More

    ಸಾಮೂಹಿಕವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

    ಹೂವಿನಹಡಗಲಿ: ನವ ದಂಪತಿಗಳು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಹಿರಿಯರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಹಿರೇಮಠದ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

    ಮಾಗಳ ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಹಾಗೂ 43ನೇ ವರ್ಷದ ಗೋಣಿಬಸವೇಶ್ವರ ಸ್ವಾಮಿ ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
    ಇದನ್ನು ಓದಿ: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ದಿನಾಂಕ ಫಿಕ್ಸ್; ಚೆನ್ನೈನಲ್ಲೇ ನಡೆಯಲಿದೆ ವಿವಾಹ

    ಹಬ್ಬ, ಜಾತ್ರೆಗಳ ನೆಪದಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ. ಆಡಂಬರದ ಮದುವೆಗಳಿಗೆ ಸಾಕಷ್ಟು ಪ್ರಮಾಣದ ದುಂದು ವೆಚ್ಚವಾಗುತ್ತದೆ. ಆದರೆ ಸಾಮೂಹಿಕ ವಿವಾಹಗಳು ಅಂತಹವುಗಳಿಗೆ ಕಡಿವಾಣ ಹಾಕುತ್ತವೆ.

    ನೂತನ ಜೀವನ ಆರಂಭಿಸುತ್ತಿರುವ ದಂಪತಿಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿಸಬೇಕು. ಆದರ್ಶಗಳನ್ನು ಪಾಲಿಸುತ್ತ ಉತ್ತಮ ಜೀವನ ಸಾಗಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts