More

    ರಥ ನಿರ್ಮಾಣದ ಸಾಗವಾನಿ ಕಟ್ಟಿಗೆ ಮೆರವಣಿಗೆ

    ಮಸ್ಕಿ: ಎರಡನೇ ಶ್ರೀಶೈಲ ಎಂದೇ ಖ್ಯಾತಿಯಾದ ಪಟ್ಟಣದ ಮಲ್ಲಿಕಾರ್ಜುನ ದೇವರ ನೂತನ ರಥ ನಿರ್ಮಾಣಕ್ಕೆ ಸಾಗವಾನಿ ಮರದ ಕಟ್ಟಿಗೆ ಮಸ್ಕಿ ಪಟ್ಟಣಕ್ಕೆ ತಂದಾಗ ಭ್ರಮರಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು.

    ಮೆರವಣಿಗೆಯಲ್ಲಿ ಗ್ರಾಮದ ಮುಖಂಡರಾದ ಮಹಾದೇವಪ್ಪಗೌಡ ಪಾಟೀಲ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮಲ್ಲಪ್ಪ ಕುಡತನಿ, ಸಿದ್ದಲಿಂಗಯ್ಯ ಗಚ್ಚಿನಮಠ, ಸಿದ್ದಲಿಂಗಯ್ಯ ಸೊಪ್ಪಿಮಠ, ಅಮರೇಶ ಮಸ್ಕಿ, ಬಸಪ್ಪ ಬ್ಯಾಳಿ, ವೆಂಕಟರಡ್ಡಿ ಹೂವಿನಬಾವಿ, ಶರಣಪ್ಪ ಹುಲ್ಲೂರು, ಶಿವಕುಮಾರ, ಪ್ರಕಾಶ ಮಸ್ಕಿ, ಆದಯ್ಯ ಸ್ವಾಮಿ ಕ್ಯಾತ್ನಟ್ಟಿ, ಸುಕಮುನಿಯಪ್ಪ ನಾಯಕ, ದೊಡ್ಡಪ್ಪ ಕಡಬೂರು, ಪ್ರಸನ್ನ ಪಾಟೀಲ, ಚೇತನ್ ಪಾಟೀಲ, ಚಂದಯ್ಯ ಅಮರಾವತಿ, ಶಂಕರಯ್ಯ ಸ್ವಾಮಿ, ನಾಯಗರಾಜ ಯಂಬಲದ, ಶರಣಯ್ಯ ಸೊಪ್ಪಿಮಠ ಇದ್ದರು. ಮಹಿಳೆಯರು ಕಳಸ ತೆಗೆದುಕೊಂಡು ಆಗಮಿಸಿದ್ದರು.

    ಹಿನ್ನಲೆ: ಪ್ರತಿವರ್ಷ ಭರತ ಹುಣ್ಣಿಮೆಯಂದು ಮಸ್ಕಿ ಮಲ್ಲಿಕಾರ್ಜುನ ದೇವರ ರಥೋತ್ಸವ ಜರುಗುತ್ತದೆ. ಸುಮಾರು 100 ವರ್ಷದ ಹಿಂದಿನ ರಥವನ್ನು ಪ್ರತಿವರ್ಷ ಭಕ್ತರು ಎಳೆಯುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ರಥ ಶಿಥಿಲವಾಗಿದ್ದು ಹೊಸ ರಥ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

    ಕಳೆದೆರಡು ತಿಂಗಳ ಹಿಂದೆ ಗ್ರಾಮದ ಮುಖಂಡರು, ಸಾರ್ವಜನಿಕರು ಪೂರ್ವಭಾವಿ ಸಭೆ ನಡೆಸಿ 1.20 ಕೋಟಿ ರೂ. ವೆಚ್ಚದ ನೂತನ ರಥ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಅದರ ಅಂಗವಾಗಿ ಪಟ್ಟಣಕ್ಕೆ ಶನಿವಾರ ರಥ ನಿರ್ಮಾಣದ ಸಾಗವಾನಿ ಮರದ ಕಟ್ಟಿಗೆ ತರಲಾಯಿತು. 2024ರ ಭರತ ಹುಣ್ಣಿಮೆಯಂದು ನೂತನ ರಥ ಎಳೆಯುವ ಸಂಕಲ್ಪದೊಂದಿಗೆ ರಥ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts