಫೈಲ್‌ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ವರ್ಗಾವಣೆ ಕುರಿತು ಗೊಂದಲ ಬಂದ ತಕ್ಷಣದಲ್ಲಿ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಲ್ಲದೆ, ವರ್ಗಾವಣೆ ಕುರಿತು ಶಿಕ್ಷಕರಲ್ಲಿ ಗೊಂದಲಗಳು ಉದ್ಭವಿಸಿದರೆ ಅಥವಾ ಸಮಸ್ಯೆಗಳು ಎದುರಾದಾಗ ಅದನ್ನು ನಿವಾರಿಸಲು ಜಿಲ್ಲಾ ಉಪನಿರ್ದೇಶಕರು, ಜಂಟಿ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಬೇಕು. ಯಾವುದೇ ಕಾರಣಕ್ಕೂ ಶಿಕ್ಷಕರು ನೇರವಾಗಿ ರಾಜ್ಯ ಕಚೇರಿಯನ್ನು ಸಂಪರ್ಕಿಸುವಂತಿರಬಾರದು ಎಂಬುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಲು ವರದಿ ರೂಪಿಸಲು ಸೂಚನೆ
ಬಿಗ್ಬಾಸ್ನಲ್ಲಿ ಇಂದೇ ಎಲಿಮಿನೇಶನ್! ಮನೆಯಿಂದ ಹೊರಬಂದವರು ಇವರೇ ನೋಡಿ..
ರಸ್ತೆ ಮಧ್ಯೆಯೇ ದೊಡ್ಡ ಹೊಂಡ! ಕೇಜ್ರಿವಾಲ್ ನಾಡಿನ ಅವಸ್ಥೆ ಬಗ್ಗೆ ಟೀಕಿಸಿದ ಬಿಜೆಪಿ