More

    ಕಾಂಗ್ರೆಸ್ ಅವಧಿ ಭಾರೀ ಭ್ರಷ್ಟಾಚಾರ

    ಚಿತ್ರದುರ್ಗ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆರೋಪಿಸಿದರು.

    ಬಿಜೆಪಿ ಹಮ್ಮಿಕೊಂಡಿರುವ ಪ್ರಗತಿ ರಥ ಯಾತ್ರೆ ಎಲ್ಇಡಿ ವಾಹನಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿ, ಕುಡಿವ ನೀರಿನ ಘಟಕ ಹಗರಣದ ತನಿಖೆ ನಡೆಯುತ್ತಿದೆ ಎಂದರು.

    ರಾಜ್ಯ, ಕೇಂದ್ರ ಸರ್ಕಾರಗಳ ಯೋಜನೆ, ಸಾಧನೆಗಳು ಹಾಗೂ ಕಾಂಗ್ರೆಸ್ ಅವಧಿಯಲ್ಲಿನ ಹಗರಣಗಳನ್ನು ಜನರಿಗೆ ತಿಳಿಸಬೇಕಿದೆ ಎಂದು ತಿಳಿಸಿದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು, ಮಹಿಳೆಯರು, ವೃದ್ಧರು, ಯುವಜನರಿಗೆ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಬದುಕಿಗೆ ಸಹಕಾರಿಯಾಗಿದೆ. ವಿವಿಧ

    ಯೋಜನೆಗಳ ಮೂಲಕ ಸಾಲ ಒದಗಿಸಿ ಸ್ವಯಂ ಉದ್ಯೋಗಕ್ಕೆ ಒತ್ತು ನೀಡಲಾಗುತ್ತಿದೆ. ರೈತರಿಗೆ ಪ್ರತಿ ವರ್ಷ ಸಹಾಯ ಧನ, ಸಣ್ಣ ಹಿಡುವಳಿದಾರರಿಗೆ ಗಂಗ ಕಲ್ಯಾಣ, ಚೆಕ್ ಡ್ಯಾಂ, ಕೃಷಿ ಹೊಂಡಕ್ಕೆ ಸಹಾಯಧನ, ಹೈನುಗಾರಿಕೆಗೆ ಪ್ರೊತ್ಸಾಹ ಧನ ಇತ್ಯಾದಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ರಥಯಾತ್ರೆ ಆಯೋಜಿಸಲಾಗಿದೆ ಎಂದರು.

    2014ಕ್ಕಿಂತ ಮೊದಲು ಕಾಂಗ್ರೆಸ್ ದೇಶವನ್ನು ಹಾಳು ಮಾಡಿತ್ತು. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಯಾವುದೇ ಕ್ರಮ ವಹಿಸಿರಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುವರ್ಣಯುಗ ಪ್ರಾರಂಭವಾಗಿದೆ ಎಂದು ಹೇಳಿದರು.

    ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಾಲಯ್ಯ ಮಾತನಾಡಿ, ಪ್ರಗತಿ ರಥ ಪ್ರತಿ ಬೂತ್ ಮಟ್ಟದಲ್ಲಿ ಸಂಚರಿಸಲಾಗಿದೆ. ಕ್ಯೂರ್ ಕೋಡ್ ಮೂಲಕ ಪಕ್ಷದ ಪ್ರಣಾಳಿಕೆಗೆ ಸಲಹೆ ಸೂಚನೆ ನೀಡಬಹುದು ಎಂದರು. ಮುಖಂಡರಾದ ದಗ್ಗೆ ಶಿವಪ್ರಕಾಶ್, ಚಂದ್ರು ವಿಎಸ್‌ಹಳ್ಳಿ, ಚಂದ್ರಿಕಾ ಲೋಕನಾಥ್, ಶ್ರೀರಾಮ್, ವರುಣ್, ಮಲ್ಲಿಕಾರ್ಜುನ್, ನಾಗರಾಜ್ ಬೇಂದ್ರೆ, ಉಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts