More

    ಮಸ್ಕಿಯಲ್ಲಿ ತೊಗರಿ ಖರೀದಿ ಆರಂಭ; ನೋಂದಣಿ ಕ್ರಮ ಸಂಖ್ಯೆಗೆ ಅನುಗುಣವಾಗಿ ಖರೀದಿ

    ಮಸ್ಕಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಂಪಾಪತಿ ಹೂವಿನಬಾವಿ ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿ, ರೈತರಿಗೆ ಅನೂಕೂಲವಾಗಲೆಂದು ಸರ್ಕಾರ ತೊಗರಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ಆರಂಭಿಸಿದೆ. ಈಗಾಗಲೇ ನೋಂದಣಿ ಮಾಡಿಸಿಕೊಂಡವರ ತೊಗರಿಯನ್ನು ಖರೀದಿ ಮಾಡಲಾಗುವುದು. ಕ್ರಮ ಸಂಖ್ಯೆ ಅನುಗುಣವಾಗಿ ಖರೀದಿ ಕೇಂದ್ರಕ್ಕೆ ಧಾನ್ಯ ತೆಗೆದುಕೊಂಡು ಬರಬೇಕು ಎಂದರು.

    ಸರ್ಕಾರ ತೊಗರಿಗೆ 300 ರೂ. ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ತೊಗರಿ ಕೇಂದ್ರದಲ್ಲಿ 6,100 ರೂ. ನಿಗದಿಯಾಗಿದೆ. ಕೃಷಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತೊಗರಿ ಖರೀದಿ ಕೇಂದ್ರದ ಅಧಿಕಾರಿ ಹಾಗೂ ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಿಇಒ ಬಿ.ಜಿ.ನಾಯಕ ಮಾತನಾಡಿ, ಮಸ್ಕಿಯ ತೊಗರಿ ಖರೀದಿ ಕೇಂದ್ರದಲ್ಲಿ 1,000 ರೈತರು ನೋಂದಣಿ ಮಾಡಿಸಿದ್ದಾರೆ. ಅಂದಾಜು 25 ಸಾವಿರ ಚೀಲಗಳು ಬೇಕಾಗುತ್ತದೆ. ಸದ್ಯಕ್ಕೆ 4 ಸಾವಿರ ಚೀಲಗಳನ್ನು ತರಲಾಗಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

    ಉಪಾಧ್ಯಕ್ಷ ದುರಗಪ್ಪ, ನಿರ್ದೇಶಕರಾದ ಬಸವರಾಜ ಮಿಟ್ಟಿಮನಿ, ಖಾದರಬೀ, ದೇವಣ್ಣ ನಾಯಕ, ಎಪಿಎಂಸಿ ನಿರ್ದೇಶಕ ಬಸಪ್ಪ ಬ್ಯಾಳಿ, ಪುರಸಭೆ ಸದಸ್ಯ ನೀಲಕಂಠಪ್ಪ ಭಜಂತ್ರಿ ಸೇರಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts