More

    ಏ.14ರಂದು ಬಸರಾಳಿನಲ್ಲಿ ಸಾಮೂಹಿಕ ವಿವಾಹ: ಗ್ರಾಪಂ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮಾಹಿತಿ

    ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಏ.14ರಂದು ಉಚಿತವಾಗಿ 101 ಜೋಡಿಯ ಸಾಮೂಹಿಕ ಸರಳ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಬಸರಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ತಿಳಿಸಿದರು.
    ಮಹಾಲಿಂಗೇಗೌಡ ಮುದ್ದನಘಟ್ಟ ಫೌಂಡೇಷನ್ ಮೂಲಕ ನೂತನವಾಗಿ ನಿರ್ಮಿಸಿರುವ ತಾರಾ ಭವನ(ತಾಯಮ್ಮ ರಾಮೇಗೌಡ ಕಲ್ಯಾಣ ಮಂಟಪ) ಉದ್ಘಾಟನೆ ಅಂಗವಾಗಿ ಸರಳ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ವಧುವಿಗೆ ಸೀರೆ, ತಾಳಿ, ಕಾಲುಂಗುರ ಹಾಗೂ ವರನಿಗೆ ಪಂಚೆ, ಷರಟು, ಶಲ್ಯ, ವಾಚ್ ಅನ್ನು ಉಚಿತವಾಗಿ ನೀಡಲಾಗುವುದು. ಇದೇ ವೇಳೆ 3000ಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ. ವಧು-ವರರ ಕಡೆಯವರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    101 ಜೋಡಿಗಳ ಸಾಮೂಹಿಕ ಸರಳ ವಿವಾಹ ನಡೆಸುವುದು ನಮ್ಮ ಗುರಿ. ಈಗಾಗಲೇ 10ಕ್ಕೂ ಹೆಚ್ಚು ಜೋಡಿಗಳು ಹೆಸರು ನೋಂದಣಿ ಮಾಡಿಸಿಕೊಂಡಿವೆ. ಮಂಡ್ಯ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಬರುವ ಜೋಡಿಗಳು ಕೂಡ ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಬಹುದು. ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ವಯಸ್ಸಾಗಿರಬೇಕು. ಎರಡನೇ ಮದುವೆಗೆ ಅವಕಾಶವಿಲ್ಲ. ವಧು-ವರರು ತಮ್ಮ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್‌ಕಾರ್ಡ್ ಅಥವಾ ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ವಾಸಸ್ಥಳ ದೃಢೀಕರಣ ಪತ್ರ ತರಬೇಕು. ನೋಂದಣಿಗೆ ಮೊ.ಸಂ 9632719999 ಮತ್ತು 9632366667 ಸಂಪರ್ಕಿಸಬಹುದು ಎಂದು ವಿವರಿಸಿದರು.
    ಫೌಂಡೇಷನ್‌ನ ಪ್ರತಿನಿಧಿಗಳಾದ ಮೋಹನ್ ಮುದಿಗೌಡನಕೊಪ್ಪಲು, ಬೇಬಿ ಶಶಿಕುಮಾರ್, ಮಹೇಶ್, ವಿಶ್ವ ಸಾತನೂರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts