More

    ಮಸ್ಕಿಯಲ್ಲಿ ಬ್ಯಾಂಕ್ ನೌಕರನಿಗೆ ಕರೊನಾ ಸೋಂಕು, ತಾಲೂಕಿನ ವಿವಿಧೆಡೆ ಓಡಾಟ

    ಮಸ್ಕಿ: ಪಟ್ಟಣದ ಕೆನರಾ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಮಂಗಳವಾರ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಆತಂಕ ಮನೆ ಮಾಡಿದೆ. ಬೆಳಗ್ಗೆ ತಾಲೂಕು ಆಡಳಿತದ ಗಮನಕ್ಕೆ ಬರುತ್ತಿದ್ದಂತೆ ಕೆನರಾ ಬ್ಯಾಂಕ್ ಬಂದ್ ಮಾಡಿಸಲಾಯಿತು. ಬ್ಯಾಂಕ್ ಹಾಗೂ ಅದಕ್ಕೆ ಹೊಂದಿಕೊಂಡ ರಸ್ತೆ, ಸಂತೆ ಬಜಾರ ಹಾಗೂ ಸೋಂಕಿತ ವ್ಯಕ್ತಿ ಇದ್ದ ಮನೆಯ ಮುಂಭಾಗದಲ್ಲಿ ಸ್ಯಾನಿಟೈಜೇಷನ್ ಮಾಡಲಾಯಿತು.

    ಸೋಂಕಿತ ವ್ಯಕ್ತಿ ಬ್ಯಾಂಕ್‌ನಲ್ಲಿ ಕೃಷಿ ಸಾಲ ವಿಭಾಗದ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಕರ್ತವ್ಯದಲ್ಲಿದ್ದಾಗ ಹಾಲಾಪುರ, ನಾರಯಣನಗರ ಕ್ಯಾಂಪ್, ಜೋಳದರಾಶಿ ಕ್ಯಾಂಪ್ ಅಲ್ಲದೆ ಬೇರೆ ಬೇರೆ ಗ್ರಾಮಗಳಿಗೆ ತೆರಳಿ ರೈತರನ್ನು ಸಂಪರ್ಕಿಸಿದ್ದಾನೆ ಎನ್ನಲಾಗುತ್ತಿದೆ.

    ಸೋಂಕಿತ ವ್ಯಕ್ತಿಗೆ ಹತ್ತು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಖಾಸಗಿ ವೈದ್ಯರಲ್ಲಿ ಮಾತ್ರೆ ತೆಗೆದುಕೊಂಡಿದ್ದಾನೆ. ಅಲ್ಲದೆ ಜಿಮ್‌ನಲ್ಲಿ ಹೆಚ್ಚು ದೇಹ ದಂಡಿಸಿದ್ದಕ್ಕೆ ಜ್ವರ ಬಂದಿರಬಹುದು ಎಂದು ಚಿಕಿತ್ಸೆ ಪಡೆದಿದ್ದಾನೆ. ಜ್ವರ ನಿಲ್ಲದೆ ಹೋದಾಗ ರಜೆ ಹಾಕಿ ಸ್ವಗ್ರಾಮ ಕುಷ್ಟಗಿ ತಾಲೂಕಿನ ಕೇಸೂರಿಗೆ ತೆರಳಿದ್ದಾರೆ. ನಂತರ ಕೋವಿಡ್ ಪರೀಕ್ಷೆ ಒಪಡಿಸಿದಾಗ ಸೋಂಕು ದೃಢಪಟ್ಟಿದೆ. ಸೊಂಕಿತ ವ್ಯಕ್ತಿಯ ಜತೆಗಿದ್ದ ಬ್ಯಾಂಕ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುವ ಬಗ್ಗೆ ಅಲ್ಲದೆ ಸೋಂಕಿತ ವ್ಯಕ್ತಿ ಯಾರ‌್ಯಾರ ಸಂಪರ್ಕಕ್ಕೆ ಬಂದಿದ್ದಾನೆ ಎಂಬ ಕುರಿತು ಮಾಹಿತಿ ಕಲೆ ಹಾಕಲಾಗುತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts