More

    ಎಂಎಸ್‌ಐಎಲ್ ಅಂಗಡಿ ಬೇರೆಡೆ ಸ್ಥಳಾಂತರಿಸಿ; ಮಸ್ಕಿ 5ನೇ ವಾರ್ಡ್ ನಿವಾಸಿಗಳ ಒತ್ತಾಯ

    ಮಸ್ಕಿ: ಪಟ್ಟಣದ 5ನೇ ವಾರ್ಡ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಯನ್ನು (ಎಂಎಸ್‌ಐಎಲ್) ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿ ಲಿಂಗಸಗೂರಿನ ಅಬಕಾರಿ ವೃತ್ತ ನಿರೀಕ್ಷಕ ಸಂತೋಷಗೆ ಶನಿವಾರ ಮನವಿ ಸಲ್ಲಿಸಿದರು.

    5ನೇ ವಾರ್ಡ್ ಪುರಸಭೆ ಸದಸ್ಯ ಶರಣಬಸವ ಸೊಪ್ಪಿಮಠ ಮಾತನಾಡಿ, ಎಂಎಸ್‌ಐಎಲ್ ಅಂಗಡಿ ಸುತ್ತ ವಿವಿಧ ಶಾಲೆ ಮತ್ತು ಕಾಲೇಜು ಇರುವುದರಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ವಾರ್ಡ್‌ನಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪಂಗಡದ ಜನರಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ಯದ ಅಂಗಡಿ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.

    ಬಸವರಾಜ ಬಾರಕೇರ್, ಕರಪ್ಪ, ಸರೋಜಮ್ಮ, ಬಾಲಮ್ಮ, ಬನೇಮ್ಮ, ಗದ್ದೆಮ್ಮ, ದೊಡ್ಡ ಬಸಮ್ಮ, ಆದಮ್ಮ, ರೇಣುಕಮ್ಮ, ಬಸಮ್ಮ, ಸಣ್ಣ ಬಸಮ್ಮ, ಹುಸೇನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts